ಹುಳಿಯಾರು
ಕೃಷಿ ಪಂಪ್ ಸೆಟ್‍ನ ಸ್ಟಾರ್ಟರ್‍ನಿಂದ ವಿದ್ಯುತ್ ಸ್ಪರ್ಶವಾಗಿ ರೈತ ಸಾವನ್ನಪ್ಪಿದ ಘಟನೆ ಹುಳಿಯಾರು ಸಮೀಪದ ಬೆಳವಾಡಿಯಲ್ಲಿ ಜರುಗಿದೆ.ಹುಳಿಯಾರು ಹೋಬಳಿಯ ಅಗ್ರಹಾರ ಗ್ರಾಮದ ಆರ್.ನರಸಿಂಹಮೂರ್ತಿ (48) ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ದುದೈರ್ವಿಯಾಗಿದ್ದಾರೆ. ಇವರು ಎಂದಿನಂತೆ ಬೆಳವಾಡಿ ಸರ್ವೆ ನಂ 76/4 ರಲ್ಲಿನ ತಮ್ಮ ಅಡಿಕೆ ತೋಟಕ್ಕೆ ನೀರು ಕಟ್ಟಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಪಂಪ್ ಸೆಟ್‍ನ ಸ್ಟಾರ್ಟರ್‍ನಿಂದ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ.
ವಿದ್ಯುತ್ ಸ್ಪರ್ಶದಿಂದ ಬಲಗೈ ಹಾಗೂ ಬಲಗಾಲುಗಳು ಕಪ್ಪಗಾಗಿದ್ದು ಸ್ಟಾರ್ಟರ್ ಬಾಕ್ಸ್‍ನಲ್ಲಿ ಕೈ ಇರುವ ರೀತಿಯಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹುಳಿಯಾರು ಪೊಲೀಸರು ಭೇಟಿ ನೀಡಿ ಘಟನೆಯ ವಿವರ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ರೈತ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








