ಗ್ರಾಮಗಳಲ್ಲಿ ಕಲಹ ಬರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ : ಶಾಂತವೀರ ಸ್ವಾಮೀಜಿ

ದಾವಣಗೆರೆ
 
          ಗ್ರಾಮಗಳಲ್ಲಿ ಕಲಹ ಬರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶ್ರೀ ಜಗದ್ಗುರು ಕುಂಚಿಟಿಗ ಮಾಹ ಸಂಸ್ಥಾನ ಮಠದ ಡಾ ಶ್ರೀ ಶಾಂತವೀರ ಮಹಾಸ್ವಾಮೀಜಿ ಸಲಹೆ ನೀಡಿದರು.  
 
         ಅವರು ದಾವಣಗೆರೆ ಜಿಲ್ಲೆ ಹೊನ್ನಳಿ ತಾಲೂಕಿನ ನರಸಗೋಂಡನಹಳ್ಳಿ ಹಾಗು  ಪಲವನಹಳ್ಳಿ ಗ್ರಾಮಸ್ಥರು ಹೊಸದುರ್ಗದ ಶ್ರೀಮಠದಲ್ಲಿ ಆಯೋಜಿಸಿದ್ದ  ಸಭೆಯಲ್ಲಿ ಆಶೀರ್ವಾಚನ ನೀಡುತ್ತ  ಅವಿಭಕ್ತ ಕುಟುಂಬದ ವತವರಣ ಕಡಿಮೆಯಾಗಿರುವುದೆ ಸಮಾಜದಲ್ಲಿ ಗ್ರಾಮಗಳಲ್ಲಿ ಕುಟುಂಬಗಳಲ್ಲಿ ಸ್ವರ್ಥ ಅಸಹಾನೆ ಅಶಾಂತಿ ಅಸಹಕಾರ ಮನೋಭಾವ ಬೆಳೆಯಲು ಕಾರಣ ಎಂದು ಬೇಸರದಿಂದ ನುಡಿದರು.
 
          “ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ” ಎನ್ನುವ ಬಸವಣ್ಣನವರ ಸಂದೇಶವನ್ನು ಸಂಸಾರದಲ್ಲಿ ಪಾಲಿಸಿದರೆ ಸಂಸಾರದಲ್ಲಿ ಸದ್ಗತಿ ಕಾಣಲು ಸಾಧ್ಯ ಅಧುನಿಕ ಜಗತ್ತಿನ ಆಕರ್ಷಣೆ ಮನವ ಸಂಬಂಧಗಳನ್ನು  ಸಡಿಲಗೊಳ್ಳಲು ದಾರಿ ಮಾಡಿದೆ ಮೊಬೈಲ್ ಕಂಪ್ಯೂಟರ್ ಗಳಿಗೆ ವೈರಸ್ ದಾಳಿ ಮಾಡಿದಗ ಅಂಟ್ಟಿವೈರಸ್ ಹಾಕಿಸಿ ಸರಿಪಡಿಸುವಂತೆ ಮನುಷ್ಯ ದಾರಿ ತಪ್ಪಿದಾಗ ಗುರುಗಳ ಉಪದೇಶ ಮಾರ್ಗದರ್ಶನದ ಮೂಲಕ ಸರಿದಾರಿಗೆ ತರುವುದು ಅವಶ್ಯವಾಗಿದೆ ವಸ್ತುಗಳು ಕೆಟ್ಟರೆ ಸರಿಮಾಡಬಹುದು.
         ಮಾನವನ ಮನಸ್ಸು ಕೆಟ್ಟರೆ ಗರುಗಳ ಸತ್ಸಂಗ ಬೇಕು ವಸ್ತ್ರ ಮಾಸಿದರೆ ಮಾಡಿವಳಂಗಿಕ್ಕುವುದು ಮಂಡೆ ಮಾಸಿದರೆ ಮಜ್ಜನವ ಮಾಡುವುದು ಮನದ ಮೈಲಿಗೆ ತೊಳೆಯಲು ಶರಣರ ಗುರುಗಳ ಮಹಾತ್ಮರ ಅನುಭಾವ ಕೇಳುವುದು ಎಂದು ಮಾರ್ಮೀಕವಾಗಿ ಹೇಳಿದರು ನರಸಗೋಂಡನಹಳ್ಳಿ ಗ್ರಾಮದ ರಘು ಶ್ರೀನಿವಾಸ್  ರಮೇಶ್  ಪಲವನಹಳ್ಳಿ ಗಿರೀಯಪ್ಪ ನರಸಿಂಹಪ್ಪ ರಂಗಪ್ಪ ಪಕಿರಪ್ಪ  ಗ್ರಾಮದ  ಕುಮಾರಿ ಬಿಂದು ಪ್ರಾರ್ಥನೆ ಮಾಡಿದರು ರವೀಂದ್ರ ಸ್ವಾಗತಿಸಿದರು ಶಿಕ್ಷಕರಾದ ಮಂಜುನಾಥ್ ನಿರೂಪಣೆ ಮಾಡಿದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap