ಬೆಂಗಳೂರು
ಸರ್ಕಾರಿ ಕಚೇರಿಗಳೂ, ವಿಶ್ವವಿದ್ಯಾನಿಲಯಗಳು, ಶಾಲಾ-ಕಾಲೇಜು ಹಾಗೂ ಸಂಘ ಸಂಸ್ಥೆಗಳು ಸೇರಿದಂತೆ ರಾಜ್ಯಾದ್ಯಂತ ಸಂವಿಧಾನದ ದ್ಯೇಯೋದ್ದೇಶಗಳ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನವೆಂಬರ್ 26 ರಂದು ಸಂವಿಧಾನ ದಿನ ವನ್ನಾಗಿಆಚರಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆಕಾಗೇರಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಅವರು, ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನ. ಸಂವಿಧಾನದ ವಿಚಾರಗಳು ನಮಗೆ ಈಗಲೂ ಪ್ರೇರಣೆದಾಯಕ. 1949 ರ ನವೆಂಬರ್ 26 ರಂದು ಸಂವಿಧಾನವನ್ನು ಸ್ವೀಕರಿಸಿದ ದಿನ. ಸಂವಿಧಾನದ ದಿನವನ್ನಾಗಿ 2015 ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಯುವ ಪೀಳಿಗೆಗೆ ವಿದ್ಯಾರ್ಥಿಗಳಿಗೆ, ಸಂಘ-ಸಂಸ್ಥೆಗಳಿಗೆ ಸಂವಿಧಾನದ ಬದ್ಧತೆ ಹೆಚ್ಚಿಸುವ ಸಲುವಾಗಿ ಪರಿಣಾಮಕಾರಿಯಾಗಿ ಅರಿವು ಮೂಡಿಸುವಂತೆ ಸಂವಿಧಾನ ದಿನ ಆಚರಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆಎಂದು ಹೇಳಿದರು.
ಸಂವಿಧಾನ ದಿನವನ್ನು ಸ್ಪೀಕರ್, ಸಿಎಂ ಕಚೇರಿಅಥವಾ ವಿರೋಧ ಪಕ್ಷದ ನಾಯಕರ ಕಚೇರಿಗೆ ಸೀಮಿತಗೊಳ್ಳಬಾರದು. ಸಾರ್ವಜನಿಕರು ಇದರಲ್ಲಿ ಭಾಗವಹಿಸಿ ಆಚರಿಸುವಂತಾಗಬೇಕು. ಇಂದು ವಿಧಾನಸೌಧದ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿರುವುದಾಗಿ ತಿಳಿಸಿದ ಅವರು, ಸಂವಿಧಾನ ದಿನಾಚರಣೆಯ ಕಾರ್ಯಕ್ರಮದ ಸ್ವರೂಪ ಹೇಗಿರಬೇಕೆಂದು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.ಸಂವಿಧಾನ ಪ್ರತಿಕಡಿಮೆದರದಲ್ಲಿಜನರಿಗೆ ವಿತರಿಸುವ ಬಗ್ಗೆ ಸರ್ಕಾರದಜೊತೆ ಮಾತನಾಡುತ್ತೇನೆಎಂದು ಹೇಳಿದರು.
ಸಂವಿಧಾನ ಬದಲಾವಣೆ ಬಗ್ಗೆ ಬಿಜೆಪಿ ನಾಯಕರು ಮಾತನಾಡಿರುವಕುರಿತು ಪ್ರಶ್ನಿಸಿದಾಗ, ಈ ಬಗ್ಗೆ ವಿವರ ನೀಡದ ಸ್ಪೀಕರ್, ಸಂವಿಧಾನ ಉಳಿಸೋಣ, ಸಂವಿಧಾನಕ್ಕೆಗೌರವಿಸೋಣಎಲ್ಲರೂ ಸೇರಿ ಸಂವಿಧಾನ ದಿನಾಚರಣೆ ಯಶಸ್ವಿಗೊಳಿಸೋಣ ಎಂದಷ್ಟೇ ಉತ್ತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ