ನೋಡುಗರ ಕಣ್ಮನ ಸೆಳೆದ ಶ್ವಾನ ಪ್ರದರ್ಶನ

 ದಾವಣಗೆರೆ:

    ಪೆಟ್ ಲವರ್ಸ್ ಅಸೋಸಿಯೇಷನ್ ವತಿಯಿಂದ ನಗರದ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಶ್ವಾನ ಪ್ರದರ್ಶನದಲ್ಲಿ ಅಪರೂಪ ತಳಿಯ ಶ್ವಾನಗಳು ರ್ಯಾಂಪ್‍ಗಳ ಮೇಲೆ ನಡೆಯುತ್ತಿದ್ದ ದೃಶ್ಯವು ನೋಡುಗರ ಕಣ್ಮನ ಸಳೆಯುವಂತಿತ್ತು.

       ಹೌದು…ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿದ್ದ ಶ್ವಾನಗಳು ಒಂದಕ್ಕೊಂದು ವಿಭಿನ್ನವಾಗಿದ್ದವು. ಒಂದೊಂದು ಶ್ವಾನವು ಅದರದೇಯಾದಂತಹ ವಿಶೇಷ ಗುಣಗಳನ್ನು ಹೊಂದಿದ್ದವು. ರ್ಯಾಂಪ್ ಮೇಲೆ ಲಲನೆಯರಂತೆ ಪ್ರದರ್ಶನ ನೀಡಿ ಬರುತ್ತಿದ್ದ ಶ್ವಾನಗಳ ವಿಶೇಷತೆಯನ್ನು ಅರಿತು ಮಕ್ಕಳಾದಿಯಾಗಿ ನೆರೆದವರೆಲ್ಲರೂ ಅವುಗಳನ್ನು ಮುಟ್ಟಿ ಮುದ್ದಾಡುತ್ತಿದ್ದ ದೃಶ್ಯವು ಸಾಮಾನ್ಯವಾಗಿತ್ತು.

       ಈ ಶ್ವಾನ ಪ್ರದರ್ಶನದಲ್ಲಿ ನಾಯಿಗಳಷ್ಟೇ ಪ್ರಾಮುಖ್ಯತೆ ಹೊಂದಿದಲ್ಲದೇ ಅವುಗಳ ಮಾಲೀಕರುಗಳ ಬಗ್ಗೆ ಪ್ರೇರಕ್ಷಕರು ವಿಚಾರಿಸುತ್ತಿದ್ದರು. ಅಕಸ್ಮಾತ್ ಶ್ವಾನಗಳ ಮಾಲೀಕರು ಕೈಗೆ ಸಿಕ್ಕರೆ, ಇದು ಯಾವ ತಳಿಯದು?, ಎಲ್ಲಿಂದ ತಂದು ಸಾಕಿದ್ದು?, ಇದರ ಬೆಲೆ ಎಷ್ಟು?, ಈ ಶ್ವಾನದ ವಿಶೇಷತೆ ಏನು? ಇದಕ್ಕೆ ಏನು ಆಹಾರ ನೀಡುತ್ತೀರಿ ಎಂಬ ಪ್ರಶ್ನೆಗಳ ಸರಮಾಲೆಯನ್ನೇ ಶ್ವಾನ ಪ್ರಿಯರು ಇಡುತ್ತಿದ್ದರು. ಆದರೂ ಅವುಗಳ ಮಾಲೀಕರು ಕೇಳಿದವರಿಗೆಲ್ಲರಿಗೂ ನಗು, ನಗುತ್ತಲೇ ಉತ್ತರಿಸುತ್ತಿದ್ದದು ವಿಶೇಷವಾಗಿತ್ತು.

        ಲಕ್ಷಾಂತರ ರೂ. ಬೆಲೆಯ ಶ್ವಾನಗಳು ಪ್ರದರ್ಶನಕ್ಕೆ ಬಂದಿದ್ದವು. ಕೆಲವರು ಪ್ರದರ್ಶನಕ್ಕಾಗಿ ಬರುವ ಜೊತೆಯಲ್ಲಿ ನಾಯಿಗಳ ಮಾರಾಟಕ್ಕೂ ಬಂದಿದ್ದರು. ಒಂದೇ ಸೂರಿನಡಿ ವಿವಿಧ ಜಾತಿ, ವಿವಿಧ ದೇಶದಲ್ಲಿ ಪ್ರಖ್ಯಾತಿ ಪಡೆದ ಶ್ವಾನಗಳನ್ನು ಕಣ್ತುಂಬಿಕೊಳ್ಳು ಅವಕಾಶ ಸೃಷ್ಟಿಯಾಗಿತ್ತು. ಸೈಬೀರಿಯನ್ ಹಸ್ಕಿ, ಟಿಬೇಟಿಯನ್ ಮಸ್ತಿಫ್, ಮುಧೋಳ ದೇಶಿ ತಳಿಯ ಶ್ವಾನಗಳಿದ್ದರೆ, ಜರ್ಮನ್ ಶಫರ್ಡ್, ಡಾಬರ್ ಮನ್, ಲ್ಯಾಬರ್ ಡಾರ್, ಪಗ್, ಬೀಗಲ್, ರಾಟ್ ವೀಲರ್, ಗ್ರೇಟ್ ಡೇನ್ ಸೇರಿದಂತೆ ಅಪರೂಪದ ತಳಿಗಳಾದ ಚೌಚೌ, ಫ್ರೆಂಚ್ ಬುಲ್ ಡಾಗ್ ವಿದೇಶಿ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು.

       ಇಂಗ್ಲೀಷ್ ಮಸ್ತಿಫ್ ತಳಿಯ ನಾಯಿಯನ್ನು ರಾಣೇಬೆನ್ನೂರಿನ ಸುರೇಶ ಪ್ರದರ್ಶನಕ್ಕೆ ತಂದಿದ್ದರು. ಮರಿಯಮ್ಮಹಳ್ಳಿಯ ರಹೆಮಾನ್ ಗ್ರೇಟ್ ಡೇನ್ ಜಾತಿ ನಾಯಿ ಪ್ರದರ್ಶನಕ್ಕೆ ತಂದಿದ್ದು, ಈ ನಾಯಿ ಈಗಾಗಲೇ ಎರಡು ಬಾರಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಚಾಂಪಿಯನ್ ಪಡೆದಿದೆ. ಇನ್ನೊಂದು ಸ್ಪರ್ಧೆಯಲ್ಲಿ ಚಾಂಪಿಯನ್ ಆದಲ್ಲಿ ಇಂಡಿಯನ್ ಅವಾರ್ಡ್‍ಗೆ ಭಾಜಪವಾಗಲಿದೆ ಎಂದು ತಿಳಿದರು.

        ರಹೆಮಾನ್ ನಾಯಿ ಟ್ರೈನರ್ ಆಗಿದ್ದು, ಸೈಬೀರಿಯನ್ ಹಸ್ಕಿ, ಡಾಬರ್ ಮನ್, ರಾಟ್‍ವಿಲ್ಲರ್ ಜಾತಿಯ ತಳಿಯ ನಾಯಿಗಳು ಇವೆ. ಮೊದಲು ನಾಯಿ ಸಾಕುವುದು ಹವ್ಯಾಸ ಆಗಿತ್ತು. ಈಗ ಅದನ್ನು ವ್ಯವಹಾರವನ್ನಾಗಿ ಮಾಡಿಕೊಂಡಿದ್ದೇನೆ. ಹಲವು ಜಾತಿಯ ನಾಯಿಗಳು ಇವೆ ಎಂದರು.

          ಶಿವಮೊಗ್ಗದ ಕಾರ್ತಿಕ್ ಅವರು ತಮ್ಮ ಬಳಿಯ ಶ್ವಾನಗಳನ್ನು ತಂದಿದ್ದರು. ಡ್ಯಾಶ್ ಆಂಡ್ ಡ್ಯಾಶ್ ನಾಯಿ, ದೇಶದ ರಕ್ಷಣೆಗೆ ಹೋರಟಿರುವ ಮುಧೋಳ ನಾಯಿ ಸೇರಿದಂತೆ ಅನೇಕ ತಳಿಯ ನಾಯಿಗಳಿದ್ದವು. ಬಾಬು ಅವುಗಳಿಗೆ ಟ್ರೈನರ್ ಆಗಿದ್ದು ನಾಯಿಗಳು ಅವರು ಹೇಳಿದಂತೆ ಕೇಳುತ್ತಿದ್ದವು. ದಾವಣಗೆರೆ ನಾಗರಾಜ್ ಅವರು ಬ್ರೆಜಿಲಿಯನ್ ಮಸ್ತಿಫ್ ತಳಿಯ ನಾಯಿ ಎಲ್ಲರನ್ನು ಆಕರ್ಷಿಸಿತು. ಇದರ ಒಂದು ಕಣ್ಣು ನೀಲಿ ಮೊತ್ತೊಂದು ಕೆಂಪು ಬಣ್ಣದಿಂದ ಕೂಡಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link