ತಿಪಟೂರು :
ರೈತರ ವಿವಿಧ ಬೇಡಿಕೆಗಳೊಂದಿಗೆ ಜುಲೈ 22 ರಂದು ನಗರದ ತಾಲ್ಲೂಕು ಕಛೇರಿ ಮುಂದೆ ಚಳುವಳಿ ಮಾಡಲು ಅನುಮತಿ ನಿರಾಕರಿಸಿರುವ ನಗರ ಠಾಣೆಯ ಪೋಲೀಸರ ಕ್ರಮ ಖಂಡಿಸಿರುವ ರಾಷ್ಟ್ರೀಯ ಕಿಸಾನ್ ಸಂಘ, ಜುಲೈ 29 ರಂದು ಮತ್ತೆ ರೈತ ಚಳುವಳಿ ಹಮ್ಮಿಕೊಳ್ಳಲು ನಿರ್ಧರಿಸಿದೆ.
ಸೋಮವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ, ರೈತರ ವಿವಿಧ ಬೇಡಿಕೆಗಳಾದ ಸದಾಶಿವ ವರದಿ ಅನುಷ್ಠಾನ, ತಾಲ್ಲೂಕಿನ 26 ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿರುವ ಅವ್ಯವಹಾರ, ತಾಲ್ಲೂಕಿನ ಅರಳಗುಪ್ಪೆ ಗ್ರಾಮದಲ್ಲಿರುವ ಐತಿಹಾಸಿಕ ಚನ್ನಕೇಶವ ಸ್ವಾಮಿ ದೇವಾಲಯದ ಜೀರ್ಣೋದ್ದಾರ, ಹಾಗೂ ಅರಳಗುಪ್ಪೆ ಗ್ರಾಮದಲ್ಲಿ ಹಾದು ಹೋಗುವ ಚಿಕ್ಕಮಗಳೂರು-ಯಶವಂತಪುರ ರೈಲು ನಿಲುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ತಾಲ್ಲೂಕು ಕಛೇರಿ ಮುಂಭಾಗ ರೈತ ಚಳುವಳಿ ನಡೆಸಲು ತೀರ್ಮಾನಿಸಿ, ಇದಕ್ಕೆ ಸಂಬಂಧಿಸಿದಂತೆ ನಗರಠಾಣೆಯ ಪೋಲೀಸರಿಂದ ಅನುಮತಿ ಕೇಳಿದ್ದೆವು.
ಆದರೆ ರೈತ ಮುಖಂಡರ ಮನವಿ ತಿರಸ್ಕರಿಸಿದ ನಗರಠಾಣೆಯ ಪೋಲೀಸರು ರೈತ ಚಳುವಳಿಯನ್ನು ಹತ್ತಿಕ್ಕುವ ಪ್ರಯತ್ನವಾಗಿ ಅನುಮತಿ ನಿರಾಕರಿಸಿದ್ದಾರೆ ಎಂದು ಆರೋಪಿಸಿರುವ ಕಿಸಾನ್ ಸಂಘಟನೆ, ಪೋಲೀಸರ ಈ ಕ್ರಮವನ್ನು ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿ. ಏನೇ ಆದರೂ ಪುನಃ ಜುಲೈ 22 ರಂದು ನಾವು ತಾಲ್ಲೂಕು ಕಛೆರಿಯ ಮುಂದೆ ಚಳುವಳಿ ನಡೆಸಿಯೇ ಸಿದ್ದ ಎಂದು ಸ್ಪಷ್ಟಪಡಿಸಿದರು,
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ, ಮಹಿಳಾ ಅಧ್ಯಕ್ಷೆ ಮಂಜುಳಾ ಡಾ. ಸ್ವಾಮಿ, ಜಿಲ್ಲಾ ಸಂಚಾಲಕಿ ಚಂದ್ರಕಲಾ, ಕಾರ್ಯಾಧ್ಯಕ್ಷ ಡಾ. ಮಲ್ಲಿಕಾರ್ಜುನ. ತಿಪಟೂರು ತಾಲ್ಲೂಕು ಕಾರ್ಯಾಧ್ಯಕ್ಷ ರಾಜೇಖರ್, ತಾ. ಅಧ್ಯಕ್ಷ ನೀಲಕಂಠಪ್ಪ, ಜಿಲ್ಲಾ ಉಪಾಧ್ಯಕ್ಷೆ ಶಾರಧಾ ನಾಯ್ಕ, ಹೋಬಳಿ ಅಧ್ಯಕ್ಷ ಈಶ್ವರಯ್ಯ, ಮಂಜುನಾಥ್, ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
