ಚಿತ್ರದುರ್ಗ
ಎಲ್ಲಾ ಸಂಸ್ಕೃತಿಗೆ ಮೂಲ ಕೃಷಿ ಸಂಸ್ಕೃತಿ, ದೇವರಿಗೆ ಸಮಾನವಾದ ಸ್ಥಾನ ಕೃಷಿಕರಿಗಿದೆ. ರೈತರ ಜೀವನ ಕಷ್ಟದಾಯಕವಾಗಿದೆ. ಕೃಷಿಯಿಂದ ಆದಾಯ ಬರದೇ ಇದ್ದರೆ ಕೃಷಿ ಮಾಡಲು ಯಾರೂ ಮುಂದೆ ಬರುವುದಿಲ್ಲ. ಪವಿತ್ರ ದಾಸೋಹ ಸಂಸ್ಕೃತಿಗೆ ಮೂಲ ಕಾರಣವೇ ರೈತರು ಎಂದು ತುಮಕೂರಿನ ಶ್ರೀಸಿದ್ದಲಿಂಗೇಶ್ವರ ಸ್ವಾಮೀಜಿ ಪ್ರತಿಪಾದಿಸಿದರು
ಮುರುಘಾಮಠದಲ್ಲಿ ನಡೆಯುತ್ತಿರುವ ಶರಣಸಂಸ್ಕೃತಿ ಉತ್ಸವದಲ್ಲಿ ಶನಿವಾರ ಅಯೋಜಿಸಲಾಗಿದ್ದ ಕೈಗಾರಿಕಾ ಕೃಷಿ ಮೇಳ ಹಾಗೂ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು
ಶರಣ ಸಂಸ್ಕೃತಿ ಜನ ಸಂಸ್ಕೃತಿ. ಎಲ್ಲರಿಗೂ ಬೆಳಕು ನೀಡುವ ಸಂಸ್ಕೃತಿ. ಮಾನವೀಯ ಬದುಕಿಗೆ ಬೇಕಾದ ಮೌಲ್ಯಗಳನ್ನು ಕೊಟ್ಟ ಮಠ ಮುರುಘಾ ಮಠ. ಇದನ್ನು ಭಕ್ತಿಶ್ರದ್ದೆಯಿಂದ, ಶಿವಮೂರ್ತಿ ಮುರುಘ ಶರಣರು ನಡೆಸಿಕೊಂಡು ಬಂದಿದ್ದಾರೆ ಎಂದು ನುಡಿದರು
ಕೃಷಿಕರ ಜೀವನ ಹಸನು ಮಾಡಲು ಸರ್ಕಾರ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕೆಂದು ತಿಳಿಸಿದರು. ಡಾ. ಶಿವಮೂರ್ತಿ ಮುರುಘ ಶರಣರು ಕೃಷಿಗೆ ಹೆಚ್ಚು ಒತ್ತನ್ನು ನೀಡಿ ಶರಣ ಸಂಸ್ಕೃತಿಯ ಮೂಲಕ ರೈತರ ಬದುಕನ್ನು ಹಸನು ಮಾಡುವ ಕೆಲಸ ಮಾಡುತ್ತಿದ್ದಾರೆ ನುಡಿದರು.
ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಮಾತನಾಡಿ, ಹಿಂದೆ ಕೆರೆ ಕಟ್ಟೆ ಮತ್ತು ತೆರೆದ ಬಾವಿಗಳಿಂದ ನೀರಾವರಿ ಸೌಲಭ್ಯ ನಡೆಯುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ನೀರನ್ನು ಸಂಗ್ರಹಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕಾಗಿದೆ ಎಂದರು
ಬರಡಾದ ಚಿತ್ರದುರ್ಗದ ಜನರ ಕಷ್ಟ ತಿಳಿದು ಯಡಿಯೂರಪ್ಪ ಹಾಗೂ ಹಿಂದಿನ ಸರ್ಕಾರಕ್ಕೆ ಒತ್ತಾಯ ಮಾಡಿ ಜಿಲ್ಲೆಗೆ ಭದ್ರಾ ನೀರು ಬರಲು ಡಾ. ಶಿವಮೂರ್ತಿ ಮುರುಘಾ ಶರಣರು ಪಾತ್ರ ಮುಖ್ಯವಾದುದು. ಹನಿ ನೀರಾವರಿ ಪದ್ದತಿ ಇಸ್ರೀಲ್‍ನ ಒಂದು ಕೊಡುಗೆ ಎಂದರು.
ನೀರನ ಬಳಕೆಯ ಮೌಲ್ಯವನ್ನು ತಿಳಿಯಬೇಕು ನೀರನ ಸದ್ಬಳಿಕೆ ಮುಖ್ಯ, ಇಸ್ತ್ರೇಲ್ ನಲ್ಲಿ ಸುಮಾರು 50 ಮಿ.ಮಿ ಪ್ರಮಾಣದಲ್ಲಿ ಮಳೆಬರುತ್ತದೆ, ಕರ್ನಾಟದಲ್ಲಿ 800-900 ಮಿ.ಮಿ ಮಳೆ ಬಂದರೂ ನಿರನ್ನು ಕೃಷಿಯಲ್ಲಿ ಸದ್ಬಳಕೆಯಾಗುತ್ತಿಲ್ಲವೆಂದು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾದ ಶ್ರೀ ಗುರುಪ್ರಸಾದ್ ಅಭಿಪ್ರಾಯಪಟ್ಟರು. ಕೆಲವ 50 ಮಿ.ಮಿ. ಮಳೆಯಲ್ಲಿ ಇಸ್ತ್ರೇಲ್ ಜಗ್ಗತ್ತಿಗೆ ಮಾಧರಿಯಾಗಿ ಉನ್ನತ ಮಟ್ಟದ ವ್ಯವಸಾಯಮಾಡುತ್ತದೆ ಎಂದರು.
ಹಿಂದಿನ ಸರ್ಕಾರ 30ಕೋಟಿ ಮೀಸಲಿಕರಿಸಿದ್ದು 500 ಜನ ರೈತರನ್ನು ಇಸ್ತ್ರೇಲ್‍ಗೆ ಹೊಗಿಬಂದರು, ಅಲ್ಲಿ ನೋಡಿದ್ದು, ಕಲಿತಿದ್ದು ಅದನ್ನು ನಮ್ಮಲ್ಲಿ ಅಳವಡಿಸಲು ಸಾಧ್ಯವೇ ಎಂದು ರೈತರನ್ನು ಪ್ರಶ್ನಿಸಿದರಂತೆ. ಇಸ್ತ್ರೇಲ್ ಕೃಷಿಯನ್ನು ನಮ್ಮಲ್ಲಿ ಅಳವಡಿಸಲು ಸಾಧ್ಯವಿಲ್ಲ, ನಿತ್ಯ ಜೀವನದ ಕೃಷಿಪದ್ದತಿಯನ್ನು ಇಸ್ತ್ರೇಲ್ ಶಿಸ್ತುಬದ್ದವಾಗಿ, ವೈಜ್ಞಾನಿಕವಾಗಿ ಮಾಡುತ್ತಿದ್ದಾರೆ, ಅವರಲ್ಲಿ ಶ್ರದ್ದೆ, ಶಿಸ್ತು, ಆಸಕ್ತಿಯಿದೆ ಇದನ್ನು ನಾವು ಅಳವಡಿಸಿಕೊಳ್ಳಲು ವಿಫಲರಾಗಿದ್ದೇವೆಂದು ಪತ್ರಕರ್ತ ವಿಶ್ವೇಶ್ವರಭಟ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ಮುಂದಿನ ಶರಣ ಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷರಾಗಿ ತುಮಕೂರಿನ ಶ್ರೀಸಿದ್ದಲಿಂಗಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು
ಸಮಾರಂಭ ಕಾಗಿನೆಲೆ ಗುರುಪೀಠದ ಜಗದ್ಗುರು ಶ್ರೀನಿರಂಜನಾನಂದಪುರಿ ಮಹಾಸ್ವಾಮಿಗಳು, ಹರಗುರು ಚರ ಮೂರ್ತಿಗಳು, ಎಸ್.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿಗಳಾದ ಎ.ಜೆ.ಪರಮಶಿವಯ್ಯ ಶರಣ ಸಂಸ್ಕೃತಿ ಉತ್ಸವ ಸಮಿತಿ ಕಾರ್ಯಧ್ಯಕರಾದ ಹನುಮಲಿ ಷಣ್ಮುಖಪ್ಪ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದೊರೆಸ್ವಾಮಿ, ಹಾಜರಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಡಾ.ಎಲ್. ಉಮೇಶ್, ಪ್ರಾಧ್ಯಪಕರು, ಜೆ.ಪ್ರಕಾಶ್, ಸಿ.ಅರ್ ನಾರಪ್ಪ, ಇಂಜಿನಿಯರ್ ಇವರುಗಳನ್ನು ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ