ರಾಷ್ಟ್ರದ ಬಲವರ್ಧನೆಗೆ ಪ್ರತಿಯೊಬ್ಬರು ದುಡಿಯಬೇಕು

ಬೆಂಗಳೂರು

    ರಾಷ್ಟ್ರದ ಬಲವರ್ಧನೆಗೆ ಪ್ರತಿಯೊಬ್ಬರು ದುಡಿಯಲು ಕಂಕಣಬದ್ಧರಾಗಿ ನಮ್ಮನ್ನು ನಾವು ರಾಷ್ಟ್ರಕ್ಕಾಗಿ ಸಮರ್ಪಿಸಿಕೊಳ್ಳಬೇಕು. ದೇಶ ವಿಭಜನೆಯಂತಹ ಕೆಲಸಗಳಿಗೆ ಯಾರು ಕೈಹಾಕಬಾರದು ಎಂದು ರಾಜ್ಯಪಾಲ ವಜೂಭಾಯಿ ರೂಢವಾಲಾ ಅವರು ತಿಳಿಸಿದರು.

    ನಗರದ ಪುರಭವನದಲ್ಲಿ 10ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು ಸಮಾಜವನ್ನು ಒಡೆದು ಹಾಕುವ ಘಟನೆಗಳನ್ನು ಸೃಷ್ಟಿಸುವುದು ದೇಶ ದ್ರೋಹದ ಕೆಲಸ ಎಂದು ಅವರು ಹೇಳಿದರು.ಜಾತಿ, ಧರ್ಮ, ಪಕ್ಷದ ಹೆಸರಿನಲ್ಲಿ ದೇಶ ವಿಭಜನೆ ಮಾಡುವ ಆಂದೋಲನದಲ್ಲಿ ತೊಡಗದೆ ದೇಶವನ್ನು ಬಲಪಡಿಸುವಂತಹ ಆಂದೋಲನವನ್ನು ನಡೆಸಬೇಕು ರಾಷ್ಟ್ರವನ್ನು ಬಲಪಡಿಸುವಂತಹ ಕೆಲಸಗಳನ್ನು ಮಾಡಿದರೆ ಜನ ನೆನಪು ಮಾಡಿಕೊಳ್ಳುತ್ತಾರೆ. ಮಹಾತ್ಮ ಗಾಂಧೀಜಿ ಜವಾಹರ್ ನೆಹರು, ಸರ್ದಾರ್ ವಲ್ಲಭಾಯಿ ಪಟೇಲ್, ಮೊರಾರ್ಜಿ ದೇಸಾಯಿ ಅಂತಹ ಮಹನೀಯರು ದೇಶವನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಹಾಗಾಗಿ ಅವರನ್ನು ಈಗಲೂ ನೆನೆಪಿಸಿಕೊಳ್ಳುತ್ತೇವೆ ಎಂದರು.

    ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ದುಡಿದ ಮಹನೀಯರನ್ನು ಮಾದರಿಯನ್ನಾಗಿ ಇಟ್ಟುಕೊಂಡು ಯುವಕರು ದೇಶ ಕಟ್ಟಬೇಕು ಎಂದ ಅವರು ಕೇಂದ್ರ ಚುನಾವಣಾ ಆಯೋಗ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಮತದಾರರ ಜಾಗೃತಿಗೆ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿವೆ. ಹಲವು ಅಧಿಕಾರಿಗಳು ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಪ್ರಶಂಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾತನಾಡಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದಲ್ಲಿ ಮತದಾರರ ಬಗ್ಗೆ ಜಾಗೃತಿ ಉಂಟು ಮಾಡಲು ಕೇಂದ್ರ ಚುನಾವಣಾ ಆಯೋಗ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಹೇಳಿದರು.

     ಶಾಲಾ-ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿದೆ. ಅಲ್ಲದೆ ಮತದಾನ ದಿನ ಮತದಾರರಿಗೆ ವಾಹನ ಸೌಲಭ್ಯ, ಸಖಿ ಮತಗಟ್ಟೆ, ಬುಡಕಟ್ಟು ಜನಾಂಗವರಿಗಾಗಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.2014ರಲ್ಲಿ 6 ಕೋಟಿ 62 ಲಕ್ಷ ಮತದಾರರು ಇದ್ದರೆ 2019ರಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮತದಾರರು ನೋಂದಾಯಿಸಿದ್ದಾರೆ. 2014ರಲ್ಲಿ 9 ಕೋಟಿ 16 ಲಕ್ಷ ಮಹಿಳೆಯರು ಇದ್ದರು 2019ರಲ್ಲಿ ಆ ಸಂಖ್ಯೆ 9 ಕೋಟಿ 79 ಲಕ್ಷ ಆಗಿದ್ದು, ಮಹಿಳೆಯರು ಪ್ರಜಾಪ್ರಭುತ್ವದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದಾರೆ ಎಂದರು.

     2014ರಲ್ಲಿ ಯುವ ಮತದಾರರ ಸಂಖ್ಯೆ 8 ಲಕ್ಷ ಇದ್ದರೆ 2019ರಲ್ಲಿ 10 ಲಕ್ಷದ 10 ಸಾವಿರಕ್ಕೆ ಹೆಚ್ಚಳವಾಗಿದೆ ಎಂದು ಹೇಳಿದರು.2014ರಲ್ಲಿ ಶೇ. 57 ರಷ್ಟು ಮತದಾನವಾಗಿದ್ದರೆ 2019ರ ಚುನಾವಣೆಯಲ್ಲಿ ಶೇ. 68ಕ್ಕೆ ಏರಿಕೆಯಾಗಿದೆ ಎಂದು ಸಂಜೀವ್ ಕುಮಾರ್ ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಮೊದಲ ಬಾರಿಗೆ ಮತ ಚಲಾಯಿಸುವ 16 ಮಂದಿ ಯುವಕರಿಗೆ ಹಾಗೂ ಅಂಧರು ಮತ್ತು ಬುಡಕಟ್ಟು ಮತಾದರರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಿಗೂ ಪ್ರಶಸ್ತಿ ವಿತರಿಸಲಾಯಿತು. ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರು ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap