ನಕಲಿ ಶೂರಿಟಿ ಜಾಲಬೇಧಿಸಿದ ಸಿಸಿಬಿ..!

ಬೆಂಗಳೂರು

    ಅಪರಾಧಿಗಳಿಗೆ ಜಾಮೀನು ಕೊಡಿಸಲು ನ್ಯಾಯಾಲಯಗಳಿಗೆ ನಕಲಿ ಶ್ಯೂರಿಟಿ ನೀಡುತ್ತಿದ್ದ ಜಾಲವನ್ನು ಬೇಧಿಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ಸೋಲದೇವನಹಳ್ಳಿಯ ಮಧುಕುಮಾರ್, ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ರಮಾದೇವಿ, ಚಿತ್ರದುರ್ಗದ ಬಸವ ಕುಮಾರ್ ಹಾಗೂ ಆಂಧ್ರ ಮೂಲದ ರತ್ನಮ್ಮ ಬಂಧಿತ ಆರೋಪಿಗಳಾಗಿದ್ದರೆ ಬಂಧಿತರಿಂದ ನಕಲಿ ಸೀಲ್‌ಗಳು ಅಪಾರ ಪ್ರಮಾಣದ ಭೂದಾಖಲೆಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

    ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಆರೋಪಿಗಳಿಗೆ ಬಂಧಿತರು ನಕಲಿ ಶ್ಯೂರಿಟಿ ನೀಡುತ್ತಿದ್ದು, ಇವರ ಜಾಲಕ್ಕೆ ರತ್ನಮ್ಮ ಪ್ರಮುಖಳಾಗಿದ್ದಳು ಎಂದು ಹೇಳಿದರು.ಭೂ ದಾಖಲೆಗಳು, ನಕಲಿ ಗುರುತಿನ ಚೀಟಿಗಳನ್ನು ನಕಲು ಮಾಡುವುದು, ಇನ್ನಿತರ ಕೃತ್ಯಗಳಲ್ಲಿ ಜಾಲವು ಸಕ್ರಿಯವಾಗಿದ್ದು, ಈವರೆಗೆ 100ಕ್ಕೂ ಹೆಚ್ಚು ಪ್ರಕರಣಗಳಲ್ಲಿ ನಕಲಿ ಶ್ಯೂರಿಟಿ ಹಾಕಿರುವುದು ಪತ್ತೆಯಾಗಿದೆ.

     ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ವಿವಿಧ ವ್ಯಕ್ತಿಗಳ ಆಧಾರ್ ಕಾರ್ಡ್‌ಗಳು, ಗ್ರಾಮ ಲೆಕ್ಕಿಗರ ಸೀಲುಗಳು, ಇನ್ನಿತರ ನಕಲಿ ಭೂ ದಾಖಲೆಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap