ಜಗಳೂರು:
ಸಮಾಜ ಗುರುತಿಸುವಂತ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಡಾ. ಶ್ರೀ ಶಿವಮೂರ್ತಿ ಮುರಾಘಾ ಶರಣರು ಹೇಳಿದರು.
ತಾಲೂಕಿನ ತುಪ್ಪದಹಳ್ಳಿ ಗ್ರಾಮದಲ್ಲಿ ಭಾನುವಾರ ಜಿ. ಹನುಮಂತಪ್ಪ ಸಮಾಜ ಸ್ಪಂದನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಛೇರ್ಮನ್ ದಿ.ಜಿ ಹನುಮಂತಪ್ಪ ಇವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಮತ್ತು ಟ್ರಸ್ಟ್ ಉದ್ಘಾಟನೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ನೋಟ್‍ಬುಕ್ ವಿತರಣಾ ಸಮಾರಂಭದ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು.
ದಿ. ಹನುಮಂತಪ್ಪನವರು ತಮ್ಮ ಜೀವತಾವದಿಯಲ್ಲಿ ಧಾನ,ಧರ್ಮ ಮಾಡುವ ಮೂಲಕ ಸಮಾಜ ಸೇವೆ ಮಾಡಿದ್ದಾರೆ. ತಾವೂ ಗಳಿಸಿದ ಆಸ್ತಿ, ಅಂತಸ್ತು ಹಿಂದೆ ಬರುವುದಿಲ್ಲವೆಂದು ಅರಿತ ಅವರು ತಮ್ಮ ಜಮೀನಲ್ಲಿ ನಿವೇಶ ಮಾಡಿ ಬಡವ, ಹಿಂದುಳಿದ ವರ್ಗಗಳಿಗೆ ಹಂಚಿಕೆ ಮಾಡಿ ಮನೆ ನಿರ್ಮಿಸಿಕೊಟ್ಟಿದ್ದರಿಂದ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ಮಗ ಪ್ರಹ್ಲಾದಪ್ಪ ಕೂಡ ತಂದೆಯ ಹಾದಿಯಲ್ಲಿ ನಡೆದು ಆರೋಗ್ಯ ಶಿಬಿರ, ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಬುಕ್ ವಿತರಿಸುವ ಮೂಲಕ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಸತೀಶ್ ಜಾರಕಿಹೊಳೆ ರಾಜ್ಯದ ಉತ್ತಮ ನಾಯಕರಾಗಿದ್ದಾರೆ, ಸಂಘಟನೆಯ ಮೂಲಕ ಜನಜಾಗೃತಿ ಗೊಳಿಸಿ ಮೌಢ್ಯತೆ, ಕಂದಾಚಾರಗಳು ವಿರುದ್ದ ನಿಂತಿದ್ದಾರೆ, ಅವರು ಯಾವಾಗಲು ಕ್ರಿಯಾಶೀಲರಾಗಿ, ಉತ್ತಮ ರಾಜಕಾರಣಿಯಾಗಿದ್ದಾರೆ ಎಂದರು.
ಮಾಜಿ ಸಚಿವ ಹಾಗೂ ಶಾಸಕ ಸತೀಶ್ ಜಾರಕಿಹೊಳೆ ಮಾತನಾಡಿ, ಶೈಕ್ಷಣಿವಾಗಿ ಪ್ರಗತಿ ಕಾಣಬೇಕು, ಸಮಾಜ ಸಂಘಟನೆಯಾಗಿ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. 12ನೇ ಶತಮಾನದ ಕಲ್ಯಾಣ ರಾಜ್ಯವಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದರು.
ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, 22ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ತುಪ್ಪದಹಳ್ಳಿ ಕೆರೆ ಸೇರ್ಪಡೆಯಾಗಿತ್ತು. ಆದರೆ ಕೆಲ ತಾಂತ್ರಿಕ ತೊಂದರೆಯಿಂದ ಸಾದ್ಯವಾಗಿಲ್ಲ. ಮುಂದಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಸೇರ್ಪಡೆಯಾಗಿದ್ದು ಕೆರೆ ತುಂಬಿಸುವ ವಿಶ್ವಾಸ ವ್ಯಕ್ತಪಡಿಸಿದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು, ಅಸಗೋಡು ಜಯಸಿಂಹ ಮಾತನಾಡಿದರು.
ಈ ಸಂದರ್ಭದಲ್ಲಿ ದಾವಣಗೆರೆ ವಿರಕ್ತ ಮಠದ ಬಸವ ಪ್ರಭು ,ಕರ್ನಾಟಕ ಲೋಕ ಸೇವಾ ಆಯೋಗ ಸದಸ್ಯ ಪ್ರೋ.ರಂಗರಾಜ ವನದುರ್ಗ, ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಡಿ.ಎಂ ಸಾಲಿ, ಟ್ರಸ್ಟ್ ಅಧ್ಯಕ್ಷ ಡಾ.ಎಂ ಎಚ್ ಪ್ರಹ್ಲಾದಪ್ಪ, ಕೌಶಲ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷೆ ಪುಷ್ಪ ಲಕ್ಷ್ಮಣ್‍ಸ್ವಾಮಿ, ಕೆಪಿಸಿಸಿ ಎಸ್ಟಿ ವಿಭಾಗದ ರಾಜಾಧ್ಯಕ್ಷ ಕೆ.ಪಿ ಪಾಲಯ್ಯ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್, ಕೆಪಿಎಸ್ ಸಿ ಸದಸ್ಯರಾದ ರಂಗರಾಜ ವನದುರ್ಗ , ಕಾಲೇಜು ರಾಜ್ಯ ಕಾಲೇಜು ಶಿಕ್ಷಕರ ಒಕ್ಕೂಟ ಮಾಜಿ ಅಧ್ಯಕ್ಷರಾದ ಮುರುಗೇಂದ್ರಪ್ಪ, ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಯು.ಜಿ ಶಿವಕುಮಾರ್ ಸೇರಿದಂತೆ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
