ಬೆಂಗಳೂರು
ಮುಂದೆ ಮದುವೆಯಾಗುವ ನಿನಗೆ ಎಲ್ಲವೂ ಗೊತ್ತಿರಬೇಕು ಎಂದು ನಂಬಿಸಿ 16 ವರ್ಷದ ಅಪ್ರಾಪ್ತ ಮಗಳನ್ನು ಪಾಪಿ ತಂದೆಯೊಬ್ಬ ಸುಮಾರು ಎರಡು ವರ್ಷಗಳ ಕಾಲ ಅತ್ಯಾಚಾರ ನಡೆಸಿ ಪರಾರಿಯಾಗಿರುವ ಹೀನ ಕೃತ್ಯ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮಗಳ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿರುವ ಆಟೋ ಚಾಲಕ ಸಯ್ಯದ್ಗಾಗಿ ಬನಶಂಕರಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಪತ್ನಿ ಕೆಲಸಕ್ಕೆ ಹೋದ ವೇಳೆಯಲ್ಲಿ ಮನೆಗೆ ಬರುತ್ತಿದ್ದ ಸಯ್ಯದ್ ನೀನು ಮುಂದೆ ಮದುವೆಯಾಗುವವಳು, ನಿನಗೆ ಇದೆಲ್ಲ ಗೊತ್ತಿರಬೇಕು ಬಾ’ ಅತ್ಯಾಚಾರ ನಡೆಸಿ ಯಾರಿಗಾದರೂ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಕಳೆದ ಎರಡು ವರ್ಷಗಳಿಂದಲೂ ನಿರಂತರ ಅತ್ಯಾಚಾರವೆಸಗಿದ್ದಾನೆ.
ಇತ್ತೀಚಿನ ದಿನಗಳಲ್ಲಿ ತಂದೆಯ ಕ್ರೌರ್ಯ ಹೆಚ್ಚಾಗಿದ್ದರಿಂದ ಸಂತ್ರಸ್ತ ಬಾಲಕಿ ತಾಯಿ ಬಳಿ ವಿಷಯ ತಿಳಿಸಿ ಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇನೆ ತಂದೆ ಬೆದರಿಸಿರುವುದನ್ನು ಹೇಳಿ ಅಳಲು ತೋಡಿಕೊಂಡಿದ್ದಾಳೆ.
ಪತಿಯನ್ನು ಪರೀಕ್ಷೆ ನಡೆಸಲು ತಾಯಿ ಮೊದಲು ಮಗಳನ್ನು ಮನೆಗೆ ಕಳುಹಿಸಿ ಮನೆಗೆ ಬರಲು ಕೆಲಕಾಲ ತಡ ಮಾಡುತ್ತಾಳೆ. ಮಗಳೊಬ್ಬಳೇ ಮನೆಯಲ್ಲಿರುವುದನ್ನು ನೋಡಿದ ಆರೋಪಿ ಸಯ್ಯದ್ ಮತ್ತೆ ಮಗಳ ಮೇಲೆ ಅತ್ಯಾಚಾರಕ್ಕೆ ಮುಂದಾಗಿರುವುದನ್ನು ಕಣ್ಣಾರೆ ಕಂಡ ಪತ್ನಿ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಮಗಳನ್ನು ಕರೆದುಕೊಂಡು ಹೋಗಿ ವಿರುದ್ಧ ದೂರು ದಾಖಲಿಸಿದ್ದಾರೆ. ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಐಪಿಸಿ ಸೆಕ್ಷನ್ 506, 376, 511 ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ . ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಸಯ್ಯದ್ ಪರಾರಿಯಾಗಿದ್ದು ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಆಟೋ ಚಾಲಕ ಸಯ್ಯದ್ ವಿರುದ್ಧ ಕಳೆದ 15 ದಿನಗಳ ಹಿಂದೆ ಆರ್ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ದೂರನ್ನು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ಸದ್ಯ ಪ್ರಕರಣದ ತನಿಖೆಯನ್ನು ಬನಶಂಕರಿ ಪೊಲೀಸರು ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








