ಯಡಿಯುರಪ್ಪ ಅವರಿಗೆ ತಲೆನೋವಾದ ಚುನಾವಣೋತ್ತರ ಸಮೀಕ್ಷೆ..!

ಬೆಂಗಳೂರು :

  ಸತತ ಪ್ರಯತ್ನದಿಂದ ರಾಜ್ಯದ ಚುಕ್ಕಾಣಿ ಹಿಡಿಯಲು ಶಕ್ತರಾದ ಯಡಿಯೂರಪ್ಪ ಅವರಿಗೆ ಎಕ್ಸಿಟ್ ಪೊಲ್ ಒಂದು ಕಡೆ ಖುಷಿಯ ತಂದರೆ, ಮತ್ತೊಂದು ಕಡೆಯಲ್ಲಿ ಇಕ್ಕಡಿಗೆ ಸಿಲುಕಿಸುವ ಎಲ್ಲಾ ಲಕ್ಷಣವೂ ಕಾಣಿಸುತ್ತಿದೆ ಆಪ್ತ ಮೂಲಗಳಿಂದ ತಿಳಿದು ಬಂದಿದೆ.

    ವಿವಿಧ ವಾಹಿನಿಗಳು ಮತ್ತು ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯನ್ನು ಆಧರಿಸಿ ಹೇಳುವುದಾದಾರೆ ಉಪ ಚುನಾವಣೋತ್ತರ ಸಮೀಕ್ಷೆ: ಯಾವ ಪಕ್ಷಕ್ಕೆ ಎಷ್ಟು ಸೀಟು? ಎಂದು ಚುನಾವಣೆ ಮುಗಿದ ಕ್ಷಣವೇ ಎಲ್ಲಾ ವಾಹಿನಿಗಳು ಎಕ್ಸಟ್ ಪೋಲ್ ನೀಡಲು ಶುರು ಮಾಡಿದ್ದವು ಅದರಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ನಂಬಿಕೆಗೆ ಅರ್ಹವಾಗಿರುವ ಸಿವೋಟರ್ ನೀಡಿದ ಸಮೀಕ್ಷೆಯ ಪ್ರಕಾರ, ಸರಕಾರ ಉಳಿಸಿಕೊಳ್ಳಲು ಬೇಕಾದಷ್ಟು ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ. ಹಾಗಾಗಿ, ಸರಕಾರಕ್ಕೆ ಸದ್ಯಕ್ಕೆ ತೊಂದರೆಯಿಲ್ಲ ಆದರೆ ಆತಂರಿಕ ಭಿನ್ನಮತ ಸ್ಪೋಟಗೊಳ್ಳುವ ನಿರೀಕ್ಷೆ ಹೆಚ್ಚಿದೆ ಎನ್ನಲಾಗಿದೆ.

     ಆದರೆ, ಸಮೀಕ್ಷೆಯಲ್ಲಿ ಬಂದ, ಒಂದು ಫಲಿತಾಂಶ ಏನಂದರೆ, ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿರುವುದು. ಜೊತೆಗೆ, ಗುಪ್ತಚರ ವರದಿಯಲ್ಲೂ, ಇದೇ ಅಂಶ ಹೊರಬಿದ್ದಿದೆ ಎಂದು ಹೇಳಲಾಗುತ್ತಿದೆ. ಈ ವಿಷಯವೇ  ಯಡಿಯೂರಪ್ಪ ನವರಿಗೆ ತಲೆನೋವಾಗಿ ಪರಿಣಮಿಸಿದೆ.

     ಗುಪ್ತಚರ ಇಲಾಖೆ ಪ್ರಕಾರ ಉಪಚುನಾವಣೆಯಲ್ಲಿ, ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಬಹುದು ಎನ್ನುವುದರ ಬಗ್ಗೆ ವರದಿಯನ್ನು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೀಡಿದೆ ಎನ್ನುವ ಮಾಹಿತಿಯಿದೆ. ಇದರ ಪ್ರಕಾರ, ಬಿಜೆಪಿ – 10 ಕಾಂಗ್ರೆಸ್ – 02 ಜೆಡಿಎಸ್ – 02 ಪಕ್ಷೇತರರು – 01 ಸ್ಥಾನದಲ್ಲಿ ಗೆಲ್ಲಲಿದ್ದಾರೆ. ಒಬ್ಬರು, ಪಕ್ಷೇತರರು ಗೆಲ್ಲಲಿದ್ದಾರೆ ಎಂದಿದೆ ಮತ್ತೆ ಅದು ನಿಸ್ಸಂಶಯವಾಗಿ ಹೊಸಕೋಟೆಯಿಂದ ಶರತ್ ಬಚ್ಚೇಗೌಡ ಎಂದು ಹೇಳಿ ಬಿ ಎಸ್ ವೈ ತಲೆನೋವಿಗೆ ಕಾರಣವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link