ಬೆಂಗಳೂರು
ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ವಿಳಂಬವಾಗಿದ್ದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗಾಗಿ ರಾಜ್ಯದ 322 ಕೇಂದ್ರಗಳಲ್ಲಿ ಭಾನುವಾರ ಪರೀಕ್ಷೆಯು ನಿರಾತಂಕವಾಗಿ ನಡೆಯಿತು.
ನಗರದ 64 ಕೇಂದ್ರಗಳು ಸೇರಿದಂತೆ, ರಾಜ್ಯದ 24 ನಗರಗಳ 322 ಪರೀಕ್ಷಾ ಕೇಂದ್ರಗಳಲ್ಲಿ ಪರೀಕೆಯು ನಡೆಯಿತು ಪರೀಕ್ಷೆಗೆ 1,65,716 ಅಭ್ಯರ್ಥಿಗಳು ಹಾಜರಾಗಬೇಕಾಗಿದ್ದು ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಪ್ರಶ್ನೆಪತ್ರಿಕೆ ಸೋರಿಕೆಯಿಂದ ತಡವಾಗಿದ್ದ ಪರೀಕ್ಷೆಯನ್ನು ಒಂದೇ ಬಾರಿ ನಡೆಸಲಾಗಿದ್ದು, ಪರೀಕ್ಷೆಯನ್ನು ಪೊಲೀಸ್ ಬಿಗಿಭದ್ರತೆಯೊಂದಿಗೆ ನಡೆಸಲಾಗಿದೆ
ನಗರದಲ್ಲಿ ಡಿಸಿಪಿಗಳು ಪರೀಕ್ಷಾ ಕೇಂದ್ರಗಳ ಉಸ್ತುವಾರಿ ವಹಿಸಿದ್ದರೆ, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರುಗಳಲ್ಲಿ ಕಮಿಷನರ್ಗಳ ಜೊತೆಗೆ ಅಲ್ಲಿನ ಡಿಸಿಪಿಗಳು ನಿಗಾವಹಿಸಿದ್ದರು.
ರಾಜ್ಯದ ಉಳಿದ ನಗರಗಳಲ್ಲಿ ಜಿಲ್ಲಾ ಎಸ್ಪಿಗಳು ಪರೀಕ್ಷೆಯ ನಿಗಾವಹಿಸಿದ್ದಾರೆ. ನಿರಾತಂಕವಾಗಿ ಎಲ್ಲೆಡೆ ಪರೀಕ್ಷೆಗಳು ಸುಗಮವಾಗಿ ನಡೆದಿವೆ ಎಂದು ಪೆÇಲೀಸ್ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ)ರಾಘವೇಂದ್ರ ಔರಾದ್ಕರ್ ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಕ್ಕೆ ಬೆಂಕಿ
ಅನಂತ ಡಯಾಗ್ನೊಸ್ಟಿಕ್ ರಕ್ತ ಪರೀಕ್ಷಾ ಕೇಂದ್ರಕ್ಕೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟುಹೋಗಿರುವ ದುರ್ಘಟನೆ ಬನಶಂಕರಿಯ 2ನೇ ಹಂತದ ಬಿಡಿಎ ಲೇಔಟ್ನಲ್ಲಿ ಶನಿವಾರ ರಾತ್ರಿ ನಡೆದಿದೆ
ಕೇಂದ್ರಕ್ಕೆ ರಾತ್ರಿ 10ರ ವೇಳೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ನಿಂದ ಆಕಸ್ಮಿಕ ಬೆಂಕಿ ತಗುಲಿದ್ದು, ಸ್ವಲ್ಪ ಹೊತ್ತಿನಲ್ಲೇ ಇಡೀ ಕೇಂದ್ರ ಆವರಿಸಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ದಾವಿಸಿ, ಬೆಂಕಿ ನಂದಿಸಿದ್ದಾರೆ.
ಬೆಂಕಿ ಬಿದ್ದ ಕೂಡಲೇ ಸಿಬ್ಬಂದಿ ಹೊರಗೋಡಿಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬನಶಂಕರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತ್ಯಾಜ್ಯಕ್ಕೆ ಬೆಂಕಿ
ವಿಠ್ಠಲ್ ಮಲ್ಯ ರಸ್ತೆಯ ಮಲ್ಯ ಆಸ್ಪತ್ರೆ ಹಿಂಭಾಗದಲ್ಲಿ ಶೇಖರಿಸಿದ್ದ ಆಸ್ಪತ್ರೆ ತ್ಯಾಜ್ಯಕ್ಕೆ ಶನಿವಾರ ರಾತ್ರಿ ಬೆಂಕಿ ತಗುಲಿದ್ದು, ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ರಾತ್ರಿ 8.20ರ ವೇಳೆ ಈ ದುರ್ಘಟನೆ ಸಂಭವಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








