ತುಮಕೂರು
ಹೋರಾಟಗಳನ್ನು ದಾಖಲಿಸದಿದ್ದರೆ ಮುಂದಿನ ಪೀಳಿಗೆಯಲ್ಲಿ ಮರೀಚಿಕೆಯಾಗಿಬಿಡುತ್ತದೆ. ನಮ್ಮ ನೆಲೆ ಕಂಡುಕೊಳ್ಳು ನಾವು ಮಾಡಿದ ಹೋರಾಟಗಳನ್ನು ದಾಖಲಿಸಿದರೆ ಅದಕ್ಕೊಂದು ಗೌರವ ದೊರೆದಂತೆ ಮುಮದಿನ ಪೀಳಿಗೆಗೆ ಎಲ್ಲವನ್ನೂ ತಿಳಿಸಬೇಕು ಇಲ್ಲದಿದ್ದರೆ ನಾವು ಪಟ್ಟ ಪಾಡುಗಳೆಲ್ಲವೂ ಮರೀಚಿಕೆಯಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ರಂಗಸ್ವಾಮಿ ಬೆಲ್ಲದಮಡು ಛಾರಿಟಬಲ್ ಟ್ರಸ್ಟ್, ಪಾವನ ಆಸ್ಪತ್ರೆಯ ವತಿಯಿಂದ ನಡೆದ ಹೋರಾಟಗಾರ ರಂಗಸ್ವಾಮಿ ಬೆಲ್ಲದಮಡು ಅವರ 71ನೇ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತದಲ್ಲಿ ದಲಿತ ಹೋರಾಟಗಳಿಗೆ ಮಾನ್ಯತೆ ಇಲ್ಲದಂತಾಗಿದೆ. ಡಿಎಸ್‌ಎಸ್ ಎಂದರೆ ಎಲ್ಲರಿಗೂ ವಾಕರಿಕೆ ಬರುವ ಸ್ಥಿತಿಗೆ ಬಂದು ನಿಂತಿದೆ. 70ರ ದಶಕದಲ್ಲಿ ಹೋರಾಟ ದಲಿತರದ್ದಾದರೂ ಆ ಹೋರಾಟದಲ್ಲಿದ್ದವರೆಲ್ಲಾ ದಲಿತೇತರರಾಗಿದ್ದರು. ವಿವಿಧ ಜಾತಿಯ ನಾಯಕರು ದಲಿತ ಹೋರಾಟದಲ್ಲಿ ಭಾಗಿಯಾಗಿದ್ದರು. ಆದರೆ ಇಂದು ಆಸ್ಥಿತಿ ಅಳಿದು ಅಂಚಿ ಹೋಗಿದೆ ಎಂದು ವಿಷಾದಿಸಿದರು
ಆಗ ದಲಿತ ಸಂಘರ್ಷ ಸಮಿತಿಯ ಹೋರಾಟಗಾರರ ವಾಸದ ತಾಣಗಳು ಹಿಂದುಳಿದ ಹಾಸ್ಟೆಲ್‌ಗಳಾಗಿದ್ದವು. ಊಟ ನಿದ್ರೆ ಎಲ್ಲವೂ ಹಾಸ್ಟೆಲ್‌ನಲ್ಲಿಯೇ ಆಗುತ್ತಿತ್ತು. ಆಗಿನ ಚಳುವಳಿಯಲ್ಲಿ ಅನೇಕ ಬದಲಾವಣೆಗಳಾದವು. ಕಾಲ ಉರುಳಿದಂತೆ ಸಮಿತಿಯು ಸ್ವಾರ್ಥಕ್ಕೆ ಉಪಯೋಗವಾಗುತ್ತಿದೆ ಎಂಬ ತಪುö್ಪ ಸಂದೇಶವನ್ನು ಹೊರಡಿಸಿದರು. ಈಗನ ಚಳುವಳಿ ಹಾಗೂ ಆಗಿನ ಚಳುವಳಿಗೂ ಬಹಳ ವ್ಯತ್ಯಾಸಗಳಿವೆ ಎಂದರು.
ರಂಗಸ್ವಾಮಿ ಬೆಲ್ಲದಮಡು ದಲಿತರ ಆಶಾಕಿರಣರಾಗಿದ್ದರು. ಅವರು ಸಂಘಟನೆಯ ಕಟ್ಟಾಳು. ಅವರ ಜೊತೆಯಲ್ಲಿ ನಾವಿದ್ದೆವು ಎನ್ನುವುದೇ ನಮಗೆ ಆನಂತ ಎಂದರು.ಪ್ರಗತಿಪರ ಚಿಂತಕ ಯತಿರಾಜ್ ಮಾತನಾಡಿ, ಪ್ರತಿಯೊಬ್ಬ ಹೋರಾಟಗಾರನದು ಶ್ರೀಮಂತ ಅನುಭವಗಳಿವೆ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ರಂಗಸ್ವಾಮಿ ಪರಿಚಯ ನನಗಾಯಿತು. ಅವರು ಜನರ ಕಷ್ಟ ನಷ್ಟಗಳನ್ನು ತನ್ನದೆನ್ನು ಭಾವಿಸುತ್ತಿದ್ದರು.
ಹೋರಾಟಗಳನ್ನು ರೂಪಿಸುವಲ್ಲಿ ಮುಂದಾಳತ್ವ ಅವರದಾಗಿತ್ತು. ದಲಿತ ಸಂಘರ್ಷ ಸಮಿತಿಯಲ್ಲಿ ನನಗೆ ಪ್ರಭಾವ ಬೀರಿದ ವ್ಯಕ್ತಿ ರಂಗಸ್ವಾಮಿ ಬೆಲ್ಲದ ಮಡು. ಜಾಗತೀಕರಣ ಉದಾರೀಕರಣ ಬಂದಮೇಲೆ ದಲಿತರ ಹೊಸ ವ್ಯಾಖ್ಯಾನ ಬರಬೇಕಾಗುತ್ತದೆ. ದಲಿತ ಮುಖಂಡರು ಗಂಭೀರ ಯೋಚನೆ ಮಾಡಬೇಕು ಮೀಸಲಾತಿಗೆ ಮೀರಿದ ಸಂಘವನ್ನು ಇಂದು ಕಟ್ಟಬೇಕಾಗಿದೆ ಎಂದರು.
ಪಾವಗಡ ಶಾಸಕ ತಿಮ್ಮರಾಯಪ್ಪ ಮಾತನಾಡಿ, ಸಂಘಟನೆಯಲ್ಲಿ ಧೈರ್ಯದಿಂದ ಹೋರಾಟ ನಡೆಸಿದ ಧೀಮಂತ ರಂಗಸ್ವಾಮಿ ಬೆಲ್ಲದಮದು. ಅವರು ಬದುಕಿನ ನಾನಾ ಆಯಾಮ ತಿಳಿಸಿಕೊಟ್ಟರು. ಕುಟುಂಬ ಮತ್ತು ಹೋರಾಟ ಎರಡನ್ನು ಸಮಾನವಾಗಿ ನಿಭಾಯಿಸಿ ಮಹಾ ವ್ಯಕ್ತಿ ಅವರಾಗಿದ್ದರು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ಹ ರಮಾಕುಮಾರಿ ಮಾತನಾಡಿ, ನಾನು ಅವರ ಜೊತೆ ಕೆಲವು ವರ್ಷದಲ್ಲಿ ಸಂಪರ್ಕದಲ್ಲಿದ್ದೆ. ಸಂಘಟನೆ ಬಗ್ಗೆ ಅರಿವು ಮೂಡಿಸುತ್ತಿದ್ದ ವ್ಯಕ್ತಿ ಅವರು. ಪಂಚಮ ಪತ್ರಿಕೆ ಸಂಪಾದಕರಾಗಿದ್ದರು. ಚಳುವಳಿ ಹೋರಾಟ ಬಗ್ಗೆ ನಮ್ಮ ಮನಸ್ಸಿನಲ್ಲಿ ಬೀಜ ಬಿತ್ತಿದ್ದರು. ಸಂಘಟನೆಗಳು ಸಮಾರಂಭಗಳಿಗೆ ಸೀಮಿತವಾಗದೆ ಬೇರೆ ಹೊಸ ತಿರುವನ್ನು ಪಡೆದುಕೊಳ್ಳಬೇಕು ಆಗ ಹೋರಾಟಕ್ಕೆ ಮೌಲ್ಯ ಸಿಗುತ್ತದೆ ಎಂದರು.
ದಲಿತ ಹೋರಾಟಗಾರ ಎನ್. ವೆಂಕಟೇಶ್ ಮಾತನಾಡಿ, ದಲಿತ ಹೋರಾಟದ ಆಧಾರ ಸ್ತಂಭ ರಂಗಸ್ವಾಮಿ ಅವರು. ಸಮಿತಿಯ ಪ್ರಾರಂಭದ ದಿನಗಳಲ್ಲಿ ದೌರ್ಜನ್ಯಗಳು ನಡೆಯುತ್ತಿದ್ದವು. ಅದರ ಹೋರಾಟದಲ್ಲಿ ರಂಗಸ್ವಾಮಿ ಸೇರಿದಂತೆ ಬಹುತೇಕ ದಲಿತ ಹೋರಾಟಗಾರರು ಟೊಂಕಕಟ್ಟಿ ಹೋರಾಟ ಮಾಡಿದ್ದರು ವ್ಯಕ್ತಿಗತ ನಾಯಕತ್ವದೆಡೆಗೆ ಸಾಗಿದ್ದೇವೆ ಇದು ಹೋರಾಟ ಮನೋಭಾವವಲ್ಲ. ಇದನ್ನು ಹೋಗಲಾಡಿಸಬೇಕು.
ಈಗಿನ ಸರ್ಕಾರ ಅಂಬೇಡ್ಕರ್ ಸಿದ್ಧಾಂತಗಳನ್ನು ತಿರಸ್ಕರಿಸಿದೆ. ಉಪನಿಷತ್ತುಗಳನ್ನು ನಿರಾಕರಿಸಿದೆ ಎಂದರು. ಕಾರ್ಯಕ್ರಮ ದಲ್ಲಿ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ಉಪನಿರ್ದೇಶಕ ಕೆ.ದೊರೈರಾಜು, ಕುಂದೂರು ತಿಮ್ಮಯ್ಯ, ಶಿವಶಂಕರ್, ಹನುಮಂತ ರಾಯಪ್ಪ , ಕೃಷ್ಣಪ್ಪ ಬೆಲ್ಲದಮಡು, ಪುಟ್ಟನರಸಯ್ಯ, ಹೋರಾಟಗಾರ ಉಮೇಶಣ್ಣ, ಗಂಗಮ್ಮ, ಡಾ. ಮುರುಳೀಧರ, ಡಾ. ಪಾವನ, ಶಿವಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ