ಚಿತ್ರದುರ್ಗ
ಪ್ರತಿಭಟನೆ ಮಾಡಲು ಮೆರವಣಿಗೆ ಮೂಲಕ ಹೋಗುವವರನ್ನು ತಡೆದ ಹಿನ್ನಲೆಯಲ್ಲಿ ರೈತರು ಮತ್ತು ಆರಕ್ಷಕರ ಮಧ್ಯೆ ಮಾತಿನ ಚಕಮಕಿ ನಡೆದ ಫಟನೆ ಇಂದು ನಡೆದಿದೆ.
ಚಿತ್ರದುರ್ಗ ತಾಲ್ಲೂಕಿನ ಚಿಕ್ಕಕಬ್ಬಿಗೆರೆ ಗ್ರಾಮವೊಂದರಲ್ಲಿ ಬೆಸ್ಕಾಂನ ಜಾಗೃತ ದಳದವರು ಭೇಟಿ ನೀಡಿ ಅಲ್ಲಿನ ಜನತೆಗೆ ಹೊಸದಾಗಿ ಮೀಟರ್ ಹಾಕುವುದಾಗಿ ಹೇಳಿ ಗ್ರಾಮಸ್ಥರಿಂದ ಕೆಲವೊಂದು ಪತ್ರಗಳಿಗೆ ಸಹಿಯನ್ನು ಹಾಕಿಸಿದ್ದು ಇದರಲ್ಲಿ ಖಾಲಿ ಬಿಳಿ ಹಾಳೆಯ ಮೇಲೂ ಸಹಾ ಸಹಿಯನ್ನು ಪಡೆದಿರುವ ಹಿನ್ನಲೆಯಲ್ಲಿ ಮತ್ತು ಮನೆಗೆ ಪೋಲಿಸರು ಕೆಲವು ಮನೆಗಳಿಗೆ ಬೂಟು ಕಾಲಲ್ಲಿ ರೈತರ ಮನೆಗೆ ನುಗ್ಗಿದ್ದಾರೆ ರೈತ ಮುಖಂಡರು ದೂರಿದರು.
ಇದಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳು ರೈತರಿಂದ ಬಿಳಿ ಹಾಳೆ ಸಹಿ ಹಾಕಿಸಿಕೊಂಡದ್ದನ್ನು ಖಂಡಿಸಿ ರೈತರು ಪ್ರತಿಭಟನೆಗೆ ಮುಂದಾಗಿದ್ದರು. ಪ್ರವಾಸಿ ಮಂದಿರದಿಂದ ಜಾಗೃತ ದಳ ಕಚೇರಿಗೆ ತೆರಳಲು ಮುಂದಾಗಿದ್ದ ರೈತರ ಮೆರವಣಿಗೆ ತಡೆ ಪೆÇಲೀಸರು. ಇದನ್ನು ಖಂಡಿಸಿ ಪೆÇಲೀಸ್ ಅಧಿಕಾರಿಗಳೊಂದಿಗೆ ರೈತರು ವಾಗ್ವಾದ ನಡೆಸಿದರು.
ಬೆಸ್ಕಾಂ ಅಧಿಕಾರಿಗಳ ವಿರುದ್ದದ ಪ್ರತಿಭಟನೆ ಮೊದಲೇ ಪೆÇಲೀಸರ ವಿರುದ್ಧ ತಿರುಗಿದ ರೈತರ ಆಕ್ರೋಶ ವ್ಯಕ್ತಪಡಿಸಿದರು. ನಾವೇನು ಕಳ್ಳರೆ ನಾವೇಕೆ ಅನುಮತಿ ಪಡೆಯಬೇಕು. ಚಿಕ್ಕಕಬ್ಬಿಗೆರೆ ಗ್ರಾಮದಲ್ಲಿ ಮಂಗಳವಾರ ಬೆಸ್ಕಾಂ ಜಾಗೃತದಳದ ಅಧಿಕಾರಿಗಳು ರೈತರ ಮನೆಗೆ ನುಗ್ಗಿ ಈ ಹಿಂದೆ ಮೀಟರ್ ವಾಪಾಸ್ ಪಡೆದವರಿಂದ ಖಾಲಿ ಬಿಳಿ ಹಾಳೆಯಲ್ಲಿ ಸಹಿ ಪಡೆದಿದ್ದಾರೆ. ಆಸ್ತಿಯನ್ನು ಬರೆದುಕೊಂಡರೆ ಏನು ಮಾಡಬೇಕು? ದೌರ್ಜನ್ಯ ಮಾಡಿರುವರನ್ನು ಸುಮ್ಮನೆ ಬಿಟ್ಟು ಇದೀಗ ಪ್ರತಿಭಟನೆ ಮಾಡುವ ರೈತರನ್ನು ತಡೆಯುವುದು ಯಾವ ನ್ಯಾಯ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಅನುಮತಿ ಪಡೆದಿಲ್ಲ. ಇದು ತಪ್ಪಾಗುತ್ತದೆ. ಬೇಕಾಗಿದ್ದರೆ ಬೆಸ್ಕಾಂ ಜಾಗೃತ ದಳದ ಅಧಿಕಾರಿಯನ್ನು ಪ್ರವಾಸಿಮಂದಿರಕ್ಕೆ ಕರೆತರಲಾಗುವುದು ಎಂದು ಭರವಸೆ ನೀಡಿದರು. ಸುಮಾರು ಹೊತ್ತಾದರೂ ಬಾರದ ಕಾರಣ ರೈತರು ಮತ್ತೆ ಹೊರಡಲು ಅಣಿಯಾದರು. ಆಗ ಪೊಲೀಸರು ಪೊಲೀಸ್ ವ್ಯಾನ್‍ನಲ್ಲಿ ಕುಳಿತುಕೊಂಡರೆ ಬೆಸ್ಕಾಂ ಜಾಗೃತದಳದ ಕಚೇರಿಗೆ ಬಿಡುವುದಾಗಿ ಹೇಳಿದರು. ಆಗ ರೈತರು ನಾವೇನು ಕಳ್ಳರೆ? ನಾವೇಕೆ ವ್ಯಾನ್ ಹತ್ತಬೇಕು ಎಂದು ರೈತ ಮುಖಂಡ ನಾಗರಾಜ್ ಪ್ರಶ್ನಿಸಿದರು.
ಏತನ್ಮಧ್ಯೆ ಭೇರೆ ಕಡೆ ಇದ್ದ ರೈತ ಮುಖಂಡ ಈಚಗಟ್ಟಸಿದ್ದವೀರಪ್ಪ ಹಾಗೂ ಬೆಂಬಲಿಗರು ಬೆಸ್ಕಾಂ ಜಾಗೃತ ದಳದ ಕಚೇರಿಗೆ ತೆರಳಿದರು. ಅಲ್ಲಿ ಅಧಿಕಾರಿಗಳೊಂದಿಗೆ ಸುಮಾರು ಹೊತ್ತು ಸಮಾಲೋಚನೆ ನಡೆಸಿದರು.ನಂತರ ಬೆಸ್ಕಾಂ ಜಾಗೃತದಳ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದ ರೈತರು ಅಲ್ಲಿ ಬೆಸ್ಕಾಂ ಜಾಗೃತ ದಳದಿಂದ ರೈತರಿಗೆ ಆಗುತ್ತಿರುವ ಮತ್ತು ಆಗಿರುವ ಅನ್ಯಾಯದ ಬಗ್ಗೆ ಈಚಘಟ್ಟದ ಸಿದ್ದವೀರಪ್ಪ ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ