ಅನುಭವದ ಬದುಕಿನಲ್ಲಿ ಸಂತೃಪ್ತಿ;ಶಿಮೂಶ

ಚಿತ್ರದುರ್ಗ;

        ಧ್ಯಾನ ಎಂದರೆ ಮೌನ, ಮೌನವೇ ಧ್ಯಾನ. ಕಾಯಕ, ದಾಸೋಹ, ಸಮಾನತೆ, ತತ್ತ್ವ ಸಿದ್ದಾಂತ ನೀಡಿದ ಬಸವಾದಿ ಶರಣರ ನುಡಿಗಳು ಮಹತ್ವವನ್ನು ಪಡೆದಿವೆ ಎಂದು ಡಾ.ಶಿವಮೂರ್ತಿ ಮುರುಘಾಶರಣರು ಹೇಳಿದರು.

       ಮುರುಘಾಮಠದ ಅನುಭವ ಮಂಟಪದ ಫ.ಗು.ಹಳಕಟ್ಟಿ ವೇದಿಕೆಯಲ್ಲಿ ಸಹಜ ಶಿವಯೋಗ ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ ಶ್ರೀಗಳು ಮಾತನಾಡಿದರು.

        12ನೇ ಶತಮಾನದ ಅನುಭವ ಮಂಟಪ ವಚನಗಳ ಮೂಲಕ ವಿಚಾರಧಾರೆಗಳನ್ನು ಹರಡಿತು. ಶರಣರ ಪ್ರತಿಪಾದನೆಗಳನ್ನು ಕೇಳುವುದು ಮುಖ್ಯ. ಅಬ್ರಹಾಂ ಲಿಂಕನ್ ಅಧ್ಯಯನ ಮಾಡಲು 40 ಕಿ.ಮೀ ಹೋಗಿಬರುತ್ತಿದ್ದರು. ವಿಚಾರವೆಂದರೆ ಆಧ್ಯಾತ್ಮಿಕ ಚಿಂತನೆ ಕಳೆದುಕೊಂಡವರು ಬದುಕನ್ನು ಕಳೆದುಕೊಳ್ಳುತ್ತಾರೆ. ಎಲ್ಲರು ಭೌತಿಕ ದಾಸರಾಗದೇ ವೈಚಾರಿಕ ವ್ಯಕ್ತಿಗಳಾಗಬೇಕು. ಶರಣರ ಚಿಂತನೆಗಳಿಗೆ ಅನುಭವ ಮತ್ತು ಅನುಭಾವ ಎಂದಿದ್ದಾರೆ. ಅನುಭವದ ಗೀಳು ಇಲ್ಲದವರ ಬಾಳು ಗೋಳಾಗುತ್ತದೆ. ದಿನವು ಅನುಭವಗಳನ್ನು ಬೆಳೆಸಿದವರು ಬಹುಮುಖಿಯಾಗುತ್ತಾರೆ. ಬಹುಮುಖಿಯಾದವರು ಜನಾನುರಾಗಿಯಾಗಿ, ಅಂತರಂಗ ಮತ್ತು ಬಹಿರಂಗದಲ್ಲಿ ಶುದ್ದಿಗೊಂಡು ಜನಪ್ರಿಯರಾಗುತ್ತಾರೆ.

       ಇದೇ ಸಂಧರ್ಭದಲ್ಲಿ “ಲಿಂಗಾಯತ ಕ್ರಾಂತಿ” ಪತ್ರಿಕೆಯನ್ನು ಡಾ.ಶಿವಮೂರ್ತಿ ಮುರುಘಾಶರಣರು ಬಿಡುಗಡೆ ಮಾಡಿದರು.
ಅನುಭವದ ಮೂಲಕ ಜೀವನ ನಡೆಸುವುದೇ ಶರಣ ಸಂಸ್ಕøತಿಯ ವೈವಿಧ್ಯತೆ. ಅನುಭವವಿಲ್ಲದವರೇ ದುರ್ಬಲರು ಅನುಭವ ಹೊಂದಿದವರು ಪ್ರಬಲರು. ಭೌತಿಕ ದಾಸ್ಯದಿಂದ ಜನರನ್ನು ಹೊರತಂದರೆ ಸ್ವಾತಂತ್ರಕ್ಕೆ ನಿಜವಾದ ಅರ್ಥ ಸಿಗುತ್ತದೆ. ಆಚಾರ-ವಿಚಾರಗಳಲ್ಲಿ ಅಪಚಾರವಾದರೆ ಜೀವನಕ್ಕೆ ಸಂಚಕಾರ ತರುತ್ತದೆ. ಕೀರ್ತಿ ಪ್ರತಿಷ್ಠೆಯ ಗೀಳು ನಿರಂತರ ಗೋಳು. ತೃಪ್ತಿಯಿಂದ ಆನಂದದ ಜೀವನ ನಡೆಸಿದರೆ ಜೀವನ ಸಂತೃಪ್ತಿ ಪಡೆಯಬಹುದು ಎಂದು ನುಡಿದರು.

       ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಚಿತ್ರದುರ್ಗ ಶ್ರೀ ಛಲವಾದಿ ಗುರುಪೀಠದ ಶ್ರೀ ಬಸವ ನಾಗಿದೇವ ಸ್ವಾಮಿಗಳು, ಜಾತಿರಹಿತ, ವರ್ಗರಹಿತ ಸಮಾಜದ ಸ್ಥಾಪನೆಯ ಮೂಲಕ ಮುರುಘಾಶರಣರು ಸಮಾನತೆಯನ್ನು ಮೆರೆದಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಗುಡ್ಡದ ಆನವೇರಿ ಶ್ರೀ.ವಿರಕ್ತಮಠದ ಶ್ರೀ ಮ.ನಿ.ಪ್ರ. ಶಿವಯೋಗೀಶ್ವರ ಸ್ವಾಮಿಗಳು, ತಂಗಡಗಿ ಶ್ರೀ ಹಡಪದ ಅಪ್ಪಣ್ಣದೇವರ ಗುರುಪೀಠದ ಶ್ರೀ ಅನ್ನದಾನ ಭಾರತಿ ಬಸವಪ್ರಿಯ ಅಪ್ಪಣ್ಣ ಸ್ವಾಮಿಗಳು, ಬೆಳ್ಳಟ್ಟಿ ಶ್ರೀ ವಿರಕ್ತಮಠದ ಶ್ರೀ ಮ.ನಿ.ಪ್ರ. ಬಸವರಾಜ ಸ್ವಾಮಿಗಳು, ಹರಗುರುಚರಮೂರ್ತಿಗಳು, ತಮಿಳುನಾಡು ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷರಾದ ಶ್ರೀ ನಾಗರತ್ನಂ, ಸೋಮೇಶ್ವರ್ ಉಪಸ್ಥಿತರಿದ್ದರು.

        ರಾಜ್ಯದ ವಿವಿಧ ಬಸವಕೇಂದ್ರಗಳ ಪ್ರತಿನಿಧಿಗಳಾದ ಶ್ರೀ ಚಂದ್ರಕಾಂತ ಅಂಗಡಿ, ಶ್ರೀ ಶಿವಕುಮಾರ್ ಎಸ್. ಬಳಿಗಾರ್, ಶ್ರೀ ವೀರಭದ್ರಪ್ಪ ಕುರಕುಂದಿ, ಶ್ರೀ ಪರಶೆಟ್ಟಿ ಮಲ್ಲಣ್ಣ, ಶ್ರೀ ಕೆ.ಶಿವಲಿಂಗಪ್ಪ, ಶ್ರೀ ಸತೀಶ್‍ಕುಮಾರ್, ಶ್ರೀ ಸಾಲೂರು ಕುಮಾರಣ್ಣ ಇವರುಗಳನ್ನು ಶ್ರೀಗಳು ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿದರು, ಪ್ರೊ.ಸಿ.ವಿ.ಸಾಲಿಮಠ್ ಸ್ವಾಗತಿಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link