ಸಾಮಾಜಿಕ ಬದುಕಿನಲ್ಲಿ ಪ್ರತಿಯೊಬ್ಬರೂ ಉತ್ತಮ ಮೌಲ್ಯಗಳನ್ನು ಅಳವಢಿಸಿಕೊಳ್ಳಿ: ಶ್ರೀವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ

ಗುಬ್ಬಿ

       ಸಾಮಾಜಿಕ ಬದುಕಿನಲ್ಲಿ ಪ್ರತಿಯೊಬ್ಬರೂ ಉತ್ತಮ ಮೌಲ್ಯಗಳನ್ನು ಅಳವಢಿಸಿಕೊಂಡಾಗ ಮಾತ್ರ ಸುಸಂಸ್ಕøತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸಿದ್ದರಬೆಟ್ಟ ಮಠದ ಶ್ರೀವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

      ತಾಲೂಕಿನ ನಿಟ್ಟೂರು ಗ್ರಾಮದ ಶ್ರೀ ಸಿದ್ದಶ್ರೀ ವಿದ್ಯಾಸಂಸ್ಥೆಯಲ್ಲಿ ವಿವೇಕ ಚಿಂತನ ಸಂಸ್ಥೆ ಮತ್ತು ರೋಟರಿ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ತುಮಕೂರು ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ, ನಿವೃತ್ತ ಸಾಧಕ ಶಿಕ್ಷಕರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಪ್ರಶಸ್ತಿಗಳಿಗಾಗಿ ಸ್ವಾಮೀಜಿಗಳು ಸೇವೆ ಮಾಡುವುದಿಲ್ಲ ಅದು ನಮ್ಮ ಕರ್ತವ್ಯವಾಗಿದ್ದು ಯಾರೇ ಸಾಮಾಜಿಕ ಜೀವನದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತ ಬಂದಲ್ಲಿ ಪ್ರಶಸ್ತಿಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ ಎಂದು ತಿಳಿಸಿದರು.

       ಸಾಮಾಜಿಕ ಸೇವೆ ಮತ್ತು ನಿಸ್ವಾರ್ಥ ಸೇವೆಗಳಿಂದ ಪ್ರಶಸ್ತಿ ಮತ್ತು ಸನ್ಮಾನಗಳು ಹುಡುಕಿಕೊಂಡು ಬರುತ್ತವೆ ಸ್ವಾಮೀಜಿಗಳು ಯಾವತ್ತು ಪ್ರಶಸ್ತಿಗಳನ್ನು ಬಯಸಿದವರಲ್ಲ ಅವರ ಜೀವನದಲ್ಲಿ ಅವರ ಭಕ್ತರೆ ಬಹುದೊಡ್ಡ ಪ್ರಶಸ್ತಿಯಾಗಿದ್ದು ಅವರಿಗಾಗಿ ಒಂದಷ್ಟು ಸೇವೆಯನ್ನು ಮಾಡಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದ ಅವರು ಸ್ವಾಮೀಜಿಗಳ ಸಮಾಜ ಸೇವೆ ಅನನ್ಯವಾದುದು ಸಾರ್ವಜನಿಕ ಸೇವೆಯಲ್ಲಿಯೇ ನಿರತರಾಗಿದ್ದು ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆ ಮತ್ತು ದಾಸೋಹ ನೀಡುವ ಮೂಲಕ ಸಮಾಜದಲ್ಲಿ ತನ್ನದೆ ಆದ ಮಹತ್ವದ ಸಾಧನೆಗಳನ್ನು ಮಾಡುವ ಮೂಲಕ ದಾರಿ ದೀಪವಾಗಿದ್ದಾರೆ ಎಂದು ತಿಳಿಸಿದರು.

       ಕಳೆದ ಹಲವು ವರ್ಷಗಳಿಂದ ಸಾಮಾಜ ಸೇವೆ ಮಾಡಬೇಕು ಎಂಬ ನಿಟ್ಟಿನಲ್ಲಿ ನಮ್ಮ ಶ್ರೀ ಮಠವು ಸಹ ಕೊರಟಗೆರೆ ತಾಲೂಕಿನ ಸುಮಾರು 42 ಕೆರೆಗಳನ್ನು ಗುರುತು ಮಾಡಿ ಅಲ್ಲಿ ಹೂಳು ಎತ್ತುವಂತಹ ಮಹತ್ವದ ಕೆಲಸವನ್ನು ಮಾಡಲು ಮುಂದಾಗಿದ್ದು ಇದಕ್ಕೆ ಅಲ್ಲಿನ ಭಕ್ತ ಮಂಡಳಿ ಸಹಕಾರ ನೀಡುತ್ತಿದೆ ಒಟ್ಟು 300 ಕೊಟಿಯಷ್ಟು ಹಣ ಬೇಕಾಗಿದೆ ಅಷ್ಟೊಂದು ಹಣವನ್ನು ಜೋಳಿಗೆ ಹಿಡಿದು ಸಂಗ್ರಹಣೆ ಮಾಡಿ ಕೆಲಸ ಮಾಡುವುದು ಅಷ್ಟು ಸುಲಬದ ಮಾತಲ್ಲ ಆದರೂ ಅಲ್ಲಿನ ಜನತೆ ಸಹಕಾರ ನೀಡಿದ್ದಾರೆ ಮಾಡುತ್ತಿರುವ ಕೆಲಸವನ್ನು ನೋಡಿ ಸಾಕಷ್ಟು ಸಂಘ ಸಂಸ್ಥೆಗಳು ಮುಂದೆ ಬಂದು ಸಹಕಾರ ನೀಡುತ್ತಿವೆ ಈ ಕೆಲಸವಾದಲ್ಲಿ ಅಲ್ಲಿನ ಎಲ್ಲಾ ಕೆರೆಗಳಲ್ಲೂ ನೀರಿನ ಸಂಗ್ರಹಣೆಯಾದರೆ ಲಕ್ಷಾಂತರ ರೈತರಿಗೆ ಅನುಕೂಲವಾಗುತ್ತದೆ ಇದು ನಮ್ಮ ಜೀವಮಾನದ ಶ್ರೇಷ್ಠ ಕೆಲಸವಾಗಿದೆ ಎಂದರು.

       ವಿದ್ಯಾರ್ಥಿಗಳಿಗೆ ಗುರಿ ಇದ್ದಾಗ ಏನು ಬೇಕಾzರು ಸಾಧನೆ ಮಾಡಬಹುದಾಗಿದೆ ಓದುವ ಸಮಯದಲ್ಲಿ ಶ್ರದ್ದೆಯಿಂದ ಕಲಿತರೆ ಯಾವುದು ಆಸಾಧ್ಯವಲ್ಲ ಇಂದು ನಿಮ್ಮ ಮುಂದೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ ಮಾಡಲಾಗುತ್ತಿದೆ ನಾಳೆ ನೀವು ಸಹ ಇಂತಹ ಅಭಿನಂದನೆ ಸ್ವೀಕರಿಸಬೇಕು ಎಂದು ತಿಳಿಸಿದರು.

      ಸಿದ್ದಶ್ರೀ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಶಿವಣ್ಣ ಮಾತನಾಡಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಮತ್ತು ಪರಿಸರತ್ಮಾಕವಾಗಿ ತುಮಕೂರು ರತ್ನ ಪ್ರಶಸ್ತಿಯನ್ನು ಈ ಸಂಸ್ಥೆ ನೀಡುತ್ತಿರುವುದು ಸಂತೋಷದ ವಿಚಾರವಾಗಿದೆ ಇದರಿಂದ ಸಾಕಷ್ಟು ಜನರಿಗೆ ಸ್ಪೂರ್ತಿಯಾಗಲಿದೆ ಹಾಗೂ ಪ್ರಶಸ್ತಿಗಳನ್ನು ನೀಡಿದಾಗ ಅವರಿಗೆ ಇನ್ನೂ ಹೆಚ್ಚಿನ ಜವಬ್ಧಾರಿ ಬಂದು ಹೆಚ್ಚು ಕೆಲಸ ಮಾಡಲು ಮುಂದಾಗುತ್ತಾರೆ ಎಂದು ತಿಳಸಿದರು.

       ನಿವೃತ್ತ ಶಿಕ್ಷಕ ರಾಮಚಂದ್ರಪ್ಪ ಮಾತನಾಡಿ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಸ್ಪೂರ್ತಿಯಾಗಬೇಕಾಗಿದೆ ಕೇವಲ ಓದೆ ಎಲ್ಲವೂ ಅಲ್ಲ ಅದರ ಜೊತೆಯಲ್ಲಿ ಸಾಮಾಜಿಕವಾಗಿ ಬದುಕುವಂತಹ ಶಿಕ್ಷಣವನ್ನು ಕಲಿಯಬೇಕು ಮಾನವೀಯ ಮೌಲ್ಯಗಳು ಇಂದು ಕಾಣೆಯಾಗುತ್ತಿದ್ದು ಅವೆಲ್ಲವನ್ನು ಒಗ್ಗೂಡಿಸಿಕೊಂಡು ಹೋಗಬೇಕು ಆಗ ಮಾತ್ರ ನಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

        ಇದೆ ಸಂದರ್ಭದಲ್ಲಿ ಸಿದ್ದರಬೆಟ್ಟ ಮಠದ ಶ್ರೀವೀರಭದ್ರೇಶ್ವರ ಶಿವಚಾರ್ಯ ಸ್ವಾಮೀಜಿಗಳಿಗೆ ತುಮಕೂರು ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

      ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಾದ ಚನ್ನಬಸಪ್ಪ. ರೋಟರಿ ಸಂಸ್ಥೆಯ ರೇಣುಕಾ ಪ್ರಸನ್ನ, ಸಿದ್ದಶ್ರೀ ಸಂಸ್ಥೆಯ ಮುಖ್ಯ ಶಿಕ್ಷಕ ವೀರಚಾರ್, ವಿನಾಯಕ ಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್, ವಿವೇಕ ಚಿಂತನ ಸಂಸ್ಥೆಯ ಕಾರ್ಯದರ್ಶಿ ಸಚಿನ್ ಸಂಸ್ಥೆಯ ಸಂಸ್ಥಾಪಕ ಚಂದ್ರಶೇಖರ್, ರಾಮ್‍ದೇವ್

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap