ತಂದೆಯಿಂದಲೇ ಮೂರು ವರ್ಷದ ಮಗುವಿನ ಕೊಲೆ

ಜಗಳೂರು:

     ತಂದೆಯೇ ತನ್ನ ಮೂರು ವರ್ಷದ ಮಗುವನ್ನು ಕೊಂದು ಜಮೀನಿನಲ್ಲಿ ಹೂತಿಟ್ಟಿರುವ ಅಮಾನವೀಯ ಘಟನೆ ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಸಿರಿಶಾ(3) ಮೃತ ಮಗು, ಗುತ್ತಿದುರ್ಗ ನಿಂಗಪ್ಪ ಕೊಲೆಗೈದ ತಂದೆ, ಈತನು ಇಬ್ಬರನ್ನು ವಿವಾಹವಾಗಿದ್ದನು, ಗೊಲ್ಲರಹಳ್ಳಿಯ ಮೊದಲ ಹೆಂಡತಿಗೆ ಇಬ್ಬರು ಗಂಡು ಮಕ್ಕಳು, ಗುತ್ತಿದುರ್ಗ ಗ್ರಾಮದ ಶಶಿಕಲಾಳನ್ನು ಎರಡನೇ ವಿವಾಹವಾಗಿದ್ದನು, ಇವಳಿಗೆ ಒಂದು ಹೆಣ್ಣು ಮಗುವಿತ್ತು. ಆದರೆ ಕಳೆದ ಎರಡು ತಿಂಗಳ ಹಿಂದೆ ಎರಡನೇ ಹೆಂಡತಿಯ ಹೆಣ್ಣು ಮಗು ಸಿರಿಶಾಳನ್ನು ತನ್ನ ಊರಿಗೆ ಕರೆದುಕೊಂಡು ಬಂದು ಕೊಲೆ ಮಾಡಿ ಹೂತಿಟ್ಟಿರುವುದು ಸೋಮವಾರ ಪತ್ತೆಯಾಗಿದೆ.

    ವಿವರ: ಶಶಿಕಲಾ ಮತ್ತು ನಿಂಗಪ್ಪ ಇಬ್ಬರು ಕಳೆದ ಎಂಟುತ್ತು ವರ್ಷಗಳಿಂದಲೂ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು, ಸಂಬಂಧದಲ್ಲಿ ಸಹೋದರಿಯಾಗಬೇಕು, ಆದ್ದರಿಂದ ಮನೆಯಲ್ಲಿ ವಿರೋಧ ಮಾಡುತ್ತಾರೆಂದು ತಿಳಿದು ಗೊಲ್ಲರಹಳ್ಳಿಯ ಶಶಿಕಲಾ ಎಂಬುವರನ್ನು ವಿವಾಹವಾಗಿದ್ದಾನೆ, ಇದರ ನಡುವೆಯೂ ಸಂಪರ್ಕದಲ್ಲಿದ್ದ ಶಶಿಕಲಾಳನ್ನು ಎರಡು ವರ್ಷಗಳ ಹಿಂದೆ ಮನೆಯಲ್ಲಿ ತಿಳಿಯದೇ ವಿವಾಹವಾಗಿ ಚಿತ್ರದುರ್ಗದಲ್ಲಿ ವಾಸವಿದ್ದರು.

    ಎರಡನೇ ಹೆಂಡತಿ ಗರ್ಭೀಣಿ ಇರುವುದು ತಿಳಿದ ಕೂಡಲೇ ನಿಂಗಪ್ಪ ಮಗು ತೆಗೆಸುವಂತೆ ಗಲಾಟೆ ಮಾಡಿದ್ದಾನೆ ಆದರೆ ಶಶಿಕಲಾ ವಿರೋಧಿಸಿದ್ದಾಳೆ, ಈ ವಿಚಾರವಾಗಿ ಇಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ. ಕೊನೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆಗೋ, ಇಗೋ ಓಡಾಡಿಕೊಂಡಿದ್ದ ನಿಂಗಪ್ಪ ಎರಡು ತಿಂಗಳ ಹಿಂದೆ ಚಿತ್ರದುರ್ಗಕ್ಕೆ ತೆರಳಿ ತನ್ನ ಮಗುವನ್ನು ಕರೆದುಕೊಂಡು ಗುತ್ತಿದುರ್ಗಕ್ಕೆ ಬಂದಿದ್ದಾನೆ. ಎರಡು ದಿನಗಳ ನಂತರ ನನ್ನ ಮಗು ಕರೆದುಕೊಂಡು ಬರುವಂತೆ ಗೋಗರೆದಿದ್ದಾಳೆ ಆದರೆ ಬೈಕಿನಲ್ಲಿ ಹೋಗುವ ವೇಳೆ ಗಾಳಿ ಹೊಡೆತಕ್ಕೆ ಶೀತ ಹೆಚ್ಚಾಗಿ ಮೃತಪಟ್ಟಿದ್ದಾಳೆ ನನ್ನ ಕ್ಷಮಿಸು ಎಂದಿದ್ದಾನೆ.

    ತಕ್ಷಣ ತಮ್ಮ ಕುಟುಂಬದೊಂದಿಗೆ ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ನಂತರವೇ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಗುತ್ತಿದುರ್ಗದ ತಮ್ಮ ಜಮೀನಿನಲ್ಲಿ ಹೂತಿಟ್ಟದ ಜಾಗವನ್ನು ಪೊಲೀಸರು ಮಹಜರ್ ಮಾಡಿಕೊಂಡು ಹೋಗಿದ್ದು ಶವಪರೀಕ್ಷೆ ನಡೆಸಿ ಮುಂದಿನ ತನಿಖೆ ಮಾಡಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link