ಗ್ರಂಥಾಲಯಕ್ಕೆ ಅಗತ್ಯ ಪುಸ್ತಕ : ಪ್ರೊ.ಎಸ್.ಜಿ.ಸಿದ್ದರಾಮಯ್ಯ

ತುರುವೇಕೆರೆ

     ಕನ್ನಡ ಪ್ರಾಧಿಕಾರದಿಂದ ತುರುವೇಕೆರೆ ಕನ್ನಡ ಸಾಹಿತ್ಯ ಪರಿಷತ್‍ನ ನೂತನ ಕಟ್ಟಡದ ಗ್ರಂಥಾಲಯದ ಉದ್ದೇಶಕ್ಕಾಗಿ ಅಗತ್ಯವಿರುವ ಎಲ್ಲಾ ಸಾಹಿತ್ಯದ ಪುಸ್ತಕಗಳನ್ನು ದೊರಕಿಸಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಪ್ರೊ. ಸಿದ್ದರಾಮಯ್ಯ ತಿಳಿಸಿದರು.

       ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಪರಿಷತ್‍ನ ಕಟ್ಟಡ ಪ್ರಗತಿಯನ್ನು ಪರಿವೀಕ್ಷಿಸಿ ಸಂತಸ ವ್ಯಕ್ತಪಡಿಸಿ ತಾ|| ಅಧ್ಯಕ್ಷರು ನೀಡಿದ ಮನವಿಯ ಸ್ವೀಕರಿಸಿ ಮಾತನಾಡಿದ ಅವರು, ಪ್ರಾಧಿಕಾರ ಅನುದಾನದ ಕೊರತೆಯನ್ನು ಎದುರಿಸುತ್ತಿದೆ. ಸಾಧ್ಯವಿರುವ ನೆರವು ಆರ್ಥಿಕ ವರ್ಷದಲ್ಲಿ ಬರುವ ಅನುದಾನವನ್ನು ಅವಲಂಬಿಸಿರುತ್ತದೆ. ಆದರೂ ಸಹಾ ಇಲ್ಲಿನ ಸಾಹಿತ್ಯ ಪರಿಷತ್ ಸದಭಿರುಚಿಯ ಓದುಗರಿಗಾಗಿಯೇ ತೆರೆಯುತ್ತಿರುವುದರಿಂದ ಗ್ರಂಥಾಲಯಕ್ಕೆ ಸಾಕಷ್ಟು ಉತ್ತಮ ಪುಸ್ತಕಗಳನ್ನು ದೊರಕಿಸಿಕೊಡಲಾಗುವುದು ಎಂದರು.

       ಈ ಸಂದರ್ಭದಲ್ಲಿ ಗಣಕ ಪರಿಷತ್ ಕಾರ್ಯದರ್ಶಿ ಜಿ.ಎಸ್.ನರಸಿಂಹಮೂರ್ತಿ, ಪಂಡಿತರಾಧ್ಯ, ಕ.ಸಾ.ಪ ತಾ||. ಅಧ್ಯಕ್ಷ ನಂ.ರಾಜು, ಗೌರವಾಧ್ಯಕ್ಷ ಪ್ರೊ. ಪುಟ್ಟರಂಗಪ್ಪ, ಸಮಿತಿಯ ಆನಂದ್ ವಾಡೇಕರ್, ತಾ.ಪಂ. ಮಾಜಿ ಸದಸ್ಯ ಮಲ್ಲೇಶ್, ದಂಡಿನಶಿವರ ಘಟಕದ ಕ.ಸಾ.ಪ. ಅಧ್ಯಕ್ಷ ಭೋಜರಾಜ್, ಆರ್.ಸತ್ಯನಾರಾಯಣ್, ದಿನೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap