ಶ್ರೀವಾಲ್ಮೀಕಿ ಜಯಂತ್ಯೋತ್ಸವ ಆಚರಣೆಗೆ ಎಲ್ಲರೂ ಕೈಜೋಡಿಸಬೇಕು : ಟಿ.ರಘುಮೂರ್ತಿ

ಚಳ್ಳಕೆರೆ

  ಪ್ರತಿವರ್ಷದಂತೆ ಈ ವರ್ಷವೂ ಸಹ ಮಹರ್ಷಿ ಶ್ರೀವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲು ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

   ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಅ.13ರ ಭಾನುವಾರ ಶ್ರೀವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ವಾಲ್ಮೀಕಿ ಸಮುದಾಯ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಆಚರಿಸಬೇಕಿದೆ.

    ಪ್ರತಿಯೊಂದು ಹಂತದಲ್ಲೂ ಸಮಾಜದ ಬಂಧುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಬೇಕಿದೆ. ವಿಶೇಷವಾಗಿ ವಾಲ್ಮೀಕಿ ಸಮುದಾಯದ ನೌಕರ ವರ್ಗ, ಮಹಿಳಾ ವರ್ಗ, ಯುವ ಸಂಘಟನೆ ಈ ಕಾರ್ಯಕ್ರಮಕ್ಕೆ ಹೆಚ್ಚು ಆದ್ಯತೆ ನೀಡಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಿ ಈ ಕಾರ್ಯಕ್ರಮವನ್ನು ಅದ್ದೂರಿಯಿಂದ ಆಚರಿಸಬೇಕು.

    ವಾಲ್ಮೀಕಿ ಜಯಂತಿ ದಿನದಂದು ಬೆಳಗ್ಗೆ 9.30ಕ್ಕೆ ಶ್ರೀವಾಲ್ಮೀಕಿ ವೃತ್ತದಿಂದ ಮೆರವಣಿಗೆ ಪ್ರಾರಂಭಿಸಿ ಚಿತ್ರದುರ್ಗ, ಬಳ್ಳಾರಿ, ಪಾದಗಟ್ಟೆ, ಪಾವಗಡ ರಸ್ತೆ, ನೆಹರೂ ವೃತ್ತ, ಬೆಂಗಳೂರು ರಸ್ತೆ ಮೂಲಕ ಶ್ರೀವಾಲ್ಮೀಕಿ ಕಲ್ಯಾಣ ಮಂಟಪಕ್ಕೆ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆಯಲ್ಲಿ 10 ವಿವಿಧ ಕಲಾತಂಡಗಳು ಭಾಗವಹಿಸಲಿದ್ದು, ಸಮುದಾಯದ ಎಲ್ಲಾ ಬಂಧುಗಳು ಮೆರವಣಿಗೆ ಮತ್ತು ಸಭೆಯಲ್ಲಿ ಭಾಗವಸಬೇಕು.

     ಕಾರ್ಯಕ್ರಮದ ಅಂಗವಾಗಿ ವಾಲ್ಮೀಕಿ ಸಮುದಾಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮ ನಡೆಸಲಾಗುವುದು. ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.

     ಕಾರ್ಯಕ್ರಮದ ಮೆರವಣಿಗೆಯಲ್ಲಿ ಡಿಜೆ ಬಳಕೆಯ ಬಗ್ಗೆ ಯುವಕರು ಉತ್ಸಾಹದಿಂದ ಇದ್ದು, ಇಲಾಖೆಯಿಂದ ಅನುಮತಿ ಪಡೆದು ಡಿಜೆಯನ್ನು ಬಳಸಲಾಗುವುದು. ಕಾರ್ಯಕ್ರಮದ ಮೆರವಣಿಗೆಯಲ್ಲಿ ಎಲ್ಲರೂ ಯಾವುದೇ ರೀತಿಯ ಲೋಪದೋಷಗಳು ಉಂಟಾಗದಂತೆ ಜಾಗ್ರತೆ ವಹಿಸಬೇಕು. ನಮ್ಮೆಲ್ಲರ ದೃಷ್ಠಿ ಕಾರ್ಯಕ್ರಮದ ಯಶಸ್ಸಿತ್ತನ ಇರಬೇಕು. ಮಹರ್ಷಿ ಶ್ರೀವಾಲ್ಮೀಕಿಯವರ ವಿಚಾರಧಾರೆಯನ್ನು ಸಂಪೂರ್ಣವಾಗಿ ತಿಳಿಸುವ ಸಲುವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಮುದಾಯದ ಎಲ್ಲರೂ ತಪ್ಪದೆ ಭಾಗವಹಿಸಿ ಶ್ರೀವಾಲ್ಮೀಕಿ ಮಹರ್ಷಿಗಳ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು.

    ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾತನಾಡಿ, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಹಲವಾರು ಮಹತ್ತರ ವಿಷಯಗಳ ಬಗ್ಗೆ ನಿರ್ಣಯ ಕೈಗೊಂಡಿದ್ದು, ಎಲ್ಲರೂ ಸಹ ಕಾರ್ಯಕ್ರಮದ ಹಿತದೃಷ್ಠಿಯಿಂದ ಸಭೆಯ ತೀರ್ಮಾನವನ್ನು ಜಾರಿಗೆ ತರುವಲ್ಲಿ ಸಹಕರಿಸಬೇಕೆಂದರು. ರಾಷ್ಟ್ರೀಯ ಹಬ್ಬಗಳ ತಾಲ್ಲೂಕು ಸಮಿತಿ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಕಾರವನ್ನು ಕಾನೂನು ಬದ್ದವಾಗಿ ನೀಡಲಿದೆ ಎಂದರು.

    ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿನಾಗಭೂಷಣ್, ಉಪಾಧ್ಯಕ್ಷೆ ತಿಪ್ಪಮ್ಮಲಿಂಗಾರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಜಿ.ವೀರೇಶ್, ರಂಜಿತಾ, ನಗರಸಭಾ ಸದಸ್ಯರಾದ ರಮೇಶ್‍ಗೌಡ, ಆರ್.ರುದ್ರನಾಯಕ, ವಿರೂಪಾಕ್ಷಿ, ವೈ.ಪ್ರಕಾಶ್, ಚಳ್ಳಕೆರೆಯಪ್ಪ, ಸುಮಾಭರಮಣ್ಣ, ಸಾವಿತ್ರಮ್ಮ, ಕವಿತಾಬೋರಣ್ಣ, ಸುಮಾಆಂಜನೇಯ, ದುಗ್ಗಾವರಪಾಲಯ್ಯ, ಡಾ.ನಾಗೇಂದ್ರ ನಾಯಕ, ಡಾ.ಲೋಕೇಶ್, ಡಾ.ಜಿ.ತಿಪ್ಪೇಸ್ವಾಮಿ, ಟಿ.ಸೂರನಾಯಕ ಎಲ್‍ಐಸಿ ತಿಪ್ಪೇಸ್ವಾಮಿ, ಸಿ.ಟಿ.ವೀರೇಶ್, ಮಹಿಳಾ ಘಟಕದ ಅಧ್ಯಕ್ಷೆ ಸ್ವಪ್ನ, ಪಿ.ತಿಪ್ಪೇಸ್ವಾಮಿ, ಡಿ.ಭರಮಣ್ಣ, ಸಿ.ಟಿ.ಶ್ರೀನಿವಾಸ್, ಡಾ.ಪ್ರೇಮಸುಧಾ, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಬಿಇಒ ವೆಂಕಟೇಶ್, ಪಿಎಸ್‍ಐ ನೂರ್ ಆಹಮ್ಮದ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap