ಗಾಣಧಾಳುವಿನಲ್ಲಿ ನೇತ್ರ ತಪಾಸಣಾ ಶಿಬಿರ

ಹುಳಿಯಾರು:

      ಹುಳಿಯಾರಿನ ಸಾಕ್ಷ್ಯ ಮಲ್ಟೀಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಬುಧವಾರ ಹೋಬಳಿಯ ಗಾಣಧಾಳು ಗ್ರಾಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

       ಈ ಶಿಬಿರದಲ್ಲಿ ಸುಮಾರು 90 ಕ್ಕೂ ಹೆಚ್ಚು ಮಂದಿ ತಪಾಸಣೆಗೆ ಒಳಪಡುವ ಮೂಲಕ ಶಿಬಿರದ ಸದುಪಯೋಗ ಪಡೆದುಕೊಂಡರು.
ಆಸ್ಪತ್ರೆ ಮುಖ್ಯಸ್ಥರಾದ ಶ್ರೀಮತಿಲಕ್ಮೀ, ಪವನ್ ಕುಲಕರ್ಣಿ, ಸಿಬ್ಬಂದಿವರ್ಗದವರಾದ ಮಧುಸೂದನ್, ನವೀನ್, ಇಮ್ರಾನ್, ನಿಶ್ಚಿತ, ರೂಪ ನೇತ್ರ ತಪಾಸಣೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಿದರು.

        ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರುಗಳಾದಂತಹ ಫಾತಿಮಾಬಿ, ಬೆಸ್ಕಾಂ ಕುಮಾರಸ್ವಾಮಿ, ಚಂದ್ರಶೇಖರಯ್ಯ, ಜಯದೇವಪ್ಪ, ವೀರಭದ್ರಪ್ಪ, ಎಸ್.ಚಂದ್ರಶೇಖರಯ್ಯ ಗಾಣಧಾಳು ಮತ್ತು ಸೋಮನಹಳ್ಳಿ ಆಶಾಕಾರ್ಯಕರ್ತೆಯರು. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link