ಪ್ರತಿ ವಿದ್ಯಾರ್ಥಿಗಳು ಉನ್ನತಶಿಕ್ಷಣವನ್ನು ಪಡೆದುಕೊಳ್ಳಬೇಕು : ಡಾ. ಪರಶುರಾಮ್

ತಿಪಟೂರು :

         ಪದವಿ ಮುಗಿದ ನಂತರ ವಿದ್ಯಾರ್ಥಿಗಳು ಕಾರಣಾಂತರದಿಂದ ಶೇ 25% ಮಾತ್ರವೇ ಉನ್ನತ ಶಿಕ್ಷಣವನ್ನು ಪಡೆದುಕೊಂಡು ತಮ್ಮ ಭವಿಷ್ಯವನ್ನು ಉಜ್ವಲವಾಗಿರೂಪಿಸಿಕೊಳ್ಳಿ ಎಂದು ತುಮಕೂರು ವಿ.ವಿ ಸಮಾಜ ಕಾರ್ಯ ಸಂಶೋಧನಾ ವಿಭಾಗದ ಪ್ರಧ್ಯಾಪಕರಾದ ಡಾ.ಪರಶುರಾಮ್.ಕೆ.ಜಿ ಕರೆನೀಡಿದರು.

        ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಮನೋವಿಜ್ಞಾನ ವಿಭಾಗ, ಐ.ಕ್ಯೂ.ಎ.ಸಿ. ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಸ್ನಾತಕೋತ್ತರ ಮನೋವಿಜ್ಞಾನ ವಿಭಾಗ ತುಮಕೂರು ವಿ.ವಿ ಹಾಗೂ ತುಮಕೂರು ಮನೋವಿಜ್ಞಾನ ಸಂಘದ(ರಿ) ಇವರ ಸಹಯೋಗದಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗ ದರ್ಶನ ಕಾರ್ಯಗಾರವನು ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ತಿಪಟೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸುಮಾರು 1300 ವಿದ್ಯಾರ್ಥಿಗಳಿದ್ದಾರೆ ಆದರೆ ಇವರಲ್ಲಿ ಸ್ನಾತಕೋತ್ತರ ಪದವಿಯನ್ನು ಎಲ್ಲರೂ ಪಡೆಯಬೇಕೆಂಬ ನಿಟ್ಟಿನಲ್ಲಿ ನಮ್ಮ ತುಮಕೂರು ವಿ.ವಿ.ಯಲ್ಲಿ ವೃತ್ತಿಪರ ತರಗತಿಗಳಾದ ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ ಅಲ್ಲದೇ ಸುಮಾರು 25 ಕ್ಕೂ ಹೆಚ್ಚಿನ ಸ್ನಾತಕೋತ್ತರ ವಿಷಯಗಳಿದ್ದು ಅವುಗಳನ್ನು ನೀವೆಲ್ಲರೂ ಸದುಪಯೋಗಪಡಿಸಿಕೊಂಡು ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದ ಅವರು ಕಳೆದ ಸಾಲಿನಲ್ಲಿ ನಮ್ಮ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಲ್ಲದೆ ಅರ್ಜಿಸಲ್ಲಿಸಿದ ಎಲ್ಲರಿಗೂ ಸೀಟುಗಳನ್ನು ಕೊಟ್ಟಿದ್ದೇವೆ, ಮುಂದಿನ ದಿನಗಳಲ್ಲಿ ನೀವೆಲ್ಲರೂ ಸ್ನಾತಕೋತ್ತರ ಪದವಿಯನ್ನು ಗಳಿಸಿಕೊಳ್ಳಬೇಕೆಂದರು.

        ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಗುಣಮಟ್ಟ ಕುಸಿಯುತ್ತಿದೆ : ಡಾ. ಲೋಕೇಶ್.ಎಂ.ಯು ಇಂದು ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಗುಣಮಟ್ಟಕುಸಿಯುತ್ತಿರುವುದು ಕಳವಳವನ್ನುಂಟುಮಾಡುತ್ತಿದೆ. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪ್ರತಿವರ್ಷ 6 ರಿಂದ 7 ಜನ ಪದವಿಯನ್ನು ಪಡೆಯುತ್ತಾರೆ, ಆದರೆ ಇವರಲ್ಲಿ ಕೇವಲ 2 ಸಾವಿರ ವಿದ್ಯಾರ್ಥಿಗಳು ಮಾತ್ರ ಸ್ನಾತಕೋತ್ತರ ಪದವಿಯನ್ನು ಪಡೆಯವತ್ತ ಗಮನಹರಿಸುತ್ತಿದ್ದರೆ ಉಳಿದ ಶೇಕಡ ಅಭ್ಯಾಸವನ್ನು ಮೊಟಕುಗಳಿಸಿ, ಕೆಲಸ, ವಿವಾಹಗಳತ್ತ ಮುಖಮಾಡುತ್ತಿದ್ದಾರೆ ಆದ್ದರಿಂದ ನಾವಿಂದು ಈ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಾವು ವಿಷಯಗಳನ್ನು ಓದಿದರೆ ವಿಫುಲ ಅವಕಾಶಗಳು ಇವೆ ಎಂದು ತಿಳಿದು ಓದಬೇಕು ಅದಕ್ಕೋಸ್ಕರ ಇಂತಹ ಕಾರ್ಯಗಾರಗಳನ್ನು ಬಳಸಿಕೊಳ್ಳಬೇಕೆಂದರು.

         ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲ ರಾಜಣ್ಣ, ಇಂದು ರಾಷ್ಟ್ರದಲ್ಲಿ ಸ್ತ್ರೀಶಕ್ತಿ-ದೀಶಕ್ತಿಯೆಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲು ಮುಂದುವರೆದು ಶಿಕ್ಷಣ ಕ್ಷೇತ್ರದಲ್ಲೂ ಹೆಚ್ಚುಪಾಲನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಪದವಿಯ ನಂತರ ವೃತ್ತಿಗೆ ಮತ್ತು ಜೀವನಕ್ಕೆ ಉಪಯೋಗವಾಗುವಂತಹ ಹಲವಾರು ಆಯ್ಕೆಗಳಿವೆ ಅವುಗಳಲ್ಲಿ ತೊಡಗಿಸಿಕೊಂಡು ದೇಶವನ್ನು ನಿರ್ಮಿಸುವ ಕಾಯಕದಲ್ಲಿ ತೊಡಗಬೇಕೆಂದರು.

         ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸುಜಾತ.ಎಂ., ಅಂಕಲೇಶ್, ಕು. ಕಾವ್ಯ, ಮತ್ತು ಕಾಲೇಜಿನ ಪ್ರೋಪೆಸರ್‍ಗಳಾದ ಎಸ್.ಆರ್.ನಾಗಭೂಷಣ್, ನರಸಿಂಹರಾಜು, ಜಗದೇವಪ್ಪ, ಅನುಪ್ರಸಾದ್, ಚಿಕ್ಕಹೆಗಡೆ, ದೈಹಿಕ ಶಿಕ್ಷಣ ನಿರ್ದೇಶಕರಾದ ಮನೋಜ್‍ಕುಮಾರ್ ಮುಂತಾದವರಿದ್ದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link