ಹಿರಿಯೂರು
ಪಟ್ಟಣದಲ್ಲಿ ಬೆಂಗಳೂರು- ಪೂನ ರಾಷ್ಟ್ರೀಯ ಹೆದ್ದಾರಿ, ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ದಿನೇ-ದಿನೇ ವಾಹನಗಳ ಸಂಚಾರ ನಗರದಲ್ಲಿ ಹೆಚ್ಚಾಗಿದ್ದು, ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಪಘಾತಗಳನ್ನು ತಪ್ಪಿಸಲು ಸಾರ್ವಜನಿಕರು, ವಾಹನ ಸವಾರರು ಹೆಚ್ಚಿನ ಕಾಳಜಿವಹಿಸಬೇಕು ಮತ್ತು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು, ಕಾನೂನು ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೋಳ್ಳಲಾಗುವುದು ಎಂದು ಹಿರಿಯೂರು ತಹಸಿಲ್ದಾರ್ ಸೂಚನೆ ನೀಡಿದ್ದಾರೆ.
ಖಾಸಗಿ, ಸರ್ಕಾರಿ, ಅಟೋ, ಜೀಪ್ ಹಾಗೂ ದ್ವಿಚಕ್ರ ವಾಹನಗಳ ಸವಾರರು ವಾಹನಗಳ ನಿಲುಗಡೆ ಇರುವ ಸ್ಥಳದಲ್ಲಿ ಮಾತ್ರ ನಿಲ್ಲಿಸಬೇಕು, ಇತರೆ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಬಾರದು. ಮೊಬೈಲ್‍ನಲ್ಲಿ ಮಾತನಾಡುತ್ತ ವಾಹನ ಚಾಲನೆ ಮಾಡುವಂತಿಲ್ಲ. ವಾಹನಗಳನ್ನು ನಗರ ವ್ಯಾಪ್ತಿಯಲ್ಲಿ ವೇಗವಾಗಿ ಚಲಾಯಿಸಬಾರದು. ನಗರದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಓಡಾಡುವುದರಿಂದ ಅತೀ ಕಡಿಮೆ ವೇಗದಲ್ಲಿ ವಾಹನ ಚಲಾಯಿಬೇಕು.
ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವಂತಿಲ್ಲ. ವಾಹನ ಚಾಲನಾ ಲೈಸೆನ್ಸ್ ಹೊಂದಿದವರು ಮಾತ್ರ ವಾಹನ ಚಲಾಯಿಸಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಅನುಮತಿ ಪಡೆದ ಆಟೋ-ಟ್ರಾಕ್ಸ್ ನವರು ಮಾತ್ರ ಸಾರ್ವಜನಿಕರನ್ನು ಕೂರಿಸಿಕೊಂಡು ವಾಹನ ಚಲಾಯಿಸಬೇಕು, ನಿಗದಿತ ಸಂಖ್ಯೆಗಿಂತ ಹೆಚ್ಚಾಗಿ ಸಾರ್ವಜನಿಕರನ್ನು ಕೊರಿಸಿಕೊಂಡು ವಾಹನ ಚಲಾಯಿಸುವುದು ಕಂಡು ಬಂದಲ್ಲಿ ಅಂತಹ ವಾಹನ ಚಾಲಕರು ಹಾಗೂ ವಾಹನ ಮಾಲೀಕರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
ತಾಲ್ಲೂಕು ಕಚೇರಿ ಮುಂಬಾಗ ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ತಾಲ್ಲೂಕು ಕಚೇರಿ ಆವರಣದಲ್ಲಿ ಸಾಕಷ್ಟು ವಾಹನಗಳು ವಾಹನ ನಿಲುಗಡೆ ಮಾಡುವ ಸ್ಥಳದಲ್ಲಿ ನಿಲ್ಲಿಸದೆ ರಸ್ತೆಗೆ ಅಡ್ಡವಾಗಿ ವಾಹನಗಳನ್ನು ನಿಲ್ಲಿಸುತ್ತಿರುವದರಿಂದ ವಾಹನಗಳು ಒಳಗಡೆ ಹಾಗೂ ಹೊರಗಡೆ ಹೋಗಲು ಸಂಚಾರದ ಸಮಸ್ಯೆಯಾಗುತ್ತಿದೆ.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ನೊಂದಣಿ ಪರವಾನಿಗೆ ಪಡೆದಿರುವ ದ್ವಿಚಕ್ರವಾಹನ, ಆಟೋ, ಟ್ರಾಕ್ಸ, ಹಾಗೂ ಬಸ್ಸುಗಳನ್ನು ಮಾತ್ರ ಚಾಲನೆ ಮಾಡಬೇಕು, ಅನುಮತಿ ಪಡೆಯದೆ ಇರುವ ಯಾವುದೇ ರೀತಿ ವಾಹನಗಳನ್ನು ಚಲಾಸುವಂತಿಲ್ಲ. ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಅನುಮತಿ ಪಡೆದ ಎಲ್ಲಾ ರೀತಿಯ ವಾಹನಗಳಿಗೆ ವಾಹನದ ನೊಂದಣಿ ಸಂಖ್ಯೆ ತಪ್ಪದೇ ನಮೂದಿಸಬೇಕು. ವಾಹನಗಳ ನೊಂದಣಿ ಸಂಖ್ಯೆ ಇಲ್ಲದ ವಾಹನಗಳನ್ನು ಚಲಾಯಿಸುವಂತಿಲ್ಲ.
ಖಾಸಗಿ, ಸರ್ಕಾರಿ ಅಟೋ, ಜೀಪ್ ಹಾಗೂ ದ್ವಿಚಕ್ರ ವಾಹನಗಳ ಸವಾರರು ಶಾಲಾ ಕಾಲೇಜು, ಆಸ್ಪತ್ರೆ ಆವರಣ ನ್ಯಾಯಾಲಯದ ಆವರಣದ ಹತ್ತಿರ ವಾಹನ ಚಲಾಯಿಸುವಾಗ ಜೋರಾಗಿ ಹಾರ್ನ್ ಮಾಡುವಂತಿಲ್ಲ ಹಾಗೂ ಸಂಚಾರಿ ವಾಹನದಲ್ಲಿ ಧ್ವನಿವರ್ಧಕಗಳನ್ನು ಆಳವಡಿಸಿಕೊಂಡು ಹೋಗಬಾರದು. ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕೆಂದು ಹಿರಿಯೂರು ತಾಲ್ಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ