ತಿಪಟೂರು :
ಪ್ರತೀ ವಾರ ತಾಲ್ಲೂಕಿನ ಅಧಿಕಾರಿಗಳ ಸಭೆ ಕರೆದು ನೀರು ಮತ್ತು ಮೇವಿನ ಸ್ಥಿತಿ-ಗತಿಗಳ ಬಗ್ಗೆ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್. ಬಿ. ಆರತಿ. ತಿಳಿಸಿದರು.
ಇಂದು ಸಂಜೆ ತಮ್ಮ ಕಛೆರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಇಲ್ಲಿವರೆಗೂ ಭೀಕರ ಬರಗಾಲಕ್ಕೆ ತುತ್ತಾಗಿದ್ದ ತಾಲ್ಲೂಕಿನ ಹೊನ್ನವಲ್ಲಿ ಹೋಬಳಿಯ ಬಾಗುವಾಳ ( ಮುನಿಯಪ್ಪನ ಆಲದಮರ), ಹಾಲ್ಕುರಿಕೆ. ಮತ್ತು ಬಳುವನೇರಲು ಗ್ರಾಮಗಳಲ್ಲಿ ಮೇವು ಬ್ಯಾಕ್ ಆರಂಭಿಸಿ ತಲಾ ರಾಸಿಗೆ 5 ಕೆ.ಜಿ. ಯಂತೆ 15 ದಿನಕ್ಕಾಗುವಷ್ಟು ಮೇವು ವಿತರಿಸಲಾಗುತ್ತಿತ್ತು.
ಮೇವಿನ ಸಂಗ್ರಹಣೆ ಮತ್ತು ಗೊದಾಮಿನ ಸಾಮಥ್ರ್ಯ ನೋಡಿಕೊಂಡು ಇಂದು ಕಸಬಾ ಹೋಬಳಿಯ ಕೊನೇಹಳ್ಳಿಯಲ್ಲೂ ಮೇವು ಬ್ಯಾಂಕ್ ಆರಂಭಿಸಲಾಗಿದೆ. ಮತ್ತು ನಾಳೆಯಿಂದ ಕಸಬಾ ಹೋಬಳಿಯ ಕಸಬಾ ಹೋಬಳಿಯ 6 ಪಶು ಆಸ್ಪತ್ರೆಗಳಲ್ಲಿ ಪ್ರಾರಂಭಿಕವಾಗಿ ತಲಾ 10 ಕಾರ್ಡು, ನಂತರ 20 ಕಾರ್ಡಿನಂತೆ ಮೇವು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಇದರ ನಂತರ ಗೋದಾಮಿನ ಲಭ್ಯತೆ ಆಧರಿಸಿ ಕಿಬ್ಬನಹಳ್ಳಿ ಹೋಬಳಿಯಲ್ಲೂ ಮೇವು ಬ್ಯಾಂಕ್ ಆರಂಭಿಸಲಾಗುವುದು ಎಂದರು.
ತಾಲ್ಲೂಕಿನ ಮಸವನಘಟ್ಟ ಗ್ರಾಮ ಪಂಚಾಯ್ತಿಯ ಮಾಳೇಹಟ್ಟಿ, ಮಣಕಿಕೆರೆ ವ್ಯಾಪ್ತಿಯ ಹಾಲೇನಹಳ್ಳಿ, ಹೊಸೂರು, ಮೀಸೆ ತಿಮ್ಮನಹಳ್ಳಿ. ಹಿಂಡಿಸ್ಕೆರೆ ವ್ಯಾಪ್ತಿಯ ಯಗಚಿಕಟ್ಟೆ. ಮತ್ತಿಹಳ್ಳಿ ವ್ಯಾಪ್ತಿಯ ಮಾದಿಹಳ್ಳಿ ಗೊಲ್ಲರಹಟ್ಟಿ. ಸಾರ್ಥವಳ್ಳಿ ವ್ಯಾಪ್ತಿಯು ಗೆದ್ಲೇಹಳ್ಳಿ. ಹಾಲ್ಕುರಿಕೆ ವ್ಯಾಪ್ತಿಯ ಸತ್ತೇರಾಮನಹಳ್ಳಿ. ಮತ್ತು ಗುಡಿಗೊಂಡನಹಳ್ಳಿ ವ್ಯಾಪ್ತಿಯ ಭೈರನಾಯಕನಹಳ್ಳಿ ಗ್ರಾಮಗಳಿಗೆ ತಲಾ ಟ್ಯಾಂಕರ್ ನೀರಿಗೆ ರೂ 550/- ರಂತೆ ಇಲ್ಲಿವರೆಗೂ ಒಟ್ಟು 634 ಲೋಡ್ ಗಳಷ್ಟು ಟ್ಯಾಂಕರ್ ನೀರನ್ನು ಸರಬರಾಜು ಮಾಡಲಾಗಿದೆ. ಮತ್ತು ಖಾಸಗಿ ಕೊಳವೆಬಾವಿಯಿಂದ ಮಾಸಿಕ ಬಾಡಿಗೆ ರೂ 17 ಸಾವಿರದಂತೆ ಹಾಲ್ಕುರಿಕೆ ಸಮೀಪದ ದೊಡ್ಡೀಕಟ್ಟೆ ಗ್ರಾಮಕ್ಕೆ, ಮತ್ತು ಗ್ಯಾರಘಟ್ಟ ಸಮೀಪದ ಅನಿವಾಳ ಮುಜರೆ ಸಾಬರ ಪಾಳ್ಯಕ್ಕೆ ಮಾಸಿಕ ಬಾಡಿಗೆ ರೂ 15 ಸಾವಿರಕ್ಕೆ ಖರೀಧಿಸಿದ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಸುನೀಲ್ ಕುಮಾರ್. ಮತ್ತು ಗ್ರಾಮೀಣ ಕುಡಿವ ನೀರು ವಿಭಾಗದ ಸಹಾಯಕ ಅಭಿಯಂತರ ರಾಜೇಂದ್ರ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
