ಬೆಂಗಳೂರು
ಪ್ರೀತಿಸಿ ವಿವಾಹವಾಗಿದ್ದ ಪತಿಯ ವರ್ತನೆಯಿಂದ ಬೇಸತ್ತು ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ನೇಣಿಗೆ ಶರಣಾಗಿರುವ ದುರ್ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಖಾಸಗಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದ ಪುಣ್ಯ (20)ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ .ಖಾಸಗಿ ಕೇಂಬ್ರಿಡ್ಜ್ ಶಾಲೆಯ ವಾಹನ ಚಾಲಕನಾಗಿದ್ದ ಮಣಿಕಂಠನನ್ನು ಪ್ರೀತಿಸಿ, ಕಳೆದ ಮಾರ್ಚ್ನಲ್ಲಿ ಪುಣ್ಯ ವಿವಾಹವಾಗಿದ್ದನು.
ನಂತರ ದಂಪತಿ ಆರ್ಪಿಸಿ ಲೇಔಟ್ನ 7ನೇ ಕ್ಸಾಸ್ನಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು.ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಇತ್ತೀಚೆಗೆ ಕಲಹ ಉಂಟಾಗಿತ್ತು. ಮಣಿಕಂಠ ಬೇರೊಬ್ಬರ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಪುಣ್ಯ ಜಗಳ ಮಾಡುತ್ತಿದ್ದು, ಈ ಸಂಬಂಧ ಎರಡು ಕುಟುಂಬಗಳ ನಡುವೆ ರಾಜೀ ಪಂಚಾಯ್ತಿ ಕೂಡ ನಡೆದಿತ್ತು.
ಆದರೂ ಮಣಿಕಂಠ ತನ್ನ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡಿರಲಿಲ್ಲ. ಇದರಿಂದ ನೊಂದ ಪುಣ್ಯ ಶನಿವಾರ ರಾತ್ರಿ 9ರ ವೇಳೆ ನೇಣಿಗೆ ಶರಣಾಗಿದ್ದಾರೆ. ಮಣಿಕಂಠನ ಕಿರುಕುಳದಿಂದ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪುಣ್ಯ ಅವರ ತಂದೆ ಶಿವಕುಮಾರ್ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ವಿಜಯನಗರ ಪೊಲೀಸರು ಮಣಿಕಂಠನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಡಿಸಿಪಿ ರವಿ ಚನ್ನಣ್ಣನವರ್ ತಿಳಿಸಿದ್ದಾರೆ.
ಮಾದಕ ವ್ಯಸನಿ ನೇಣು
ಕುಡಿತ ಹಾಗೂ ಮಾದಕ ವ್ಯಸನದ ಚಟ ಹೊಂದಿದ್ದ ಯುವಕನೊಬ್ಬ ನೇಣಿಗೆ ಶರಣಾಗಿರುವ ದುರ್ಘಟನೆ ಕೆಆರ್ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪ ನಗರದಲ್ಲಿ ಶನಿವಾಋ ರಾತ್ರಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಅಯ್ಯಪ್ಪ ನಗರದ 2ನೇ ಮುಖ್ಯರಸ್ತೆಯ ಮಣಿ (26)ಎಂದು ಗುರುತಿಸಲಾಗಿದೆ.ಗಾರೆ ಕೆಲಸ ಮಾಡುತ್ತಿದ್ದ ಮಣಿ ಕುಡಿತದ ಜೊತೆಗೆ ಗಾಂಜಾ, ಇನ್ನಿತರ ಮಾದಕ ವ್ಯಸನಿಯಾಗಿದ್ದು, ಮೂರು ದಿನಗಳ ಹಿಂದಷ್ಟೇ ಆತ್ಮಹತ್ಯೆ ಯತ್ನ ನಡೆಸಿದ್ದ.
ಮನೆಯಲ್ಲಿ ರಾತ್ರಿ 8.30ರ ವೇಳೆ ಯಾರೂ ಇಲ್ಲದ್ದನ್ನು ನೋಡಿಕೊಂಡು ಕುಡಿತದ ಅಮಲಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಕೆ.ಆರ್. ಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








