ಸಿಎಂ ವಿರುದ್ಧ ಗುಡುಗಿದ ಮಾಜಿ ಸಿಎಂ..!

ಬೆಂಗಳೂರು :

     ಕರ್ನಾಟಕದ ನೀರು ಮಹಾರಾಷ್ಟ್ರಕ್ಕೆ ಬಿಡುತ್ತೇವೆಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಅವರು, ಯಡಿಯೂರಪ್ಪನವರಿಗೆ ನಾಚಿಕೆ ಆಗಬೇಕು. ನಮಗೆ ಮೋಸ ಮಾಡಿದವರ ಪರ ಮಾತನಾಡುತ್ತಿದ್ದಾರೆ. ಇದನ್ನು ನಾಡಿನಜನಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

     ಜೆಪಿ ನಗರದತಮ್ಮ ನಿವಾಸದಲ್ಲಿಇಂದು ಸುದ್ದಿಗಾರರೊಂದಿಗೆ ಮಾತನಾಡಿದಅವರು, ಮೊದಲು ನಮ್ಮರಾಜ್ಯದಜನರ ಬಗ್ಗೆ ಯಡಿಯೂರಪ್ಪನವರು ಯೋಚನೆ ಮಾಡಲಿ. ಅದು ಬಿಟ್ಟು ನಮಗೆ ಮೋಸ ಮಾಡಿದ ಸರ್ಕಾರಕ್ಕೆ ನೀರು ಬಿಡುವುದು ಬೇಡಎಂದರು.

     ಈ ಹಿಂದೆ ನೀರಾವರಿಗೆ ಸಹಕಾರಕೊಡಲಿಲ್ಲವೆಂದು ಶ್ರೀಮಂತ ಪಾಟೀಲ್‍ಅವರುರಾಜೀನಾಮೆಕೊಟ್ಟೆಅಂತ ಹೇಳಿದ್ರು. ಆದರೆ, ನನ್ನ ಅವಧಿಯಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದರು. ಆದರೆ, ಅವತ್ತುಅವರು ನೀರು ಬಿಡಲಿಲ್ಲ.

      ಇಂತಹ ಸರ್ಕಾರದ ಪರ ಸಿಎಂ ಯಡಿಯೂರಪ್ಪನವರು ಮತ ಕೇಳಲು ಹೋಗಿದ್ದಾರೆಎಂದುಅಸಮಾಧಾನ ವ್ಯಕ್ತಪಡಿಸಿದರು.
ಮಹದಾಯಿ ಯೋಜನೆಗೆ ಮಹಾರಾಷ್ಟ್ರ ಸರ್ಕಾರಅನುಮತಿಕೊಡಲಿಲ್ಲವೆಂದು ನಮ್ಮರೈತರು ಹೋರಾಟ ಮಾಡುತ್ತಿದ್ದಾರೆ. ಮೊದಲು ನಮ್ಮಜನರ ಕಷ್ಟ ನೋಡಿ. ಅಮೇಲೆ ಮಹಾರಾಷ್ಟ್ರದವರನ್ನು ಸಿಎಂ ಗಮನಿಸಲಿ ಎಂದು ಸಲಹೆ ನೀಡಿದರು.

     ನರೇಂದ್ರ ಮೋದಿ ಪ್ರಮಾಣ ವಚನ ಕಾರ್ಯಕ್ರಮದ ಸಂದರ್ಭದಲ್ಲಿ ನಾನು ಮಹರಾಷ್ಟ್ರ ಸಿಎಂ ಫಡ್ನವಿಸ್ ಗೆ ಮನವಿ ಮಾಡಿದ್ದೆ. ಮೋದಿ ಅವರಿಗೂ ಮನವಿ ಮಾಡಿದ್ದೆ. ಆದರೆ, ಅವರು ಮಾತ್ರ ನಮಗೆ ನೀರು ಬಿಡಲಿಲ್ಲ. ಆ ಮೇಲೆ ನಮಗೂ ಮಾತುಕತೆಗೆ ಅವಕಾಶ ಕೊಡಲಿಲ್ಲ. ನಮ್ಮಜನರಜೀವನದಜೊತೆಚೆಲ್ಲಾಟಆಡಿದವರ ಪರ ಮತ ಕೇಳುವುದಕ್ಕೆ ಹೋಗಿದ್ದಾರೆ. ನಮ್ಮರಾಜ್ಯದರೈತರ, ಜನರ ಸಮಸ್ಯೆ ಬಗ್ಗೆ ಮೊದಲು ಯಡಿಯೂರಪ್ಪ ಗಮನ ಕೊಡಲಿ ಎಂದುಟಾಂಗ್ ನೀಡಿದರು.

      ಜೆಡಿಎಸ್ ನ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಹಾಗೂ ಮಾಜಿ ಸಚಿವ ಸಾ.ರಾ. ಮಹೇಶ್ ನಡುವೆಆಣೆ ಪ್ರಮಾಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್‍ಡಿಕೆ, ಕೆಲವರುಆಣೆ ಪ್ರಮಾಣದ ಬಗ್ಗೆ ಹೊರನೋಟಇಲ್ಲದವರು. ಅವರಿಗೆದೇವರ ಬಗ್ಗೆ ನಂಬಿಕೆ0iÉುೀ ಇಲ್ಲಎಂದರು.
ಈ ಹಿಂದೆ ಧರ್ಮಸ್ಥಳದಲ್ಲಿ ನಾನು ಆಣೆ ಮಾಡಿದ್ದೇನೆ. ಸತ್ಯಇರೋದರ ಬಗ್ಗೆ ನಾನು ಆಣೆ ಮಾಡಿದ್ದೆ. ಈ ಹಿಂದೆ ಧರ್ಮಸ್ಥಳದಲ್ಲಿ ಇದೇ ರೀತಿಯ ಡ್ರಾಮ ನಡೆದಿತ್ತು.

     ಯಡಿಯೂರಪ್ಪ ದೇವಸ್ಥಾನಕ್ಕೆ ಬಂದಿದ್ರು. ನಾನು ಕೂಡ ಧರ್ಮಸ್ಥಳಕ್ಕೆ ಬಂದಿದ್ದೆ. ಆದರೆ ಯಡಿಯೂರಪ್ಪ ಬಂದುದೇವರಿಗೆ ನಮಸ್ಕಾರ ಮಾಡಿ ಹೊರಟು ಹೋದರು. ಆದರೆ ನಾನು ಅಲ್ಲಿ ನಾನು ಹೇಳಿರುವುದು ಸತ್ಯ, ಸತ್ಯ, ಸತ್ಯಎಂದು ಮೂರು ಬಾರಿ ಪ್ರಮಾಣ ಮಾಡಿದೆ. ಆದಾದ ನಂತರ ಯಡಿಯೂರಪ್ಪ ಅಧಿಕಾರ ಬಿಡಬೇಕಾದ ಸಂದರ್ಭ ಬಂತು. ಅವರು ಹಲವಾರುದೇಶದ ಸಂವಿಧಾನಗಳಲ್ಲಿ ಅವರುರಕ್ಷಣೆ ಪಡೆದುಕೊಂಡರು. ಆದರೆಅವರುದೇವರಿಂದರಕ್ಷಣೆ ಪಡೆದುಕೊಳ್ಳುವುದಕ್ಕೆ ಆಗಿಲ್ಲಎಂದು ಹೇಳಿದರು.

    ಇವತ್ತು ಮೈಸೂರಿನಲ್ಲಿ ನಡೆದ ಈ ಪ್ರಕರಣಅವಶ್ಯಕತೆಇರಲಿಲ್ಲ. ಹೆಚ್. ವಿಶ್ವನಾಥ್‍ಅವರು ಬಿಜೆಪಿಗೆ ಹೋಗಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ವಿಶ್ವನಾಥ್‍ಖರೀದಿ ಬಗ್ಗೆ ಜನ ಸಾಮಾನ್ಯರಿಗೂಗೊತ್ತಿದೆ. ಯಾವ ವ್ಯಕ್ತಿ ನಿಮ್ಮನ್ನು ಎಳೆದಿದ್ದಾರೆ ಅವರ ಬಗ್ಗೆ ನೀವು ಚರ್ಚೆ ಮಾಡುವಅಗತ್ಯತೆಇಲ್ಲವೆಂದು ಸಾ.ರಾ.ಮಹೇಶ್‍ಅವರಿಗೆ ನಾನು ಮನವಿ ಮಾಡುತ್ತೇನೆ. ಚಾಮುಂಡಿಬೆಟ್ಟದಲ್ಲಿ ನಡೆದ ಡ್ರಾಮ ಅಗತ್ಯ ಇರಲಿಲ್ಲ. ಮುಂದಿನ ತೀರ್ಮಾನವನ್ನು ಹುಣಸೂರಿನಜನರು ಮಾಡುತ್ತಾರೆ. ಇವತ್ತುಚಾಮುಂಡಿ ಸನ್ನಿಧಿಯಲ್ಲಿ ಏನು ಆಗಿದೆಡ್ರಾಮ. ಅದಕ್ಕೆ ತಾಯಿ ಚಾಮುಂಡೇಶ್ವರಿ ತಾಯಿ ಅವರಿಗೆ ತೋರಿಸುತ್ತಾಳೆ ಎಂದು ಮಾರ್ಮಿಕವಾಗಿ ನುಡಿದರು.

ರಾಜೀನಾಮೆ ಕೊಟ್ಟಿರುವುದು ನಿಜ :

    ವಿಧಾನಸಭಾಧ್ಯಕ್ಷರಿಗೆ ಸಾ.ರಾ. ಮಹೇಶ್‍ ರಾಜೀನಾಮೆ ಕೊಟ್ಟಿರುವುದು ನಿಜ. ನಾನು ಮತ್ತು ಸಾ.ರಾ. ಮಹೇಶ್ ಸ್ವಂತ ಅಣ್ಣ ತಮ್ಮಂದಿರ ರೀತಿ ಇದ್ದೇವೆ. ಅವರ ಸ್ವಭಾವದ ಬಗ್ಗೆ ನನಗೆ ಗೊತ್ತಿದೆ. ಅವರು ಕೊಟ್ಟಿರುವ ರಾಜೀನಾಮೆಯನ್ನು ವಾಪಸು ಪಡೆಯುತ್ತಾರೆ. ಸ್ಪೀಕರ್ ಅವರ ಜೊತೆ ನಾನು ಈಗಾಗಲೇ ಮಾತನಾಡಿದ್ದೇನೆ. ಅವರು ರಾಜೀನಾಮೆಯನ್ನು ವಾಪಸ್ ಪಡೆಯುತ್ತಾರೆ ಎಂದು ಹೇಳಿದರು.

ನಾಯಕತ್ವ ತ್ಯಜಿಸಲು ಸಿದ್ದ :

    ಹಿರಿಯ ನಾಯಕ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ನಾಯಕರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನನ್ನ ನಾಯಕತ್ವದಲ್ಲಿ ಅವರಿಗೆ ವಿಶ್ವಾಸಇಲ್ಲದಿದ್ದರೆ ನಾನು ನಾಯಕತ್ವ ತ್ಯಜಿಸಲು ಸಿದ್ದ. ಅಸಮಾಧಾನವಿದ್ದರೆ ದೇವೇಗೌಡರ ಜೊತೆ ಮಾತನಾಡಿಕೊಂಡು ಹೊಸ ನಾಯಕತ್ವ ಹುಡುಕಿಕೊಳ್ಳಲಿ. ಅದಕ್ಕೆ ನನ್ನ ಯಾವುದೇ ವಿರೋಧ ಇಲ್ಲ ಎಂದರು.

    ಎಲ್ಲರ ಜೊತೆ ನಾನು ಗೌರವಯುತವಾಗಿ ನಡೆದುಕೊಂಡಿದ್ದೇನೆ. ಯಾರಿಂದಲೂ ಆ ವಿಚಾರವಾಗಿ ನಾನು ಸರ್ಟಿಫಿಕೇಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಅವರಿಗೆ ಬೇಕಾದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಹೇಳಿದರು.

ವಾಪಸ್‍ಇಲ್ಲ :

      ಜೆಡಿಎಸ್ ನ ಅನರ್ಹ ಶಾಸಕರನ್ನು ವಾಪಸ್ ತೆಗೆದುಕೊಳ್ಳುವ ಪ್ರಶ್ನೆಯೇ  ಇಲ್ಲ. ಶಾಸಕ ಕೆ.ಗೋಪಾಲಯ್ಯ ಎರಡು ಬಾರಿ ನಮಗೆ ಮೋಸ ಮಾಡಿದ್ದಾರೆ. ಅವರು ನಮಗೆ ಟೋಪಿ ಹಾಕಿದ್ದಾರೆ. ದೇವೇಗೌಡರ ಹತ್ತಿರ ಬೇಡಿಕೊಂಡು ಮತ್ತೆ ಪಕ್ಷಕ್ಕೆ ವಾಪಸ್‍ಆದರು. ಮತ್ತೆಅವರೇ ನಮಗೆ ದ್ರೋಹ ಮಾಡಿದರು. ಮತ್ತೆಅವರನ್ನು ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲಎಂದು ಸ್ಪಷ್ಟವಾಗಿ ಹೇಳಿದರು.

     ಸಾಲಮನ್ನಾ ವಿಚಾರ ಸಂಬಂಧ ಮಾತನಾಡಿದ ಹೆಚ್‍ಡಿಕೆ, ಮೊನ್ನೆ ಯಡಿಯೂರಪ್ಪ ಅವರುಗಾಬರಿ ಹೇಳಿಕೆ ಕೊಟ್ಟಿದ್ದಾರೆ. ನಾನು ಘೋಷಣೆ ಮಾಡಿದ ಸಾಲಮನ್ನಾದಿಂದ ಯಡಿಯೂರಪ್ಪ ಅವರಿಗೆ ಯಾವುದೇ ಹೊರೆ ಆಗುವುದಿಲ್ಲ. ನಾನು ಬಜೆಟ್ ನಲ್ಲಿ ಹಣಇಟ್ಟಿದ್ದೇನೆ. ನನ್ನ ಸಾಲಮನ್ನಾಗೆ ಯಡಿಯೂರಪ್ಪ ಹೊಸ ಹಣ ಸಂಗ್ರಹ ಮಾಡುವುದು ಬೇಡ. ಈಗಲೂ ಆ ಹಣಇದೆ. ಇದಕ್ಕಾಗಿ ಹೊಸ ಹಣ ಸಂಗ್ರಹಅವಶ್ಯಕತೆಇಲ್ಲಎಂದು ಹೇಳಿದರು.

     ವೈಜ್ಞಾನಿಕವಾಗಿ ನಾನು ಸಾಲಮನ್ನಾಗೆ ಹಣಇಟ್ಟಿದ್ದೇನೆ. ಆ ಹಣ ಬಿಡುಗಡೆ ಮಾಡಿದರೆ ಸಾಕಾಗುತ್ತದೆ.ಇವತ್ತು ಯಡಿಯೂರಪ್ಪ ಅದಕ್ಕೆ ವಿವರಣೆ ನೀಡಿದ್ದಾರೆ. ನೆರೆಗೆ – ಸಾಲಮನ್ನಾ ಹಣಕ್ಕೂ ಹೊಂದಾಣಿಕೆ ಮಾಡೋದು ಬೇಡ. ಯಡಿಯೂರಪ್ಪ ಅವರುಘೋಷಣೆ ಮಾಡಿದ ಸಾಲಮನ್ನಾದ ಬಗ್ಗೆ ಅವರುತೀರ್ಮಾನ ಮಾಡಬೇಕು. ನಾನು ಕೊಟ್ಟ ಮಾತನ್ನ ಸಾಲಮನ್ನಾ ವಿಚಾರದಲ್ಲಿ ಉಳಿಸಿಕೊಂಡಿದ್ದೇನೆ. ನಾನು ಜನರಿಗೆಟೋಪಿ ಹಾಕಿಲ್ಲ. ನನ್ನ ಮಾತು ನಾನು ಉಳಿಸಿಕೊಂಡಿದ್ದೇನೆ. ಯಡಿಯೂರಪ್ಪ ಅವರುಘೋಷಣೆ ಮಾಡಿದ ಸಾಲಮನ್ನಾದ ಬಗ್ಗೆ ಅವರು ನಿರ್ಧಾರ ಮಾಡಲಿ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap