ಕೇಂದ್ರ ಸರ್ಕಾರದ ವಿರುಧ್ಧ ತೀವ್ರ ಅಸಮಾಧಾನ ಹೊರ ಹಾಕಿದ ಈಶ್ವರ ಖಂಡ್ರೆ

ಬೆಂಗಳೂರು:

    ಕೋವಿಡ್ -19 ಸಾಂಕ್ರಾಮಿಕದಿಂದ ಮೃತಪಟ್ಟ ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ಸುರೇಶ್ ಅಂಗಡಿ ಅವರ ಮೃತದೇಹವನ್ನು ಅವರ ಸ್ವಂತ ಊರಿಗೆ ತಂದು ಲಿಂಗಾಯಿತ ಸಂಪ್ರದಾಯದ ರೀತ್ಯ ಅಂತಿಮ ಸಂಸ್ಕಾರವನ್ನೂ ಮಾಡಲು ಅವಕಾಶ ದೊರಕದೆ ಇರುವುದು ಅತೀವ ನೋವು ತಂದಿದೆ.

   ಜಾತಸ್ಯಹಿ ಧ್ರುವೋ ಮೃತ್ಯೂಹು ಹುಟ್ಟಿದವರು ಸಾಯಲೇ ಬೇಕು. ಆದರೆ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಆಯಾ ಧರ್ಮದ ಧಾರ್ಮಿಕ ವಿಧಿ ವಿಧಾನಗಳ ರೀತ್ಯ ನಡೆಸಬೇಕಾದ್ದು ಮಾನವೀಯತೆ. ಕೊನೆಯಬಾರಿಗೆ ಮುಖದರ್ಶನವೂ ಸಿಗದಿದ್ದರೆ ಅವರ ಕುಟುಂಬದವರು, ಬಂಧು, ಮಿತ್ರರಿಗೆ ಆಗುವ ನೋವು ಹೇಳತೀರದಂತಾಗುತ್ತದೆ.

   ಸಾಮಾನ್ಯವಾಗಿ ಮೃತಪಟ್ಟ ಕೆಲವು ಗಂಟೆಗಳ ಬಳಿಕ ದೇಹದಿಂದ ಸೋಂಕು ಹರಡುವುದಿಲ್ಲ ಎಂದು ಕೆಲವು ತಜ್ಞರು ಹೇಳುತ್ತಾರೆ. ಆದಾಗ್ಯೂ ಸೋಂಕು ಹರಡದ ರೀತಿ ಮುಖ ಮಾತ್ರ ಕಾಣುವಂತೆ ದೇಹವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ, ಗಾಜಿನ ಪೆಟ್ಟಿಗೆಯಲ್ಲಿಟ್ಟು ಗಾಳಿಯೂ ಹೋಗದರೀತಿ (ಏರ್ ಟೈಟ್) ಸೀಲ್ ಮಾಡಿ ವಿಮಾನದಲ್ಲಿ ಆಗದಿದ್ದರೆ, ರಸ್ತೆ ಮೂಲಕವೇ ಕಳುಹಿಸಬಹುದಾಗಿತ್ತು. ಸರ್ಕಾರ ಧಾರ್ಮಿಕ ವಿಧಿಗಳಿಗೆ ಚ್ಯುತಿಯಾಗದ ರೀತಿ, ಭಾವನೆಗಳಿಗೆ ಘಾಸಿಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕಾಗಿತ್ತು. ಕೇಂದ್ರ ಸರ್ಕಾರದ ಈ ತೀರ್ಮಾನ ಅಮಾನವೀಯವಾದ ಕೃತ್ಯ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap