ಶಿರಾ:
ರೈತರ ಬದುಕನ್ನು ಹಸನುಗೊಳಿಸಲು ಸರ್ಕಾರ ನಾನಾ ರೀತಿಯ ಯೋಜನೆಗಳನ್ನು ಅಸ್ತಿತ್ವಕ್ಕೆ ತಂದಿದ್ದು ಇಂತಹ ಯೋಜನೆಗಳ ಪೈಕಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯೂ ಒಂದಾಗಿದ್ದು ಈ ಯೋಜನೆಯಡಿಯಲ್ಲಿ ರೈತರಿಗೆ ರಿಯಾಯಿತಿ ಧರದಲ್ಲಿ ಬಿತ್ತನೆ ಬೀಜಗಳ ವಿತರಣೆ ಮಾಡಲು 1524.10 ಕ್ವಿಂಟಾಲ್ ಬಿತ್ತನೆ ಬೀಗಳನ್ನು ಕೃಷಿ ಇಲಾಖೆ ದಾಸದತಾನು ಮಾಡಿದ್ದು ರೈತರು ಈ ಯೋಜನೆಯ ಪ್ರಯೋಜನ ಪಡೆಯುವಂತೆ ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಗುರುವಾರ ಕೃಷಿ ಇಲಾಖೆಯು ಏರ್ಪಾಟು ಮಾಡಿದ್ದ ರೈತರಿಗೆ ರಿಯಾಯಿತಿ ಧರದಲ್ಲಿ ನೀಡಲಾಗುವ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.2020ರ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ವತಿಯಿಂದ ಈ ಬಿತ್ತನೆ ಬೀಜಗಳನ್ನು ನೀಡಲಾಗುತ್ತಿದೆ. ಜೋಳ, ತೊಗರಿ, ಹೆಸರು, ಉದ್ದು, ನೆಲಗಡಲೆ, ಅಲಸಂದೆ ಮತ್ತೊ ಸೂರ್ಯಕಾಂತಿ ಬೀಜಗಳನ್ನು ರಿಯಾಯಿತಿ ಧರದಲ್ಲಿ ವಿತರಿಸಲಾಗುತ್ತಿದೆ. ಬರದ ಬೀಡಿನ ರೈತರ ಸಂಕಷ್ಟ ತೀರಬೇಕೆಂದರೆ ಉತ್ತಮ ಮಳೆ ಆಗಬೇಕು. ಈ ವರ್ಷ ಉತ್ತಮ ಮಳೆಯಾಗುವ ಆಶಾ ಭಾವನೆಯನ್ನು ಹೊಂದಿದ್ದೇವೆ ಎಂದರು.
ರಿಯಾಯಿತಿ ಧರದ ಬಿತ್ತನೆ ಬೀಜಗಳನ್ನು ಪಡೆಯಲು ಇಲಾಖೆಯು ಸೂಚಿಸುವ ದಾಖಲಾತಿಗಳನ್ನು ರೈತರು ಸಲ್ಲಿಸಿ ಬೀಜಗಳನ್ನು ಪಡೆಯುವ ಮೂಲಕ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ರೈತರು ತಮ್ಮ ಜಮೀನುಗಳಲ್ಲಿ ಪ್ರತೀ ವರ್ಷವೂ ಬೆಳೆಯುವ ಬೆಲೇಯಲ್ಲಿ ಬದಲಾವಣೆ ಮಾಡಿಕೊಂಡರೆ ಬೆಳೆ ಬದಲಾವಣೆಯಿಂದ ಇಳುವರಿಯೂ ಸಾದ್ಯವಾಗುತ್ತದೆ ಎಂದು ಶಾಸಕರು ತಿಳಿಸಿದರು.
ತಾಲ್ಲೂಕು ದಂಡಾಧಿಕಾರಿ ಶ್ರೀಮತಿ ನಾಹಿದಾ ಜಮ್ ಜಮ್ ಮಾತನಾಡಿ ಕೃಷಿಯಲ್ಲಿ ಆಸಕ್ತಿ ಇರಬೇಕಿದ್ದು ಹದವರಿತು ಮಳೆ ಬಂದ ಕೂಡಲೇ ರೈತರು ತಡ ಮಾಡದೆ ಬೀಜಗಳ ಬಿತ್ತನೆಗೆ ಮುಂದಾಗಬೇಕು. ಸರ್ಕಾರ ನೀಡುವ ಸೌಲಭ್ಯಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗನಾಥ್ ಮಾತನಾಡಿ ಇಲಾಖೆಯು ಒಟ್ಟು 1524 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಂಡಿದ್ದು ರೈತರು ಪಹಣಿ, ಆಧಾರ್ ಕಾರ್ಡ್‍ಗಳನ್ನು ಸಲ್ಲಿಸಿ ಬೀಜದ ಕಿಟ್‍ಗಳನ್ನು ಪಡೆಯಬಹುದು ಎಂದರು.ಕೃಷಿಕ ಸಮಾಜದ ಮಂಜುನಾಥ್ ಸೇರಿದಂತೆ ಕೃಷಿ ಇಲಾಖೆಯ ಸಿಬ್ಬಂಧಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ