ಪರೀಕ್ಷಾ ಕಾರ್ಯ ಬಹಿಷ್ಕಾರಿಸಲು ನಿರ್ಧಾರ

ಚಿತ್ರದುರ್ಗ

         ಸರ್ಕಾರ ಗೌರವಧನ ನೀಡದಿರುವ ಹಿನ್ನಲೆಯಲ್ಲಿ ಮೇ-ಜೂನ್ ಅವಧಿಯಲ್ಲಿ ನಡೆಯುವ ಪರೀಕ್ಷಾ ಕಾರ್ಯವನ್ನು ಬಹಿಷ್ಕರಿಸಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಲಾಗಿದೆ

      ಅತಿಥಿ ಉಪನ್ಯಾಸಕರಿಗೆ ಸರ್ಕಾರ ಕೇವಲ 9-10 ತಿಂಗಳು ಗೌರವಧನ ನೀಡಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ಮೇ-ಜೂನ್ ತಿಂಗಳಲ್ಲಿ ಗೌರವಧನ ನೀಡದೇ ಪರೀಕ್ಷಾ ಮತ್ತು ಪ್ರಾಯೋಗಿಕಾ ಪರೀಕ್ಷೆಗಳಿಗೆ ಕರ್ತವ್ಯ ನಿರ್ವಹಿಸಲು ಸೂಚಿಸುತ್ತಾರೆ. ಆದರೆ ಬಿಡುಗಡೆಗೋಲಿಸಿದ ಅವಧಿಯಲ್ಲಿ ನಡೆಯುವ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆ ಕಾರ್ಯಗಳನ್ನು ಕುರಿತಂತೆ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯು ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಹಕ್ಕೋತ್ತಾಯ ಸಮಾವೇಶದಲ್ಲಿ ತೀರ್ಮಾನಿಸಿದಂತೆ ಪರೀಕ್ಷೆ ಮತ್ತು ಪ್ರಾಯೋಗಿಕ ಕಾರ್ಯಗಳನ್ನು ಬಹಿಷ್ಕರಿಸಿ, ಸೇವಾ ಭದ್ರತೆಗಾಗಿ ನಮ್ಮ ಹಕ್ಕೊತ್ತಾಯವನ್ನು ಸರ್ಕಾರಕ್ಕೆ ಮಂಡಿಸುತ್ತೇವೆ ಎಂದು ಅಥಿತಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಬಹೇಳಿದ್ದಾರೆ

       ಸರ್ಕಾರ ಅತಿಥಿ ಉಪನ್ಯಾಸಕರನ್ನು ಮೇ-ಜೂನ್ ತಿಂಗಳಲ್ಲಿ ನಮ್ಮನ್ನು ಬಿಡುಗಡೆಗೊಳಿಸದೇ 12 ತಿಂಗಳು ಗೌರವಧನ ನೀಡುವರೆಗೂ ಈ ಕಾರ್ಯವನ್ನು ಬಹಿಷ್ಕರಿಸುತ್ತೇವೆಂದು ಕುಲಪತಿಗಳು, ಪರೀಕ್ಷಾಂಗ ವಿಭಾಗ ಕುಲ ಸಚಿವರಾದ ಬಸವರಾಜ ಬಣಕಾರ್ ರವರಿಗೆ ಮನವಿ ಮಾಡಲಾಯಿತು.

       ಈ ಸಂದರ್ಭದಲ್ಲಿ ಆರ್.ಪ್ರಕಾಶನಾಯ್ಕ್, ಜಿಲ್ಲಾಧ್ಯಕ್ಷರು, ಕೊಟ್ರೇಶ್ ದಾವಣಗೆರೆ ಜಿಲ್ಲಾಧ್ಯಕ್ಷರು, ಮಲ್ಲಿಕಾರ್ಜುನ್, ಅನಿಲ್‍ಕುಮಾರ್.ಎನ್, ಶ್ರೀಕಾಂತ್, ಪ್ರವೀಣ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap