ತಿಪಟೂರು :
ಕುರುಬ ಸಮಾಜದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಸಮಾಜದ ಮುಖಂಡರೆಲ್ಲರು ಒಟ್ಟಾಗಿ ದುಡಿಯೋಣವೆಂದು ಕುರುಬ ಸಮಾಜದ ಮುಖಂಡಡಾ. ಷಡಕ್ಷರಿ ತಿಳಿಸಿದರು
ತಾಲ್ಲೂಕಿನ ಮಾದಿಹಳ್ಳಿ ಬಳಿ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ನೀಡಿರುವ ನಿವೇಶನಕ್ಕೆ ಅವಳವಡಿಸಿದ ನಾಮಫಲಕ್ಕೆ ಪೂಜೆಸಲ್ಲಿಸಿ ಮಾತನಾಡಿದ ಅವರು ಕುರುಬ ಸಮಾಜದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ವಿದ್ಯಾರ್ಥಿ ನಿಲಯ ಸ್ಥಾಪಿಸಬೇಕು ಹಾಗೂ ಕಲ್ಯಾಣ ಮಂಟಪ ಸ್ಥಾಪಿಸಬೇಕೆನ್ನುವ ದೃಷಿಯಿಂದ ಸಮಾಜದ ಬಂಧುಗಳು ಸೇರಿ ಸುಮಾರು 30ವರ್ಷಗಳ ಹಿಂದೆ ನಿವೇಶನ ಖರೀದಿಸಲಾಗಿತ್ತು ಆದರೆ ಕಾರಾಣಾಂತರಗಳಿಂದ ಪ್ರಕರಣ ನ್ಯಾಯಲಯದ ಮೆಟ್ಟಿಲೇರಿತು ಆದರೆ ನ್ಯಾಯಲಯದ ಪ್ರಕರಣ ಇತ್ಯಾರ್ಥವಾದ ಕಾರಣ ನಿವೇಶನದಲ್ಲಿ ಭೂಮಿ ಪೂಜೆ ಮಾಡಿ ನಾಮಫಲಕ ಅಳವಡಿಸಿದ್ದು ನಮ್ಮಕರ್ತವ್ಯ ಮುಗಿದಿಲ್ಲ ಈಗ ಆರಂಭವಾಗಿದ್ದು ಇನ್ನು ನಮ್ಮೆಲರ ಜವಾದಾರಿಯನ್ನು ಹೆಚ್ಚಿಸಿದ್ದು ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಜಿಲ್ಲಾಸಂಘದ ಮಾರ್ಗದರ್ಶನದಲ್ಲಿ ಅಭಿವೃದ್ದಿ ಪಡಿಸಲು ಪಣತೊಡಬೇಕೆಂದು ಕರೆ ನೀಡಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕಟಿ. ರಘುರಾಮ್ ಮಾತನಾಡಿ ಕುರುಬ ಸಮಾಜದ ಅಭಿವೃದ್ಧಿಗಾಗಿ ಅನೇಕ ಸಮಾಜದ ಹಿರಿಯರ ನಿರಂತರ ಪರಿಶ್ರಮದ ಪರಿಣಾಮವಾಗಿ ಉತ್ತಮವಾದ ನಿವೇಶನ ದೊರೆಕಿದೆ. ಕೂಡಲೇ ರಾಜ್ಯಾಧ್ಯಕ್ಷರೊಂದಿಗೆ ಮಾತನಾಡಿ ಕಟ್ಟಡ ನಿರ್ಮಾಣಕ್ಕೆಅಗತ್ಯವಾದ ನೆರವು ನೀಡಲಾಗುವುದು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಲೆಕ್ಕ ಪರಿಶೋಧಕರಾದ ಪಂಚಾಕ್ಷರಿ, ತಾಲ್ಲೋಕು ಅಧ್ಯಕ್ಷ ಚಂದ್ರೇಗೌಡ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಗಂಗಾಧರಯ್ಯ ಮಾಜಿ ನಗರಸಭಾ ಸದಸ್ಯ ತರಕಾರಿ ಗಂಗಾಧರ್, ಲೋಕೇಶ್, ಮುಖಂಡರಾದ ಗೋವಿಂದಪ್ಪ, ಹೊನ್ನೆನಹಳ್ಳಿ ವಿರುಪಾಕ್ಷಿ, ಜಯರಾಮ್ ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
