ಚಿತ್ರದುರ್ಗ:
ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿಯೂ ಪಾಲ್ಗೊಳ್ಳುವುದು ಅತೀ ಮುಖ್ಯವೆಂದು ಎಸ್ಆರ್ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ ಅಭಿಪ್ರಾಯ ಪಟ್ಟರುನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯು ಆಯೋಜಿಸಿರುವ ಎಸ್. ಆರ್. ಎಸ್. ಯುವ ತರಂಗ-2019 ಸಾಂಸ್ಕೃತಿಕ ಮಹಾಸಮ್ಮೇಳನವಾದ ವಸುಧಾಚರಿತಂ ಎಂಬ ಕಥಾವಸ್ತುವನ್ನೊಳಗೊಂಡ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಯು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಾಧ್ಯ ಈ ರೀತಿಯ ಮಕ್ಕಳ ಪ್ರತಿಭೆ ಹೊರಗೆಳೆಯುವ ಈ ಕಾರ್ಯಕ್ರಮ ನಿಜಕ್ಕೂ ಅದ್ಬುತವಾಗಿದೆ, ವಸುಧಾಚರಿತಂ ಎಂಬುದು ಭೂಮಿಯ ಕಥೆ ಹಾಗೂ ವ್ಯಥೆಯನ್ನು ವಿದ್ಯಾರ್ಥಿಗಳು ತಮ್ಮ ಕಲಾ ಪ್ರೌಢಿಮೆಯನ್ನು ಹಾಗೂ ಇನ್ನಿತರ ನೃತ್ಯರೂಪಕಗಳನ್ನು ಪ್ರೇಕ್ಷಕ ಪ್ರಭುಗಳಿಗೆ ನೀಡುವುದರಲ್ಲಿ ಮಕ್ಕಳು ಅಣಿಗೊಂಡಿರುವುದರ ಜೊತೆಗೆ ಎಲ್ಲಾ ಪೋಷಕರ ಸಹಕಾರ ಪ್ರೋತ್ಸಾಹ ಸದಾ ಇರಬೇಕು ಎಂದು ನುಡಿದರು ಚಳ್ಳಕೆರೆಯ ಎಸ್. ಆರ್. ಎಸ್. ಹೆರಿಟೇಜ್ ಶಾಲೆಯ ಪ್ರಾಂಶುಪಾಲ ವಿಜಯ್ ಮಾತನಾಡಿ.
ವಿದ್ಯಾರ್ಥಿಯ ಬೋಧನ ಮಟ್ಟ ಇಮ್ಮಡಿಗೊಳಿಸಲು ಶಾಲೆಯ ಸವಲತ್ತುಗಳ ಜೊತೆ ಅವಕಾಶ ಹೊದಗಿಸಿಕೊಟ್ಟಿದೆ ಹಾಗೂ ಶಾಲೆಯು ಪ್ರತಿವರ್ಷ ಉತ್ತಮ ಫಲಿತಾಂಶ ಪಡೆದ ಜಿಲ್ಲೆಯಲ್ಲಿ ಉತ್ತಮ ಸ್ಥಾನ ಪಡೆದಿದೆ. ಈ ಸಮಾರಂಭವು ವಿಶೇಷವಾದುದರ ಜೊತೆಗೆ ವಸುಧಾಚರಿತಂ ಭೂಮಿಯ ಕಥೆ ಹಾಗೂ ವ್ಯಥೆಯನ್ನು ಪ್ರದರ್ಶಿಸುತ್ತಿರುವುದು ಎಲ್ಲರಲ್ಲಿ ಕುತೂಹಲ ಮೂಡಿದೆ ಎಂದರು ಎಸ್. ಆರ್ . ಎಸ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಬಿ.ಎ. ಲಿಂಗಾರೆಡ್ಡಿ ಹಾಗೂ ಉಪಾಧ್ಯಕ್ಷರಾದ ಶ್ರೀಯುತ ಅಮೋಘ್ ಬಿ.ಎ. ಕಾರ್ಯಕ್ರಮವನ್ನು ಶ್ಲಾಘಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಡಾ|| ರವಿ, ಟಿ ಎಸ್ ಇನ್ನಿತರರು ಉಪಸ್ಥಿತರಿದ್ದರುಪ್ರಾಂಶುಪಾಲ ಪ್ರಭಾಕರ್. ಎಂ ಶಾಲೆಯ ವಾರ್ಷಿಕ ವರದಿ ಹಾಗೂ ವಿದ್ಯಾರ್ಥಿಗಳ ಸಾಧನೆಯನ್ನು ಕುರಿತು ಪ್ರಸ್ತುತ ಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








