ಎಂ ಎನ್ ಕೋಟೆ :
ಕಳೆದ ಎರಡು ವರ್ಷದಿಂದ ಕೈಕೊಟ್ಟಿದ್ದ ಮಳೆ ಈ ಭಾರಿ ಅನ್ನದಾತರ ಮೇಲೆ ಕೃಪೆ ತೋರಿ ಉತ್ತಮವಾಗಿ ಬಂದ ಪರಿಣಾಮದಿಂದ ರಾಗಿಯ ಫಸಲು ಉತ್ತಮವಾಗಿದ್ದು ಅನ್ನದಾತರ ಲಾಭದ ನಿರಿಕ್ಷೇಯಲ್ಲಿದೆ.
ನಿಟ್ಟೂರು ಹೋಬಳಿಯ ಎಂ ಎನ್ ಕೋಟೆ, ಮಣಿಪುರ, ಸಾಗಸಂದ್ರ ಭಾಗಗಳಲ್ಲಿ ರಾಗಿ ಉತ್ತಮವಾಗಿ ಬೆಳೆದು ನಳನಳಿಸುತ್ತಿದೆ. ರಾಗಿಯ ಫಸಲು ನೋಡಿದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಕೆಲ ವರ್ಷಗಳಿಗೆ ಹೋಲಸಿದರೆ ಈ ಭಾರಿಯು ರಾಗಿ ಕೈಕೊಡುವಂತೆ ಕಾಣುತ್ತಿತ್ತು. ಆದರೆ ಕಳೆದ ತಿಂಗಳಿನಿಂದ ಬರುತ್ತಿರುವ ಮಳೆಯ ರೈತರಿಗೆ ನವ ಚೈತನ್ಯ ಮೂಡಿಸಿದೆ. ರಾಗಿ ಬೆಳೆಯುವ ಕಾಲದಲ್ಲಿ ಸೂಕ್ತ ಸಮಯಕ್ಕೆ ಮಳೆ ಬಂದು ಜೀವಕಳೆ ತಂದಿದೆ.
ಈ ಭಾರಿ ಮಳೆಯಿಂದ ಕೆರೆ ಕಟ್ಟೆಗಳಲ್ಲಿ ನೀರು ನಿಂತು ರೈತರಲ್ಲಿ ಹರ್ಷ ಮೂಡಿಸಿದೆ. ಜತೆಗೆ ನೆಲಕಚ್ಚಿದ್ದ ರಾಗಿ ಬೆಳೆ ಹುಲುಸಾಗಿ ಬೆಳೆದು ನಿಂತಿದೆ.ಈಗಾಗಲೇ ರಾಗಿ ಬೆಳೆ ತೆನೆ ಕಟ್ಟುವ ಹಂತದಲ್ಲಿದೆ ಎಂದರು ಮಳೆಯಾಶ್ರಿತ ಭೂಮಿಯಲ್ಲಿ ಬೆಳೆದಿರುವ ಹೆಚ್ಚಿನ ರಾಗಿ ಬೆಳೆ ಈಗ ಕಾಳುಕಟ್ಟುವ ಹಂತದಲ್ಲಿದೆ. ಆದರೆ ಮೊದಲೇ ಹಾಕಿದ್ದ ರಾಗಿ ಬೆಳೆಯು ತಿನ್ನುವ ತೆನೆಯಾಗಿದೆ. ಇನ್ನು ಕೊನೆಗೆ ಹಾಕಿದ್ದ ಬೆಳೆ ಉತ್ತಮವಾಗಿದೆ ಎಂದರು. ಶಿವನ ಕೃಪೆಯಿಂದ ಈ ಭಾರಿ ಉತ್ತಮ ಮಳೆಯಾಗಿದೆ. ಆದರೆ ಕೆರೆಕಟ್ಟೆಗಳು ತುಂಬಿಲ್ಲವೆಂಬ ಕೊರಗಿದೆ. ಆದರೂ ಒಳೆಯ ಮಳೆಯಿಂದ ರಾಗಿಯ ಜೂತೆಗೆ ಹುಲ್ಲು ಕೂಡ ನಮ್ಮ ಜಾನುವಾರುಗಳಿಗೆ ಮೇವಿನ ಚಿಂತೆ ಇಲ್ಲದಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ