ಶ್ರೀರಾಮನ ಆದರ್ಶಗಳನ್ನು ಪಾಲಿಸಿಕೊಂಡು ಬದಕನ್ನು ಸಾರ್ಥಕ ಪಡಿಸಿಕೊಳ್ಳೋಣ.

ಚಳ್ಳಕೆರೆ

      ನಗರದ ಪಾವಗಡ ರಸ್ತೆಯ ಶ್ರೀರಾಮಬಾಳೆಮಂಡಿ ಮುಂಭಾಗದಲ್ಲಿ ಕಳೆದ ಸುಮಾರು 40 ವರ್ಷಗಳಿಂದ ಶ್ರೀರಾಮನವಮಿಯನ್ನು ಆಚರಿಸುತ್ತಿದ್ದು, ಶನಿವಾರವೂ ಸಹ ಭಕ್ತಿ ಶ್ರದ್ದೆಗಳಿಂದ ಶ್ರೀರಾಮನವಮಿಯನ್ನು ಆಚರಿಸಲಾಯಿತು.

      ಪ್ರತಿವರ್ಷದಂತೆ ಈ ವರ್ಷವೂ ಸಹ ಪುರಸಭೆಯ ಮಾಜಿ ಅಧ್ಯಕ್ಷರಾದ ಕೆ.ಜೆ.ಗೋಪಾಲಸ್ವಾಮಿ, ಕೆ.ಜೆ.ಅಶೋಕ್‍ಕುಮಾರ್, ಎಚ್.ವಿ.ನಾಗರಾಜು, ಬಾಳೆಮಂಡಿ ವೆಂಕಟೇಶ್, ಎಂ.ಎಸ್.ಮಾರುತೇಶ್, ಬಿ.ಸಿ.ವೆಂಕಟೇಶ್‍ಮೂರ್ತಿ, ಯು.ಎಸ್.ವಿಷ್ಣುಮೂರ್ತಿರಾವ್, ಜಿ.ಮಾರಣ್ಣ, ಟಿ.ಜಯಣ್ಣ, ಹೊಸಮನೆಸ್ವಾಮಿ, ಪ್ರಕಾಶ್‍ಶೆಟ್ಟಿ, ಶ್ರೀನಾಥ, ತಿಪ್ಪೇಶ್, ಹನುಮಂತ, ಶಿವಣ್ಣ, ಶ್ರೀನಿವಾಸ್‍ಮೂರ್ತಿ ಮುಂತಾದವರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.

       ಆರ್ಚಕರಾದ ರಾಘವೇಂದ್ರ, ನಾಗರಾಜು ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪಾವಗಡ ರಸ್ತೆಯ ಬಹುತೇಕ ಅಂಗಡಿ ಮಾಲೀಕರು ಹಾಗೂ ನೌಕರರು ಆಗಮಿಸಿ ಪಾನಕ ಮತ್ತು ಕೋಸಂಬರಿಯನ್ನು ಸೇವಿಸಿ ಶ್ರಿರಾಮನ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಯು.ಎಸ್.ವಿಷ್ಣುಮೂರ್ತಿರಾವ್, ಶ್ರೀರಾಮ ನವಮಿ ಕಾರ್ಯಕ್ರಮದ ಮೂಲಕ ನಾವೆಲ್ಲರೂ ಪ್ರಭು ಶ್ರೀರಾಮಚಂದ್ರನ ಆದರ್ಶಗಳನ್ನು ಮೈಗೂಡಿಸಿಕೊಂಡು ನಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕಿದೆ. ಪ್ರಭು ಶ್ರೀರಾಮಚಂದ್ರ ದೈವ ಬಲವಿದ್ದರೂ ಸಹ ಅನೇಕ ಕಷ್ಟಗಳಿಗೆ ಗುರಿಯಾದನು. ಆದರೂ ಸಹ ತನ್ನದೇಯಾದ ಶ್ರದ್ದೆ, ವಿನಯದ ಮೂಲಕ ಎಲ್ಲರಿಗೂ ಆದರ್ಶಪ್ರಾಯನಾಗಿದ್ಧಾನೆ. ಶ್ರೀರಾಮನವಮಿ ಉತ್ಸವ ನಮ್ಮೆಲ್ಲರಿಗೂ ಉತ್ತಮ ಬದುಕನ್ನು ರೂಪಿಸುವಂತಾಗಲಿ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap