ದೇಶದ ಸುಭದ್ರತೆಗೆ ಪ್ರತಿಯೊಬ್ಬರೂ ಸೇನಾನಿಗಳಾಗಳಾಗಬೇಕು-ಶಾಸಕ

ಶಿರಾ:

        ಪ್ರಸ್ತುತ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾಂವಿದಾನಿಕ ಅಂಶಗಳನ್ನು ಬದಿಗೊತ್ತಿ ನಡೆಯುವ ವರ್ತನೆಗಳು ಅತಿಯಾಗಿದ್ದು ಇಂತಹ ಕಾನೂನು ಮೀರಿದ ವರ್ತನೆಗಳು ದೇಶದ ಉಳಿವಿಗೆ ಮುಂದೊಂದು ದಿನ ಕಂಟಕವೂ ಆಗಲಿದ್ದು ದೇಶದ ಅಭಿವೃದ್ಧಿಯತ್ತ ಎಲ್ಲರ ಚಿತ್ತ ನಡಬೇಕಿದೆ. ದೇಶದ ಸುಭದ್ರತೆಗೆ ಪ್ರತಿಯೊಬ್ಬರೂ ಸೇನಾನಿಗಳಾಗಬೇಕಿದೆ ಎಂದು ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು.
ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಗಣ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

         ಭಾರದತವು ರಾಷ್ಟ್ರದಲ್ಲಿನ ಪ್ರಭಲ ರಾಷ್ಟ್ರಗಳ ಪೈಕಿ ಒಂದಾಗಿದ್ದು ನಮ್ಮ ಸಂವಿಧಾನ ಅತಿ ಶ್ರೇಷ್ಠತೆಯನ್ನು ಸಾರುತ್ತದೆ. ಬ್ರಾತೃತ್ವದಿಂದ ಕಾಣುವ, ಸಮಾನ ಗೌರವದಿಂದ ನಡೆದುಕೊಳ್ಳುವ ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ನಮ್ಮ ಸಂವಿದಾನ ಎತ್ತಿ ಹಿಡಿದಿದ್ದು ಅದಕ್ಕೆ ಪ್ರತಿಯೊಬ್ಬರೂ ಗೌರವ ನೀಡುವಂತಾಗಬೇಕು ಎಂದರು.

        ಸಮಾಜ, ಅಸ್ಪಶ್ಯತೆ, ಜಾತಿ, ಜನಾಂಗ, ಮತಾಂಧತೆ, ಜಾತೀಯತೆಗಳ ತಾರತಮ್ಯಗಳನ್ನು ಬದಿಗೊತ್ತಿ ನಡೆದಾಗ ಮಾತ್ರಾ ದೇಶ ಅಭಿವೃದ್ಧಿಯತ್ತ ಸಾಗಲು ಸಾದ್ಯ. ದೇಶದ ಸಂರಕ್ಷಣೆಗಾಗಿ ಇಂದಿನ ಯುವ ಪೀಳಿಗೆ ದೇಶ ಕಾಯುವ ಸೇನಾನಿಗಳಾಗಲು ಮುಂದಾಗಬೇಕಿದೆ ಎಂದು ಶಾಸಕ ಸತ್ಯನಾರಾಯಣ್ ತಿಳಿಸಿದರು.

          ತಹಶೀಲ್ದಾರ್ ರಂಗೇಗೌಡ ದ್ವಜಾರೋಹಣ ನೆರವೇರಿಸಿ ಮಾತನಾಡಿ ಭಾರತದವು ಭಾಷಾವಾರು ಪ್ರಾಂತ್ಯಗಳನ್ನು ಒಳಗೊಂಡ ಒಂದು ಒಕ್ಕೂಟವಾಗಿದೆ. ಭಾಷೆ ಹಾಗೂ ಗಡಿಗಳ ವಿಷಯದಲ್ಲಿ ಇಮದಿಗೂ ವಿವಿಧ ರಾಜ್ಯಗಳಲ್ಲಿ ವೈಮನ್ಯಗಳಿದ್ದು ಇಂತಹ ವೈಮನಸ್ಯಗಳು ದೂರವಾಗಬೇಕು.

          ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮನಯ್ವತೆಯಿಂದ ಸರ್ವಾಂಗೀಣ ಅಭಿವೃದ್ಧಿ ಸಾದ್ಯ ಎಂದರು.ತಾ.ಪಂ. ಅಧ್ಯಕ್ಷೆ ಶ್ರೀಮತಿ ಹಂಸವೇಣಿ ಶ್ರೀನಿವಾಸ್, ನಗರಸಭೆಯ ಅಧ್ಯಕ್ಷ ಅಮಾನುಲ್ಲಾಖಾನ್, ನಗರಸಭಾ ಸದಸ್ಯರಾದ ಶ್ರೀಮತಿ ಶಾರದಾ ಶಿವಕುಮಾರ್, ಸರಿತಾ ರವಿ, ಅಬ್ದುಲ್‍ಖಾದಿರ್, ರೇಣುಕಮ್ಮ, ಎಸ್.ಜೆ.ರಾಜಣ್ಣ, ಎ.ಪಿ.ಎಂ.ಸಿ. ಅಧ್ಯಕ್ಷ ವಾಜರಹಳ್ಳಿ ನರಸಿಂಹೇಗೌಡ, ಮುದಿಮಡು ರಂಗಸ್ವಾಮಯ್ಯ, ಕಂದಾಯ ನಿರೀಕ್ಷಕ ಮಂಜುನಾಥ್, ಡಾ.ಅಫ್ಜಲ್, ಬಿ.ಇ.ಓ. ವಿಜಯ್‍ಕುಮಾರ್, ಸಹಾಯಕ ಕೃಷಿ ನಿರ್ದೇಶಕ ರಂಗನಾಥ್, ಪಶುಪಾಲನಾ ಇಲಾಖೆಯ ಡಾ.ರಂಗನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap