ತಿಪಟೂರು :
ಸೈನಿಕರುದೇಶದ ವಿರೋಧಿ ಶತ್ರುಗಳ ಜೊತೆ ಹೋರಾಡುತ್ತಿರುವಾಗ ಕೋವಿಡ್-19ರ ವಿರುದ್ಧ ಹೋರಾಡುತ್ತಿರುವ ಪೌರಕಾರ್ಮಿಕರಕಾರ್ಯ ಶ್ಲಾಘನೀಯವಾದುದುಎಂದುತಿಪಟೂರುರೆಡ್‍ಕ್ರಾಸ್ ಸಂಸ್ಥೆಯಅಧ್ಯಕ್ಷಡಾ. ಸಂಜಯ್ ತಿಳಿಸಿದರು.
ನಗರಸಭೆ ಆವರಣದಲ್ಲಿ ಇಂದು ರೆಡ್‍ಕ್ರಾಸ್ ಮತ್ತು ಹೈಡಲ್ ಬರ್ಗ್ ಸಿಮೆಂಟ್ ಸಂಸ್ಥೆಗಳ ವತಿಯಿಂದ ಪೌರಕಾರ್ಮಿಕರಿಗೆ ಮತ್ತು ಸವಿತಾ ಸಮಾಜದಕ್ಷೌರಿಕರಿಗೆ ದಿನಸಿಕಿಟ್ ವಿತರಿಸಿ ಮಾತನಾಡಿದಅವರು ಕೋವಿಡ್-19ಗೆ ಎಲ್ಲರು ಹೆದರಿ ಮನೆ ಸೇರಿದ ಸಂದರ್ಭದಲ್ಲಿಮಾತನಾಡಿದಅವರು ನಿಜವಾದಕೊರೊನಾ ಸೌನಿಕರೆಂದರೆ ಪೌರಕಾರ್ಮಿಕರು.
ಕೊರೊನಾದಂತಹ ಕಠಿಣ ಸಂದರ್ಭದಲ್ಲಿ ಕೆಲ ಇಲಾಖೆಯ ಅಧಿಕಾರಿಗಳನ್ನು ಬಿಟ್ಟರೆಎಲ್ಲಾ ಅಧಿಕಾರಿಗಳು ನೌಕರರು ಮನೆಸೇರಿದಾಗ ನಾವಿರುವುದೇ ನಿಮ್ಮ ಸೇವೆ ಮಾಡಲು ಎಂದು ತಮ್ಮ ಆರೋಗ್ಯವನ್ನೆ ಲೆಕ್ಕಿಸದೇ ಮನೆಮನೆ ಮತ್ತು ನಗರದತ್ಯಾಜ್ಯವನ್ನುತೆಗೆದು ನಮಗೆ ಕೊರೊನಾವಿರಲಿ ಇನ್ನಿತರೆ ರೋಗಗಳು ಹರಡದಂತೆ ಸೇವೆಮಾಡುತ್ತಿರುವ ನಿಜವಾದ ಸ್ವಚ್ಚತಾ ಸೈನಿಕರಾಗಿದುಡಿಯುತ್ತಿರುವ ಪೌರಕಾರ್ಮಿಕರುತಮ್ಮಆರೋಗ್ಯದಕಡೆಯು ಗಮನ ಹರಿಸಬೇಕು.
ಮುಖ್ಯವಾಗಿ ಸಕ್ಕರೆ ಕಾಯಿಲೆ ಇಂದ ಬಳಲುತ್ತಿರುವವರು ಕಣ್ಣಿನಆರೋಗ್ಯವನ್ನು ಪ್ರತಿ 6 ತಿಂಗಳಿಗೊಮ್ಮೆ ಕಡ್ಡಾಯವಾಗಿ ಪರೀಕ್ಷಿಸಿಕೊಳ್ಳಿ.ಇಂದು ಬೆಳಗ್ಗೆ ನಮ್ಮಆಯುರ್ವೇದಆಸ್ಪತ್ರೆಯಿಂದಕೊಟ್ಟಿರುವ ಕಿಟ್‍ಗಳನ್ನು ಸೂಕ್ತವಾಗಿ ಬಳಸಿಕೊಂಡು ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ಪೌರಕಾರ್ಮಿಕರಿಗೆಕರೆನೀಡಿದರು.
ತುಮಕೂರು ರೆಡ್ ಕ್ರಾಸ್‍ನ ಕೋ ಆರ್ಡಿನೇಟರ್ ಉಮೇಶ್ ಮಾತನಾಡಿ ರೆಡ್ ಕ್ರಾಸ್ ಸಂಸ್ಥೆಯು ಸಾಮಾಜಿಕವಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಸಮಾಜದ ಉದ್ದಾರಕ್ಕೆ ಶ್ರಮಿಸುತ್ತಿದ್ದು.ಕೊರೊನಾ ಸಮಯದಲ್ಲಿ ಬಡವರು ನಿರ್ಗತಿಕರಿಗೆ ಸಹಾಯ ಮಾಡಬೇಕೆಂದು ಹೈಡಲ್‍ಬರ್ಗ್ ಸಿಮೆಂಟ್‍ನವರು ತಾವು ಮಾರಾಟಮಾಡುವ ಪ್ರತಿಚೀಲದಿಂದಲು 1 ರೂತೆಗೆದು ಬಡವರಿಗೆ ದಿನಸಿಕಿಟ್ ಕೊಡುತ್ತಿರುವುದು ತುಂಬಾ ಒಳ್ಳೆಯ ಕೆಲಸ ಇದೇರೀತಿ ಎಲ್ಲಾ ಕಂಪನಿಗಳು ತಾವು ತೆಗೆದುಕೊಳ್ಳುವ ಲಾಭದಲ್ಲಿ ಇಂತಿಷ್ಟು ತೆಗೆದಿಟ್ಟರೆ ಸಮಾಜದಲ್ಲಿ ಸಮಾನತೆ ನೆಲೆಸಲು ಸಹಕಾರವಾಗುತ್ತದೆಂದು ಕರೆ ನೀಡಿದರು.
ನಗರಸಭೆ ಪೌರಾಯುಕ್ತ ಉಮಾಕಾಂತ್ ಮಾತನಾಡಿ ಪೌರಕಾರ್ಮಿಕರ ಶ್ರಮವನ್ನು ಗುರುತಿಸಿ ಹಲವಾರು ಸಂಸ್ಥೆಯವರು ಸಹಾಯ ಹಸ್ತವನ್ನು ನೀಡುತ್ತಾ ಪೌರಕಾರ್ಮಿಕರ ಮನೋಸ್ತೈರ್ಯ ಮತ್ತು ಮನೋಬಲವನ್ನು ತುಂಬುತ್ತಿರುವುದರಿಂದ ಪೌರಕಾರ್ಮಿಕರು ಇನ್ನಷ್ಟು ಹುಮ್ಮಸ್ಸಿನಿಂದ ಕೆಲಸಮಾಡಲು ಸಹಾಯಕವಾಗುತ್ತದೆಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಿಪಟೂರು ರೆಡ್‍ಕ್ರಾಸ್‍ನ ಪದಾಧಿಕಾರಿಗಳು, ಐಡಲ್ ಬರ್ಗ್ ಸಿಮೆಂಟ್ ಸಂಸ್ಥೆಯ ನೌಕರರು ಮತ್ತು ಸಿಮೆಂಟ್ ವ್ಯಾಪಾರಸ್ಥರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ