ಕಪ್ಪು ಬಾವುಟ ಪ್ರದರ್ಶಿಸಿದ ತಾ.ರೈತ ಸಂಘಟನೆಯ ಕಾರ್ಯಕರ್ತರ ಬಂಧನ

ತಿಪಟೂರು

     ರೈತ ಸಂಘ ಮತ್ತು ಇತರ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ರೈತ ಸಮ್ಮಾನ್ ಯೋಜನೆಯ ಉದ್ಘಾಟನೆಗೆ ತುಮಕೂರಿಗೆ ಆಗಮಿಸುತ್ತಿರುವ ನರೇಂದ್ರ ಮೋದಿಯವರ ಕಾರ್ಯಕ್ರಮ ವಿರೋಧಿಸಲು ತುಮಕೂರಿಗೆ ಹೊರಟಿದ್ದ ರೈತರನ್ನು ನಗರದಲ್ಲಿ ಬಂದಿಸಿದ ಘಟನೆ ಜರುಗಿತು.

      ಈ ಸಂದರ್ಭದಲ್ಲಿ ಸೌಹಾರ್ದ ತಿಪಟೂರು ವೇದಿಕೆಯ ಅಲ್ಲಾಬಕಾಷ್ ಮಾತನಾಡಿ, ಕೇಂದ್ರ ಬೀಜ ಸರ್ಕಾರ ತಂದಿರುವ ಬೀಜನೀತಿ, ಎನ್.ಸಿ.ಆರ್‍ಪಿ, ವರದಿಗಳನ್ನು ತಿರಸ್ಕರಿಸಿ, ಸ್ವಾಮಿನಾಥನ್ ವರದಿ ಜಾರಿಯಾಗಬೇಕು. ನಮ್ಮ ಭೂಮಿ ನಮ್ಮ ಹಕ್ಕು ಎಂದು ನಮ್ಮ ಭೂಮಿಯನ್ನು ಯಾರಿಗೂ ನೀಡುವುದಿಲ್ಲವೆಂದು ತಿಳಿಸಿದ ಅವರು, ಜನವರಿ 8 ರಂದು ನಡೆಯುವ ಭಾರತ್ ಬಂದ್‍ಗೆ ಜನರು ಬೆಂಬಲಿಸಬೇಕೆಂದು ಸಾರ್ವಜನಿಕರಿಗೆ ಕರೆನೀಡಿದರು.

      ರೈತಸಂಘದ ಅಧ್ಯಕ್ಷ ಬಸ್ತಿಹಳ್ಳಿರಾಜಣ್ಣ ಮಾತನಾಡಿ, ಇಲ್ಲದ ನೀತಿಗಳನ್ನು ಮಾಡುವ ಬದಲು ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆಯನ್ನು ಕೊಡುವುದನ್ನು ಬೇರೆ ರಾಷ್ಟ್ರಗಳಿಂದ ತೆಂಗು ಮತ್ತು ಅಡಕೆ ಆಮದು ನೀತಿಯನ್ನು ನಿಲ್ಲಿಸಿ, ರೈತರ ಹಿತವನ್ನು ಕಾಪಾಡಿ ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

      ಹೆದ್ದಾರಿ ಹಿತರಕ್ಷಣಾ ಸಮಿತಿಯ ಮನೋಹರ್ ಪಟೇಲ್ ಮಾತನಾಡಿ, ಹೆದ್ದಾರಿಗೆ ಸೂಕ್ತಬೆಲೆಯನ್ನು ಕೊಡದ ಹೊರತು ಭೂಮಿಯನ್ನು ಬಿಟ್ಟುಕೊಡುವುದಿಲ್ಲವೆಂದು ತಿಳಿಸಿದರು.ತುಮಕೂರಿನಲ್ಲಿ ನಡೆಯುವ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸುತ್ತಿದ್ದ ರೈತ ಸಂಘಟನೆಯ ಕಾರ್ಯಕರ್ತರನ್ನು ನಗರದ ಕೋಡಿ ಸರ್ಕಲ್ ಹತ್ತಿರ ಪೋಲಿಸರು ಬಂಧಿಸಿದರು. ಪ್ರತಿಭಟನೆಯಲ್ಲಿ ಹಸಿರುಸೇನೆ ತಿಮ್ಮಲಾಪುರ ದೇವರಾಜು, ರೈತಸಂಘದ ಬೆನ್ನಾಯಕನಹಳ್ಳಿ ದೇವರಾಜು, ಮಹಜರಿನ್ ಮಸೀದಿ ಮುಖಂಡ ಸೈಯದ್ ಮಹಬೂಬ್, ಮುಜ್ಜಮಿಲ್ ಪಾಷಾ ಜಮಾಲ್ ಮೊಹಮ್ಮದ್ ಮತ್ತಿತರರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap