ಎಲೇರಾಂಪುರ ಶ್ರೀಗಳ 37ನೇ ಹುಟ್ಟುಹಬ್ಬ ಕಾರ್ಯಕ್ರಮ

ಕೊರಟಗೆರೆ

    ನಮ್ಮಜೀವಿತನ ಪ್ರತಿಯೊಂದುಜನ್ಮದಿನವನ್ನೂ ಸಾರ್ಥಕ ಮಾಡಿಕೊಳ್ಳಬೇಕು ಇದನ್ನು ಪ್ರತಿಯೊಬ್ಬರೂ ಪಾಲಸಿಕೊಂಡು ಬರಬೇಕು ಎಂದು ಗುಬ್ಬಿ ತಾಲೂಕಿನ ಕೋಡಿಹಳ್ಳಿ ಹೆಳವ ಪೀಠದ ಪೀಠಾಧ್ಯಕ್ಷ ಬಸವ ಬೃಗೇಶ್ವರ ಶ್ರೀಗಳು ಹೇಳಿದರು. ತಾಲೂಕಿನ ಎಲೇರಾಂಪುರದಲ್ಲಿನ ಡಾ. ಹನುಮಂತನಾಥ ಸ್ವಾಮೀಜಿಗಳ 37 ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

     ಶ್ರೀಗಳು ಎಂದರೆ ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಲ್ಲ ಹೇಗೆಲ್ಲಾ ಸಮಾಜಅಭ್ಯದಯಕ್ಕೆ ಶ್ರಮಿಸಬಹುದು ಎಂಬುದಕ್ಕೆ ಡಾ. ಹನುಮಂತನಾಥ ಶ್ರೀಗಳು ಅನುಕರಣಿಯ ಎಂದರು.ಜಗತ್ತಿನಲ್ಲಿ ಸೃಷ್ಟಿಯಾಗುವ ಪ್ರತಿಯೊಂದು ಜೀವಿಯೂ ಸಹ ಒಂದು  ಕಾರ್ಯನಿಮಿತ್ತ ಜಗತ್ತಿಗೆ ಬರಲಿದ್ದು ಅದು ತನ್ನ ಸೇವೆಯನ್ನು ಮಾಡಿ ಬದುಕನ್ನು ಸಾರ್ಥಕ ಮಾಡಿಕೊಳ್ಳ ಬೇಕಿದ್ದು ಅದು ಸನ್ಯಾಸಿ ಯಾಗಿಯಾಗಲೀ , ಸಾಮಾನ್ಯ ಮನುಷ್ಯ ಅಥವಾ ಯಾವುದೇ ಪ್ರಾಣಿಯಾದರೂ ಇದು ಸೃಷ್ಠಿಯ ನಿಯಮ ಎಂದು ಕುಣಿಗಲ್‍ ಅರೇಶಂಕರ ಪೀಠಾಧ್ಯಕ್ಷ ಚೈತನ್ಯ ಸಿದ್ದರಾಮ ಶ್ರೀಗಳು ಹೇಳಿದರು.

      ಸಂಸದ ಜಿ.ಎಸ್ ಬಸವರಾಜು ಮಾತನಾಡಿ ಹನುಮಂತನಾಥ ಶ್ರೀಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗದೇ ಪ್ರತಿಯೊಂದು ಸಮುದಾಯದವರನ್ನು ಒಗ್ಗೂಡಿಸುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ ಅದೇ ರೀತಿ ಪ್ರತಿಯೊಂದು ಸಾಮಾಜಿಕವಾಗಿ ಅವರ ಸೇವೆಯಲ್ಲಿ ನಿರಂತರವಾಗಿದ್ದಾರೆ ಎಂದು ತಿಳಿಸಿದರು.

       ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಮಾತನಾಡಿ ಹಿಂದಿನಿಂದಲೂ ಮಠದಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಗಳು ಉಳಿಯುತ್ತಿದ್ದು ಅದೇರೀತಿ ಶಿಕ್ಷಣ ಸಂಸ್ಥೆಗಳು ಸೃಷ್ಠಿಯಾಗಿ ಮಠ ಇನ್ನೂ ಹೆಚ್ಚಿನ ಪ್ರಬುದ್ಧಮಾನಕ್ಕೆ ಬರಲಿ ಎಂದರು.

ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ:-

     ಮಹಾಗಣಪತಿ, ಶ್ರೀ ಆಂಜನೇಯ ಸ್ವಾಮಿ, ಆದಿತ್ಯಾದಿ ನವಗ್ರಹ ಸಮೇತ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಶ್ರೀಗಳ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಲಾಗಿತ್ತು. ಮಠಕ್ಕೆ ಭೇಟಿ ನೀಡುವ ಭಕ್ತರಿಗೆ ವಿಶೇಷ ರೀತಿಯಲ್ಲಿ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಗಿರೀಶ್‍ ಕಾರ್ನಾಡ್‍ಗೆ ಸಂತಾಪ

      ಜ್ಞಾನಪೀಠ ಪುರಸ್ಕೃತ ಗಿರೀಶ್‍ ಕಾರ್ನಾಡ್ ಅಕಾಲಿಕ ಸಾವಿಗೆ ಡಾ. ಹನುಮಂತನಾಥ ಸ್ವಾಮೀಜಿ ಸಂತಾಪ ಸೂಚಿಸಿದರು. ಮಠದ ವಿದ್ಯಾರ್ಥಿಗಳು ಮತ್ತು ಭಕ್ತರೊಂದಿಗೆ ಮೌನಾಚರಣೆ ಮಾಡುವುದರೊಂದಿಗೆ ಅವರು ಸಾಹಿತ್ಯ, ನಾಟಕ, ಕಲೆಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.

     ಚಿತ್ರದುರ್ಗದ ಬೋವಿ ಗುರುಪೀಠ ಇಮ್ಮುಡಿ ಸಿದ್ದರಾಮೇಶ್ವರ ಸ್ವಾಮೀಜಿ, ವನಸಿರಿ ಆಶ್ರಮ ಶಂಕರಆರಾಧ್ಯ, ಅರಸೀಕೆರೆ ಕಾಳೀಮಠದ ಪೀಠಾಧ್ಯಕ್ಷ ಋಷಿಕುಮಾರ ಸ್ವಾಮೀಜಿ, ಚಿತ್ರದುರ್ಗ ಕಬೀರಾ ನಂದಸದ್ಗುರು ಶಿವಲಿಂಗಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು. ಕುಂಚ ಪರಿವಾರ ಅಧ್ಯಕ್ಷ ಶಿವಭದ್ರಯ್ಯ, ಕರ್ನಾಟಕ ರಾಜ್ಯ ಕುಂಚಿಟಿಗರ ಸಂಘದ ಅಧ್ಯಕ್ಷ ವಿನಯ್ ಪೂಜಾರಿ, ಮಡಗಶಿರಾ ಕುಂಚಿಟಿಗರ ಸಂಘದ ಅಧ್ಯಕ್ಷ ಅನಂತರಾಜು, ತುಮುಲ್ ಮಾಜಿ ಅಧ್ಯಕ್ಷ ನಾಗೇಶ್ ಬಾಬು, ನಿರ್ದೇಶಕ ಈಶ್ವರಯ್ಯ, ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಹೆಚ್.ಕೆ ಮಹಾಲಿಂಗಪ್ಪ, ತಾ.ಪಂ ಮಾಜಿ ಅಧ್ಯಕ್ಷ ಕೆಂಪರಾಮಯ್ಯ, ಮಧುಗಿರಿ ತಾ.ಪಂ ಅಧ್ಯಕ್ಷ ಇಂದ್ರಮ್ಮ, ಕೋಳಾಲ ಗ್ರಾ.ಪಂ ಅಧ್ಯಕ್ಷ ಹನುಮಂತರಾಯಪ್ಪ, ಎಲೆರಾಂಪುರ ಗ್ರಾ.ಪಂ ಅಧ್ಯಕ್ಷ ಸೀತಾರಾಂ ಮುಖಂಡರಾದ ಸುವರ್ಣಮ್ಮ, ನರಸಿಂಹಮೂರ್ತಿ, ನರಸಿಂಹರಾಜು, ವೇಣು, ಕುಂಚ ಮಾರುತಿ, ನಾಗೇಶ್ ಸೇರಿದಂತೆ ಇತರರು ಇದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link