ಹುಳಿಯಾರು
ತೆಂಗು ಮತ್ತು ದಾಳಿಂಬೆ ತೋಟಕ್ಕೆ ಬೆಂಕಿ ತಗುಲಿ ಲಕ್ಷಾಂತರರ ರೂ. ನಷ್ಟವಾದ ಘಟನೆ ಹುಳಿಯಾರು ಹೋಬಳಿ ಮೋಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಮೋಟಿಹಳ್ಳಿ ಗ್ರಾಮದ ಎಂ.ಆರ್.ನಟರಾಜು ಅವರ ಜಮೀನಿನಲ್ಲಿ ಈ ಅವಘಡ ಸಂಭವಿಸಿದ್ದು ವಿದ್ಯುತ್ ಲೈನ್‍ನ ಸ್ಪಾರ್ಕ್ ಕಿಡಿಗಳು ಹುಲ್ಲಿನ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ.
ಪರಿಣಾಮ 30 ತೆಂಗಿನ ಮರಗಳು, ಮುನ್ನೂರು ದಾಳಿಂಬೆ ಗಿಡ, ನಾಲ್ಕು ಬೇವಿನ ಮರಗಳು, ನೀರು ಬಿಡಲು ಇಟ್ಟಿದ್ದ ಪೈಪ್‍ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಲಕ್ಷಾಂತರ ರೂ. ನಷ್ಟವಾಗಿದೆ.ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
