ಎಲ್ಲಾ ಬಡ ಕುಟುಂಬಗಳಿಗೂ ಗ್ಯಾಸ್ ಸೌಲಭ್ಯ: ಜಿಎಂಎಸ್

ದಾವಣಗೆರೆ:

        ಅಡಿಗೆ ಅನಿಲ ಸಂಪರ್ಕ ಪಡೆದಯದ ಬಡ ಕುಟುಂಬಗಳನ್ನು ಗುರುತಿಸಿ, ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಲು ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

         ನಗರದ ಜಿ.ಎಂ.ಐ.ಟಿ. ಅತಿಥಿ ಗೃಹದಲ್ಲಿ ಶನಿವಾರ ಜಿಲ್ಲೆಯ ಎಲ್ಲಾ ಎಲ್.ಪಿ.ಜಿ. ವಿತರಕರ ಸಭೆ ನಡೆಸಿ ಮಾತನಾಡಿದ ಅವರು, ಉಜ್ವಲ ಯೋಜನೆಯಡಿ ಈಗಾಗಲೇ ದೇಶದ 5.85 ಕೋಟಿ ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ಈ ಯೋಜನೆಯನ್ನು ವಿಸ್ತರಿಸಿ ಯಾವುದೇ ರೀತಿಯ ಪಡಿತರ ಚೀಟಿ ಹೊಂದಿ ಗ್ಯಾಸ್ ಸಂಪರ್ಕ ಹೊಂದಿರದ ಬಡ ಕುಟುಂಬಗಳಿಗೂ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸುವ ಮಹತ್ತರ ನಿರ್ಧಾರವನ್ನು ಕೆಂದ್ರ ಸರ್ಕಾರ ಮಾಡಿದ್ದು, ಈ ಬಗ್ಗೆ ವ್ಯಾಪಕ ಪ್ರಚಾರ ನಡೆಸಿ, ಅರ್ಹ ಫಲಾನುಭವಿಗಳನ್ನು ಗುರುತಿಸಿ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸುವ ಕೆಲಸವಾಗಬೇಕು ಎಂದು ವಿತರಕರಿಗೆ ಸೂಚನೆ ನೀಡಿದರು.

         ಉಚಿತ ಗ್ಯಾಸ ಸಂಪರ್ಕ ಪಡೆಯಲು ಫಲಾನುಭವಿಗಳು ಯಾವುದೇ ತರಹದ ರೇಷನ್ ಕಾರ್ಡ್ ಹೊಂದಿರಬೇಕು, ರೇಷನ್ ಕಾರ್ಡ್‍ನಲ್ಲಿರುವ ಯಾವುದೇ ಸದಸ್ಯರು ಗ್ಯಾಸ್ ಸಂಪರ್ಕ ಹೊಂದಿರಬಾರದು, ಬ್ಯಾಂಕ್ ಖಾತೆ ಹೊಂದಿರಬೇಕು, ಹಾಗೂ ಬಡವರು ಎನ್ನುವುದಕ್ಕೆ ಸ್ವಯಂ ಧೃಢೀಕರಣ ಮಾಡಿಕೊಡಬೇಕು ಎಂದರು.

        ಉಜ್ವಲ ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ 75875 ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದ್ದು, ಇದರಲ್ಲಿ 53332 ಗ್ಯಾಸ್ ಸಂಪರ್ಕಗಳು ಪರಿಶಿಷ್ಟ ಜಾತಿ ಮತ್ತು ಪರಿಶಷ್ಟ ವರ್ಗಕ್ಕೆ ಸೇರಿವೆ. ದಾವಣಗೆರೆ ಜಿಲ್ಲೆಯಲ್ಲಿ 2014 ರವರೆಗೆ 23 ಎಲ್.ಪಿ.ಜಿ. ವಿತರಕರಿದ್ದರು ಈ ಪ್ರಮಾಣ ಈಗ 34 ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಗುವಂತೆ ಇನ್ನೂ 12 ಎಲ್.ಪಿ.ಜಿ. ವಿತರಕರುಗಳನ್ನು ಸದ್ಯದಲ್ಲಿಯೇ ನೇಮಕ ಮಾಡಲಾಗುವುದು, ಒಟ್ಟಾರೆಯಾಗಿ ವಿಸ್ತರಿಸಿರುವ ಉಜ್ವಲ ಯೋಜನೆಯಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆಯಾ ಭಾಗದ ಶಾಸಕರುಗಳಿಗೆ ಸರಿಯಾದ ಮಾಹಿತಿ ನೀಡಿ ಅವರನ್ನೂ ಸಹ ಸರಿಯಾದ ರೀತಿಯಲ್ಲಿ ತೊಡಗಿಸಿಕೊಂಡು ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸುವಂತೆ ಸೂಚನೆ ನೀಡಿದರು.

        ಸಭೆಯಲ್ಲಿ ಐ.ಓ.ಸಿ.ಎಲ್. ನೋಡಲ್ ಆಫೀಸರ್ ಅಮಿತೇಶ್, ಸೇರಿದಂತೆ ಹೆಚ್.ಪಿ. ಇಂಡೇನ್. ಭಾರತ್ ಕಂಪನಿಯ ಗ್ಯಾಸ್ ವಿತರಕರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link