ದಾವಣಗೆರೆ:
ವಿಜಯ ದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಆಕರ್ಷಕ ಪಥಸಂಚಲನ ಭಾನುವಾರ ನಗರದಲ್ಲಿ ನಡೆಯಿತು.
ಇಲ್ಲಿನ ಹೈಸ್ಕೂಲ್ ಮೈದಾನದಿಂದ ಆರಂಭವಾದ ಪಥ ಸಂಚಲನವು ಜಯದೇವ ವೃತ್ತ, ಕುವೆಂಪು ರಸ್ತೆ, ಪಿ.ಬಿ. ರಸ್ತೆ, ಗಾಂಧಿ ವೃತ್ತ, ಕಿತ್ತೂರು ಚೆನ್ನಮ್ಮ ವೃತ್ತ, ಖಮಿತ್ಕರ್ ಶ್ರೀರಾಮ ದೇವಸ್ಥಾನ ಮಾರ್ಗವಾಗಿ ಹೈಸ್ಕೂಲ್ ಮೈದಾನಕ್ಕೆ ಬಂದು ತಲುಪಿತು.
ಸಂಘದ ಹಿರಿಯರ ಮಾರ್ಗದರ್ಶನದಲ್ಲಿ ಇದೇ ಮೊದಲ ಬಾರಿಗೆ ಗಣವೇಷ ತೊಟ್ಟ ನೂರಾರು ಯುವ ಸ್ವಯಂಸೇವಕರು ಉತ್ಸಾಹದಿಂದ ಸ್ವಯಂಪ್ರೇರಿತರಾಗಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮಾರ್ಗದುದ್ದಕ್ಕೂ ನಾಗರೀಕರು ಜಮಾಯಿಸಿ ಶಿಸ್ತಿನ ಪಥ ಸಂಚಲನಕ್ಕೆ ಸಾಕ್ಷಿಯಾದರು.