ಬೆಂಗಳೂರು
ಸಂಚು ರೂಪಿಸಿ ದುಷ್ಕರ್ಮಿಗಳು ಗುರಪ್ಪನಪಾಳ್ಯದಲ್ಲಿ ಬೈಕ್ ಕದ್ದು ಪರಾರಿಯಾಗುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ದುಷ್ಕರ್ಮಿಗಳ ಪತ್ತೆಗಾಗಿ ಸದ್ದಗುಂಟೆ ಪಾಳ್ಯ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಗುರಪ್ಪನಪಾಳ್ಯದ ದೀಪಕ್ ಅವರು ಮನೆಯ ಮುಂಭಾಗ ಕಳೆದ ಡಿ.28ರಂದು ರಾತ್ರಿ 1ರಂದು ನಿಲ್ಲಿಸಿದ್ದ ಬೈಕ್ನ ಸೆಂಟ್ರಲ್ ಲಾಕ್ ಮುರಿದು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ಈ ಸಂಬಂಧ ದೀಪಕ್ ಅವರು ಸದ್ದಗುಂಟೆ ಪಾಳ್ಯ ಪೊಲೀಸರಿಗೆ ದೂರು ದಾಖಲಿಸಿದ್ದು ತನಿಖೆ ಕೈಗೊಂಡ ಪೊಲೀಸರಿಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಕಳವಿನ ದೃಶ್ಯ ಸಿಕ್ಕಿದ್ದು ಅದನ್ನು ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ದುಷ್ಕರ್ಮಿಗಳು ಬೆಳಗ್ಗೆಯಿಂದ ಸಂಜೆವರೆಗೆ ಮೂವರು ದುಷ್ಕರ್ಮಿಗಳು ಬೈಕ್ನಲ್ಲಿ ತಿರುಗಾಡುತ್ತಾ ಕಳವಿಗೆ ಸಂಚು ರೂಪಿಸಿ ಮಧ್ಯರಾತ್ರಿ ಕಳವು ಮಾಡಿ ಪರಾರಿಯಾಗಿರುವುದು ಕಂಡುಬಂದಿದ್ದು ಅವರಿಗಾಗಿ ತೀವ್ರ ಶೋಧ ನಡೆಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








