ಇದ್ದರು ಇಲ್ಲದಂತಾದ ಅಬಕಾರಿ ಇಲಾಖೆ..!

ಹರಪನಹಳ್ಳಿ:

    ಕರೋನಾ ಲಾಕ್‍ಡೌನ್‍ನಿಂದಾಗಿ ಕಳೆದ 42 ದಿನಗಳಿಂದ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಒಟ್ಟು 23 ಅಂಗಡಿಗಳಲ್ಲಿ ಮದ್ಯ ಮಾರಾಟ ಬಿರುಸಿನಿಂದ ನಡೆದಿರುವುದು ಕಂಡುಬಂತು.ಸೋಮುವಾರ ರಾಜ್ಯ ಸರ್ಕಾರದ ಲಾಕ್‍ಡೌನ್ ಸಡಿಲಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಜನಜಂಗುಳಿ ಕಂಡು ಬಂತು. ಬಹಳ ದಿನಗಳ ನಂತರ ಮದ್ಯದಂಗಡಿಗಳು ತೆರೆದಿವೆ ಎಂದು ಖುಷಿಯಲ್ಲಿದ್ದ ಮದ್ಯ ವ್ಯಸನಿಗಳಿಗೆ ಸ್ಟಾಕ್ ಕೊರತೆಯಿಂದ ಆರಂಭದ ಮೊದಲನೇ ದಿನ ಅಷ್ಟೇನು ಸಮಾದಾನ ತರಲಿಲ್ಲ. ಹರಪನಹಳ್ಳಿ ತಾಲೂಕಲ್ಲಿ 29 ಮದ್ಯದಂಗಡಿಗಳು ಇದ್ದು, ಅದರಲ್ಲಿ ಪಟ್ಟಣದಲ್ಲಿ 9 ಸೇರಿದಂತೆ ಒಟ್ಟು 23 ಅಂಗಡಿಗಳು ಮಾತ್ರ ತೆರೆದಿದ್ದವು.

    ಮಧ್ಯಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರಿಂದ ಸರ್ಕಾರಿ ಸ್ವಾಮ್ಯದ ಎಂಎಸ್‍ಐಎಲ್‍ನ ಎರಡು ಅಂಗಡಿಗಳ ಮುಂದೆ ಮಾರ್ಕಗಳನ್ನು ಮಾಡಲಾಗಿತ್ತು. ಹಸಿದ ಸಿಂಹದಂತಾಗಿದ್ದ ಮದ್ಯವ್ಯಸನಿಗಳು ಬೆಳಿಗ್ಗೆ 6.30ಕ್ಕೆ ಕೆಲವೊಂದು ಅಂಗಡಿಗಳ ಮುಂದೆ ಸಾಲು ಗಟ್ಟಿ ನಿಂತಿದ್ದರು. ಎಲ್ಲಾ ಅಂಗಡಿಗಳ ಮುಂದೆಯು ಸಹ ಸಾರತಿ ಸಾಲಿನಲ್ಲಿ ಮದ್ಯ ಖರೀದಿಸುತ್ತಿದ್ದರು ಇವರನ್ನು ನಿಯಂತ್ರಿಸುವುದಕ್ಕೆ ಅಬಕಾರಿ ಇಲಾಖೆಯ ಯಾವೊಬ್ಬ ಅಧಿಕಾರಿಗಳು ಇಲ್ಲದೆ ಪೋಲಿಸರು ಮತ್ತು ಹೊಂಗಾರ್ಡ್ ಹರಸಾಹಸ ಪಟ್ಟರು. ಕೊನೆಗು ಎಚ್ಚೆತ್ತ ಖರೀದಿದಾರರು ಪೋಲಿಸರು ಹೇಳಿದಂತೆ ಕೇಳಿದರು.

    ಖರೀದಿಸುತ್ತಿರುವ ವೇಳೆ ಸಾರ್ವಜನಿಕರೊಬ್ಬರು ಎಲ್ಲಾ ಕೆಲಸಗಳನ್ನು ಪೋಲಿಸರೇ ಹೇಗೆ ನಿಯಂತ್ರಿಸಬೇಕು ಅಬಕಾರಿ ಇಲಾಖೆಗೆ ಆದಾಯಕ್ಕೆ ಸೀಮಿತವಾಗಿದ್ದು, ಅಲ್ಲಿರುವ ಸಿಬ್ಬಂದಿಗಳನ್ನು ಸಹ ನಿಯಂತ್ರಣಕ್ಕೆ ಬಳಸಿಕೊಳ್ಳದಿರುವುದಕ್ಕೆ ಅಸಮಾಧನ ವ್ಯಕ್ತಪಡಿಸಿದರು.

    ಮೊದಲೆ ಲಾಕಡೌನ್‍ನಿಂದಾಗಿ ಕಂಗೆಟ್ಟಿದ್ದ ಮದ್ಯ ಪ್ರಿಯರು ಮುಂದೆ ಮತ್ತೆ ಲಾಕ್‍ಡೌನ್ ವಿಸ್ತರಣೆ ಆಗುಬಹುದೇ ಎಂಬ ನಿರೀಕ್ಷೆಯಲ್ಲಿ ಎಲ್ಲರ ಕೈಯಲ್ಲಿ 4-6 ಬಾಟಲಿಗಳನ್ನು ಖರೀದಿಸುತ್ತಿದ್ದು, ಪಟ್ಟಣದ ಎರಡು ಎಂಎಸ್‍ಐಎಲ್‍ಗಳಲ್ಲಿ ಪದೇ ಪದೇ ಖರೀದಿಸಿ ಸಂಗ್ರಹಣೆ ಮಾಡಿಕೊಳ್ಳುತ್ತಿರುವುದು ಕಂಡು ಬಂತು.

    ಅಂಗಡಿಗಳ ಮಾಲೀಕರು ಸಹ ಕೈಗೆ ಗ್ಲೋಸ್ ಹಾಕಿಕೊಂಡ  ಸ್ಯಾನಿಟೈಜರ್ ಹಾಕುವ ಮೂಲಕ ಮದ್ಯದ ಮಾರಾಟ ಮಾಡುತ್ತಿದ್ದರು. ಆದರೆ ಬಹುತೇಕ ಅಂಗಡಿಗಳಲ್ಲಿ ಮದ್ಯಾಹ್ನದ ಹೊತ್ತಿಗೆ ಸ್ಟಾಕ್ ಖಾಲಿಯಾದ್ದರಿಂದ ಅನೇಕರು ನಿರಾಶೆಯಿಂದ ವಾಪಾಸು ಹೋದರು. ಮದ್ಯ ಪ್ರಿಯರಿಗೆ ಹಬ್ಬದ ಸಂಭ್ರಮವಂತೂ ಮನೆ ಮಾಡಿತು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap