ಮಧುಗಿರಿ
ಇಂದಿನ ವಾತವರಣವು ಕಲುಷಿತವಾಗುತ್ತಿರುವುದರಿಂದ ವಿಷಮ ಪರಿಸ್ಥಿತಿ ಎದುರಾಗಿದೆ ಪ್ರತಿಯೊಬ್ಬರು ಸಸಿ ನೆಡುವ ಮನೋಭಾವ ಬೆಳಸಿಕೊಳ್ಳುವುದರ ಮೂಲಕ ಪರಿಸರ ಸಂರಕ್ಷಣೆ ಮುಂದಾಗಬೇಕೆಂದು 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪಾಟೀಲ್ ಮೊಹಮದ್ ಮೊಯಿದ್ದೀನ್ ಕರೆ ನೀಡಿದರು.
ಪಟ್ಟಣದ ತುಮಕೂರು ರಸ್ತೆಯ ಸಮೀಪವಿರುವ ನ್ಯಾಯಾಲಯಗಳ ಸಂಕೀರ್ಣದಲ್ಲಿ ಕಾನೂನು ಸೇವಾ ಸಮಿತಿ ತಾಲ್ಲೂಕು ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸಾಂಕೇತಿಕವಾಗಿ ಸಸಿಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ಇಂದಿನ ಜಾಗತಿಕ ತಾಪಮಾನದಲ್ಲಿ ಮಾನವ ತನ್ನ ಸುತ್ತಾಮುತ್ತಲಿನ ಪರಿಸರದ ಸಂರಕ್ಷಣೆಗೆ ಮುಂದಾಗಬೇಕಾಗಿದೆ ತಲೆಮಾರುಗಳು ಬದಲಾದಂತೆ ನಾವುಗಳು ಬದಲಾಗುತ್ತಿದ್ದೆವೆ ಉತ್ತಮ ಪರಿಸರಕ್ಕಾಗಿ ಸಸಿಗಳನ್ನು ಬೆಳಸಿ ಅವುಗಳ ಸಂರಕ್ಷಣೆಯ ಮೂಲಕ ಉತ್ತಮವಾದಂತಹ ವಾತವರಣವನ್ನು ಸೃಷ್ಟಿಸಬಹುದಾಗಿದೆ ಎಂದರು.
ಪ್ರಧಾನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಆರ್.ಪಲ್ಲವಿ ಮಾತನಾಡಿ ಕಲುಷಿತ ವಾತವರಣದಿಂದಾಗಿ ಇನ್ನೂ ತಾಲ್ಲೂಕಿಗೆ ಇನ್ನೂ ಮಾನ್ ಸೂನ್ ಪ್ರವೇಶವಾಗಿಲ್ಲ ಕಾರಣ ಮರಗಳ ಕೊರತೆ ನಾಗರೀಕರು ತಮ್ಮ ಹುಟ್ಟುಹಬ್ಬಗಳಂದು ಸುಮಾರು ಮೂನ್ನೂರಿಂದ ನಾಲ್ಕು ನೂರು ರೂಗಳ ವರೆಗೆ ಹಣ ವೆಚ್ಚ ಮಾಡಿ ಕೇಕ್ ಕತ್ತರಿಸುತ್ತಾರೆ ಅದರ ಬದಲಾಗಿ ಪ್ರತಿಯೊಬ್ಬರು ತಮ್ಮ ಜನ್ಮಾ ದಿನಾಚರಣೆಯೆಂದು ಗಿಡಗಳನ್ನು ನೆಟ್ಟು ಪೋಷಿಸಿ ನಂತರ ಅವುಗಳನ್ನು ಸಂರಕ್ಷಿಸಬೇಕು ಹಾಗೂ ತಾವುಗಳು ಎಲ್ಲಾದರೂ ಹೊರಟಾಗ ಖರೀದಿಸಿದ ಉಳಿಕೆ ನೀರನ್ನು ರಸ್ತೆ ಬದಿಯಲ್ಲಿನ ಗಿಡಗಳಿಗೆ ಉಣಿಸಿ ಎಂದರು.
ತಾಲ್ಲೂಕು ವಲಯ ಅರಣ್ಯಧಿಕಾರಿ ಚಿನ್ನಪ್ಪ ಮಾತನಾಡಿ ಇಲಾಖೆಯ ವತಿಯಿಂದ ಜನ ಸಂಖ್ಯೆಗೆ ಅನುಗುಣವಾಗಿ ಸಸಿಗಳನ್ನು ಬೆಳೆಸಲಾಗುತ್ತಿದೆ. ಗಿಡ ಮರಗಳು ಹೆಚ್ಚಾದರೆ ಕಾರ್ಬನ್ ಡೈ ಆಕ್ಸೈಡ್ ಕಡಿಮೆಯಾಗಿ ಆಮ್ಲಜನಕ ಹೆಚ್ಚಾಗುತ್ತದೆ ಇದರಿಂದಾಗಿ ಆರೋಗ್ಯಕರ ವಾತವರಣ ಸೃಷ್ಟಿಯಾಗುತ್ತದೆ ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಪಿ.ಸಿ. ಕೃಷ್ಣರೆಡ್ಡಿ ಮಾತನಾಡಿ ಪ್ರಪಂಚದಲ್ಲಿನ ಜೀವರಾಶಿಗಳ ಬೆಳವಣಿಗೆಯಾಗಲು ಉತ್ತಮ ಪರಿಸರದ ಅಗತ್ಯ ವಾಗಿದೆ ಆರೋಗ್ಯಕರ ವಾತವರಣಕ್ಕೆ ಪರಿಸರ ಅಗತ್ಯ ಎಂದರು.
ಈ ಸಂಧರ್ಭದಲ್ಲಿ ನ್ಯಾಯಾಧೀಶ ಅಬ್ದುಲ್ ರೆಹಮಾನ್ ಎ ಮುಲ್ಲಾ. ವಕೀಲರಾದ ದಯಾನಂದ್ ಸಾಗರ್, ಆಶೋಕ್, ಪ್ರಕಾಶ್, ನಾಗಭೂಷಣ್ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಮುತ್ತರಾಜು, ಜಿ.ಸೋಮಶೇಖರ್, ಕರಿಯಪ್ಪ, ಲಿಂಗೇಶ್, ಚಂದ್ರಶೇಖರ್, ಶಿವರಾಜು, ಶ್ರೀಧರ್ ಮತ್ತಿತರರು ಇದ್ದರು.