ಕನಕದಾಸರ ಕೀರ್ತನೆಗಳಲ್ಲಿನ ಆದರ್ಶಗಳನ್ನು ಪಾಲಿಸಿ : ಜಿ.ಬಿ. ಜ್ಯೋತಿಗಣೇಶ್

ತುಮಕೂರು
    ದಾಸಶ್ರೇಷ್ಠ ಸಂತ, ಸಮಾಜದ ಹರಿಕಾರ ಕನಕದಾಸರ ಕೀರ್ತನೆಗಳಲ್ಲಿನ ಆದರ್ಶಗಳನ್ನು ಸಮಾಜದ ಪ್ರತಿಯೊಬ್ಬರೂ ಪಾಲಿಸಬೇಕೆಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಕರೆ ನೀಡಿದರು. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಂತಶ್ರೇಷ್ಠ ಕನಕದಾಸರ 532ನೇ ಜಯಂತೋತ್ಸವದಲ್ಲಿ ಕನಕದಾಸರು ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸಾಂಕೇತಿಕವಾಗಿ ಸರಳವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
    ನೂರಾರು ವರ್ಷಗಳ ಹಿಂದೆಯೇ ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಜಾತೀಯತೆ ಮತ್ತು ಇನ್ನಿತರೆ ಸಮಾಜದ ಏಳುಬೀಳುಗಳನ್ನು ವಿರುದ್ದ ಸಮಾಜಕ್ಕೆ ಅರಿವು ಮೂಡಿಸಿದ್ದರು. ಕನಕದಾಸರ ಆದರ್ಶಗಳು, ಚಿಂತನೆಗಳು ಸಮಾಜಕ್ಕೆ ತುಂಬಾ ಅಗತ್ಯವಾಗಿದ್ದು, ಪ್ರತಿಯೊಬ್ಬರು ತಮ್ಮ ಮನಸ್ಸನ್ನು ಪರಿವರ್ತನೆ ಮಾಡಿಕೊಂಡು ನಂತರ ಸಮಾಜ, ಊರು, ರಾಜ್ಯ, ದೇಶ ವ್ಯಾಪ್ತಿಯಲ್ಲಿ ಪರಿವರ್ತನೆ ತರಬೇಕಾಗಿರುವುದರಿಂದ ನಾವೆಲ್ಲ ಸಂಕಲ್ಪ ಮಾಡೋಣ ಎಂದು ಅವರು ತಿಳಿಸಿದರು. 
     ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅವರು ಮಾತನಾಡಿ, ಕನಕದಾಸರು 16ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಪಿಡುಗುಗಳನ್ನು ಹೋಗಲಾಡಿಸಲು ಸರಳವಾಗಿ ತಮ್ಮ ಕೀರ್ತನೆಗಳ ಮೂಲಕ ಜನರಿಗೆ ಅರಿವು ಮೂಡಿಸಿದ್ದರು. ಆದರೆ 21ನೇ ಶತಮಾನದಲ್ಲಿ ಇರುವ ನಾವು ಎಷ್ಟರಮಟ್ಟಿಗೆ ಅವರ ಆದರ್ಶಗಳನ್ನು ಅಳವಡಿಸಿಕೊಂಡಿದ್ದೇವೆ ಎಂಬುದರ ಕುರಿತು ಅವಲೋಕನ ಮಾಡಿಕೊಳ್ಳಬೇಕು. ‘ಕುಲಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ’ ಎಂಬ ಪ್ರಸಿದ್ದ ಕನಕದಾಸರ ಕೀರ್ತನೆಯನ್ನು ಸ್ಮರಿಸುತ್ತಾ ನಾವು ನಮ್ಮ ನೆಲೆಯನ್ನು ಕಂಡುಕೊಳ್ಳಬೇಕಿದೆ ಎಂದರು. ಸಮಾಜದ ಪಿಡುಗುಗಳ ಕುರಿತು ಚರ್ಚೆ ಮಾಡದೇ ಕನಕದಾಸರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನವಂಶಿ ಕೃಷ್ಣ ಅವರು ಮಾತನಾಡಿ ದಾಸಶ್ರೇಷ್ಠ ಕನಕದಾಸರ ಆದರ್ಶಗಳು ನಮ್ಮ ಜೀವನಕ್ಕೆ ಅಗತ್ಯವಾಗಿದ್ದು, ಅವುಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.ಕಾರ್ಯಕ್ರಮದಲ್ಲಿ ನಗರದ ಡಿ.ಎಂ ಪಾಳ್ಯದ ಗುರು ರೇವಣ ಸಿದ್ದೇಶ್ವರ ಮಠದ ಬಿಂದುಶೇಖರ ಒಡೆಯರ್ ಅವರು ಮಾತನಾಡಿ ಮನುಷ್ಯಧರ್ಮವನ್ನು ರಕ್ಷಣೆ ಮಾಡಬೇಕು, ಧರ್ಮ ವರ್ಗಕ್ಕೆ ಸೀಮಿತವಲ್ಲ ಮಾನವೀಯತೆಗೆ ಸೀಮಿತವಾದುದು ಎಂದು ಅವರು ತಿಳಿಸಿದರು.
     ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಎಸ್. ನಟರಾಜ್, ಡಿಡಿಪಿಐ ಎಂ. ಆರ್. ಕಾಮಾಕ್ಷಮ್ಮ, ಡಿಡಿಪಿಯು ಲಲಿತಾ ಕುಮಾರಿ, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಂಜುನಾಥ, ಕುರುಬರ ಸಂಘದ ಅಧ್ಯಕ್ಷ ಭೀಮಣ್ಣ, ಮಹಾನಗರ ಪಾಲಿಕೆಯ ಕೌನ್ಸಿಲರ್‍ಗಳಾದ ಮಲ್ಲಿಕಾರ್ಜುನ, ನಳಿನಾ ಇಂದ್ರಕುಮಾರ್ ಮತ್ತು ನರಸಿಂಹರಾಜು, ಕನಕ ಪತ್ತಿನ ಸಹಕಾರ ಸಂಘದ ಸುನೀತಾ ನಟರಾಜ್, ಹಾಗೂ ಕುರುಬ ಸಮುದಾಯದ ಮುಖಂಡರುಗಳಾದ ಹುಲಿನಾಯ್ಕ, ಎ. ಮಹಾಲಿಂಗಪ್ಪ, ಟಿ.ಆರ್. ಸುರೇಶ್, ಶಿವಮೂರ್ತಿ, ನಾಗಣ್ಣ, ಮಧುಕರ್, ರಘುರಾಂ, ಚಿಕ್ಕಣ್ಣ, ಪ್ರಭು, ಚಿಕ್ಕವೆಂಕಟಯ್ಯ, ಕೆಂಪರಾಜು, ಕೃಷ್ಣಮೂರ್ತಿ, ಪಾಪಣ್ಣ,  ಲಿಂಗರಾಜು ಸೇರಿದಂತೆ ನಗರಸಭಾ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap