ಡಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ..!

ಬೆಂಗಳೂರು

     ಸುಂಕ ವಸೂಲಾತಿ ಕೇಂದ್ರದಲ್ಲಿನ ಇಕ್ಕಟ್ಟು ವಾಹನ ದಟ್ಟಣೆ ಅಡಚಣೆ ನಿವಾರಣೆ ಸೇರಿ ಹಲವು ಸಮಸ್ಯೆಗಳಿಗೆ ಅಂತ್ಯವಾಡಲು ಟೋಲ್‌ಗಳಲ್ಲಿ ಫಾಸ್ಟ್ ಟ್ಯಾಗ್ ಅನ್ನು ಬರುವ ಡಿ. 1 ರಿಂದ ಹಳೆಯ ಮತ್ತು ಹೊಸ ಎಲ್ಲಾ ವಾಹನಗಳಿಗೆ ಕಡ್ಡಾಯಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.

     ಫಾಸ್ಟ್ ಟ್ಯಾಗ್‌ಅನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಮುಖ ನೇತೃತ್ವ ವಹಿಸಿದ್ದುಇದನ್ನು ಅಖಿಲ ಭಾರತ ಮಟ್ಟದಲ್ಲಿ ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ವ್ಯವಸ್ಥಾಪಕ ಶ್ರೀಧರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

     ಫಾಸ್ಟ್ ಟ್ಯಾಗ್ ವಿವಿಧ ಬ್ಯಾಂಕ್‌ಗಳು ಮತ್ತು ಐಎಚ್‌ಎಂಪಿಎಲ್, ಎನ್‌ಎಚ್‌ಎಐ ಸ್ಥಾಪಿಸಿದ 28,500 ಮಾರಾಟ ಕೇಂದ್ರಗಳಲ್ಲಿ ಖರೀದಿಸಬಹುದು. ರಾಷ್ಟ್ರೀಯ ಹೆದ್ದಾರಿಗಳು, ಆರ್‌ಟಿಒ, ಹಂಚಿಕೆಯ ಸೇವಾಕೇಂದ್ರಗಳು, ಸಾರಿಗೆ ಕೇಂದ್ರಗಳು, 22 ವಿವಿಧ ಬ್ಯಾಂಕ್ ಶಾಖೆಗಳು, ಆಯ್ದ ಪೆಟ್ರೋಲ್ ಪಂಪ್ ಸೇರಿದಂತೆ, ಎಲ್ಲಾ ಸುಂಕ ವಸೂಲಾತಿ ಕೇಂದ್ರಗಳಿಂದಲೂ ಖರೀದಿಸಬಹುದಾಗಿದೆ ಎಂದರು.

     ಮಾರಾಟದ ಸ್ಥಳವನ್ನು ಗುರುತಿಸಲು ಪ್ಲೇ ಸ್ಟೋರ್‌ನಲ್ಲಿ ನನ್ನ ಫಾಸ್ಟ್ ಟ್ಯಾಗ್ ಆಪ್ ಅನ್ನು ಡೌನ್ ಲೋಡ್ ಮಾಡಬಹುದು. ವೆಬ್ ಸೈಟ್‌ಗೆ ಭೇಟಿನೀಡಿ ಅಥವಾ ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿ ಸಂಖ್ಯೆ 1033ಗೆ ಕರೆಮಾಡಿ, ಹತ್ತಿರದ ಮಾರಾಟ ಸ್ಥಳವನ್ನು ತಿಳಿದುಕೊಳ್ಳಬಹುದಾಗಿದೆ.

     ಕ್ರೆಡಿಟ್, ಡೆಬಿಟ್ ಕಾರ್ಡ್, ಯುಪಿಐ ಮತ್ತು ಇತರ ಜನಪ್ರಿಯ ವಿಧಾನಗಳಿಂದ ಪುನರ್ ಭರ್ತಿ ಮಾಡಬಹುದಾಗಿದೆ. ಕ್ಯಾಷ್ ಲೈನ್ ಆಗಿ ಕೇವಲ ಒಂದು ಲೈನ್ ಅನ್ನು ಮಾತ್ರ ಅನುಮತಿಸಲಾಗುವುದು. ಸರ್ಕಾರಿ ಗೆಜೆಟ್ ಅಧಿಸೂಚನೆ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾದಲ್ಲಿ ಯಾವುದೇ ವಾಹನವು ಫಾಸ್ಟ್ ಟ್ಯಾಗ್ ಇಲ್ಲದೆ, ಫಾಸ್ಟ್ ಟ್ಯಾಗ್ ಲೇನ್ ಪ್ರವೇಶಿಸುತ್ತಿದ್ದರೆ, ಅದಕ್ಕೆ ಅನ್ವಯವಾಗುವ ಶುಲ್ಕವನ್ನು ದ್ವಿಗುಣವಾಗಿ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.

      ಕರ್ನಾಟಕದಲ್ಲಿ ಒಟ್ಟು 90ಕ್ಕೂ ಹೆಚ್ಚು ಟೋಲ್ ಕೇಂದ್ರಗಳಿವೆ. ಫಾಸ್ಟ್ ಟ್ಯಾಗ್ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವುದು ಅತ್ಯವಶ್ಯಕವಾಗಿದೆ. ಇದರಿಂದ ಜನಸಾಮಾನ್ಯರ ಬದುಕಿಗೆ ಪೂರಕವಾದ ವ್ಯವಸ್ಥೆ ಜಾರಿಯಾಗಲಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap