ತಿಪಟೂರು :
ಭಾರತವನ್ನು ಒಗ್ಗೂಡಿಸಿದ ಕೀರ್ತಿ ಸರ್ದಾರ್ ವಲ್ಲಭಬಾಯಿ ಪಟೇಲರಿಗೆ ಸಲ್ಲುತ್ತದೇ, ಆಂಗ್ಲರ ಷಡ್ಯಂತರಗಳನ್ನು ಮಟ್ಟಹಾಕಿ ಭಾರತವನ್ನು ಒಗ್ಗೂಡಿಸಿದ ಕೀರ್ತಿ ಪಟೇಲರಿಗೆ ಸಲ್ಲುತ್ತದೆ. ಭಾರತವನ್ನು ಒಗ್ಗೂಡಿಸಿದ ಕೀರ್ತಿ ಸರ್ದಾರ್ ಪಟೇಲರಿಗೆ ಸಲ್ಲುತ್ತದೆ ಎಂದು ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.
ನಗರದ ಸಿಂಗ್ರಿ ನಂಜಪ್ಪ ವೃತ್ತದಿಂದ ಕೋಡಿ ಸರ್ಕಲ್‍ವರಗೆ ಏಕತೆಯ ಓಟಕ್ಕೆ ತಾವು ಓಡುವ ಮೂಲಕ ಚಾಲನೆ ನೀಡಿ ನಗರದ ಆದಿದೇವತೆ ಕೆಂಪಮ್ಮದೇವಸ್ಥಾನದ ಹತ್ತಿರ ಮಾತನಾಡಿದ ಅವರು ನಮಗೆ ಸ್ವಾತಂತ್ರ್ಯಬಂದಾಗ ಸುಮಾರು ಸಂಸ್ಥಾನಗಳಾಗಿ ಹರಿದು ಹಂಚಿಹೋಗಿದ್ದ ಭಾರತವನ್ನು ಒಂದು ಗೂಡಿಸಿದ ಕೀರ್ತಿ ಪಟೇಲರಿಗೆ ಸಲ್ಲುತ್ತದೆ. ಇದೆಲ್ಲದರ ಜೊತೆ ಕಾಶ್ಮೀರದ ರಾಜ ಹರಿಸಿಂಗ್ ಭಾರತಕ್ಕೆ ಕೊನೆಕ್ಷಣದಲ್ಲಿ ಸೇರುತ್ತಾರೆ, ಹೈದರಬಾದ್ ನಿಜಾಮನು ನಾನು ಪಾಕಿಸ್ಥಾನಕ್ಕೆ ಸೇರಬಯಸಿದ್ದು ಅವರಿಂದ ನಾನು ಸೈನ್ಯದ ಸಹಾಯವನ್ನು ಬಯಸಿದ್ದು ಅವರು ಕಳುಹಿಸಲು ಸಿದ್ದರಿದ್ದಾರೆ ಎಂದಾಗ ಹೈದರಬಾದ್ ನಿಜಾಮನನ್ನು ಸೋಲಿಸಿ ಭಾರತಕ್ಕೆ ಸೇರಿಸಿಕೊಳ್ಳುತ್ತಾರೆ.
ಇಂತಹ ಸಂದರ್ಭದಲ್ಲಿ ಎಲ್ಲಾ ಸಂಸ್ಥಾನಿಕ ರಾಜ್ಯದವರನ್ನು ಒಂದುಗೂಡಿಸಲು ದೇಶದಾದ್ಯಂತ ತಿರುಗಿ ನವ ಭಾರತದ ಉದಯಕ್ಕೆ ಕಾರಣರಾದರು. ನಿಸ್ವಾರ್ಥ ರಾಜಕಾರಣಿ, ಮುತ್ಸದ್ಧಿ, ಆಧುನಿಕ ಭಾರತದ ಶಿಲ್ಪಿ ಸರ್ದಾರ ಪಟೇಲರು ನೂತನ ಸರ್ಕಾರದಲ್ಲಿ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳಿದ್ದರು ಎಲ್ಲರ ನಿರ್ಣಯದಂತೆ ಗೃಹ ಸಚಿವರಾಗಿಯೇ ದೀನ, ದಲಿತರ ಹಿತಾಸಕ್ತಿಯನ್ನು ರಕ್ಷಿಸುತ್ತಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹೆಚ್ಚಿನ ಆದ್ಯತೆಯನ್ನು ನೀಡಿದರು.
ಸಹಕಾರದ ವಲಯದಲ್ಲಿಯೂ ಅಮೂಲಾಗ್ರ ಬದಲಾವಣೆಯನ್ನು ತರುವ ಮೂಲಕ ದೇಶದಾದ್ಯಂತ ಪ್ರಖ್ಯಾತಿಯನ್ನು ಗಳಿಸಿದರು. ಇಂತಹವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ ಮಾತ್ರವೇ ದೇಶದ ಪ್ರಗತಿ, ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ತಾಲ್ಲೂಕು ಅಧ್ಯಕ್ಷ ದಿವಾಕರ್.ಹೆಚ್.ಬಿ. ಮಾತನಾಡಿ ಸರ್ದಾರ್ ಪಟೇಲರು ಜಾತಿ, ಧರ್ಮ, ನಂಬಿಕೆ, ವಯಸ್ಸನ್ನು ಮೀರಿ ಗೌರವಿಸಲ್ಪಡುತ್ತಿದ್ದ ಧೀಮಂತ ವ್ಯಕ್ತಿಯಗಿದ್ದು, 130 ಕೋಟಿ ಭಾರತೀಯರ ಆಶೀರ್ವಾದದ ಫಲವಾಗಿ ಇಂದು ಏಕತೆಯ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಪಟೇಲರು ಬಯಸಿದಂತೆ ಯಾವುದೇ ರೀತಿಯ ಭ್ರಷ್ಟಾಚಾರ ಅಥವಾ ಪಕ್ಷಪಾತಕ್ಕೆ ಆಸ್ಪದ ನೀಡದೇ ಎಲ್ಲಾ ವರ್ಗದವರನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆಯ ಸ್ಥಾಯಿಸಮಿತಿ ಅಧ್ಯಕ್ಷ ಗಂಗಾಧರ್, ನಗರಾಧ್ಯಕ್ಷ ಲೋಕೇಶ್, ನಗರಸಭಾ ಸದಸ್ಯ ರಾಮಮೋಹನ್, ಕಾರ್ಯದರ್ಶಿ ಪ್ರಕಾಶ್, ಮುಖಂಡರಾದ ಸಂಗಮೇಶ್, ಮಂಜುನಾಥ್, ತುಮುಲ್ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್ ಸೇರಿದಂತೆ ಮತ್ತಿತರರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ