ಹುಳಿಯಾರು:
ಹುಳಿಯಾರು –ಅಣೆಕಟ್ಟೆ ರಸ್ತೆಯ ಇಕ್ಕೆಲಗಳಿಗೆ ಹುಳಿಯಾರು ಭಾಗದಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯೂ ತೀರಾ ಕಳಪೆಯಾಗಿದ್ದು ಪಿಡ್ಲ್ಯೂಡಿ ಎಂಜಿನಿಯರ್ ಖುದ್ದು ವೀಕ್ಷಿಸಿ ಗುಣಮಟ್ಟದ ಕಾಮಗಾರಿಗೆ ಸೂಚಿಸುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ಹುಳಿಯಾರು-ಅಣೆಕಟ್ಟೆ ರಸ್ತೆಯ ಅಭಿವೃದ್ಧಿ ಕಾಮಾಗಾರಿ ಆರಂಭವಾಗಿದ್ದು ರಸ್ತೆ ಡಾಂಬರೀಕರಣದ ಮೊದಲು ರಸ್ತೆ ಇಕ್ಕೆಲಗಳಲ್ಲಿ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಈ ಭಾಗದಲ್ಲಿ ಬರುವ ಹಳ್ಳಿಗಳಲ್ಲಿ ಚರಂಡಿ ಕಾಮಗಾರಿ ಮುಗಿಸಿ ಹುಳಿಯಾರು ಪಟ್ಟಣದಲ್ಲಿ ಚರಂಡಿ ಕಾಮಗಾರಿ ಆರಂಭಿಸಿದ್ದಾರೆ.
ಹುಳಿಯಾರು ಪೊಲೀಸ್ ಸ್ಟೇಷನ್ ಸರ್ಕಲ್‍ನಿಂದ ಟಿ.ಎಸ್.ಹಳ್ಳಿಯವರೆವಿಗೂ ಜೆಸಿಬಿಯಲ್ಲಿ ಚಾನಲ್ ತೆಗೆದು ಸಿಸಿ ಚರಂಡಿ ಮಾಡಲಾಗು ತ್ತಿದೆ. ಆದರೆ ಕಾಮಗಾರಿಯೂ ತೀರಾ ಕಳಪೆಯಾಗಿದ್ದು ಗುಣಮಟ್ಟದ ಸಿಮೆಂಟ್, ಎಂಸ್ಯಾಂಡ್ ಬಳಸುತ್ತಿಲ್ಲ. ಅಲ್ಲದೆ ಮಿಕ್ಸಿಂಗ್ ಕೂಡ ಸರಿಯಾಗಿ ಮಾಡದೆ ಕಾಟಚಾರಕ್ಕೆಂಬತೆ ಮಾಡುತ್ತಿದ್ದಾರೆ.
ಮುಖ್ಯವಾಗಿ ಹತ್ತದಿನೈದು ದಿನ ಕ್ಯೂರಿಂಗ್ ಮಾಡಬೇಕೆಂದಿದ್ದರೂ ಸಹ ಮಾಡದೆ ಒಚಿದೆರಡು ದಿನ ಕ್ಯೂರಿಂಗ್ ಮಾಡಿ ಸುಮ್ಮನಾಗುತ್ತಿದ್ದಾರೆ. ಪರಿಣಾಮ ಅಲ್ಲಲ್ಲಿ ಚರಂಡಿ ಕುಸಿದಿದ್ದರೆ ಕೆಲವೆಡೆ ಬಿರುಕು ಬಿಟ್ಟಿದೆ, ಇನ್ನೂ ಕೆಲವೆಡೆ ಕಿತ್ತೇ ಹೋಗಿದೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.
ಕೋಟ್ಯಾಂತರ ರೂ. ವೆಚ್ಚದ ಕಾಮಗಾರಿ ನಡೆಯುತ್ತಿದ್ದರೂ ಇದೂವರೆವಿಗೂ ಗುತ್ತಿಗೆದಾರರಾಗಲಿ, ಸಂಬಂಧಪಟ್ಟ ಎಂಜಿನಿಯರ್ ಅವರಾಗಲಿ, ಜನಪ್ರತಿನಿಧಿಯಾಗಲೀ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿಲ್ಲ. ನಿವಾಸಿಗಳು ಗುಣಮಟ್ಟ ಮತ್ತು ಕ್ಯೂರಿಂಗ್ ಬಗ್ಗೆ ಪ್ರಶ್ನಿಸಿದರೆ ಪಿಡ್ಲ್ಯೂಡಿ ಇಲಾಖೆಗೆ ಕೇಳಿ ಎನ್ನುತ್ತಾರಂತೆ.
ಇನ್ನಾದರೂ ಎಂಜಿನಿಯರ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟದ ಕಾಮಗಾರಿ ಮಾಡುವಂತೆಯೂ, ಹತ್ತದಿನೈದು ದಿನಗಳ ಕಾಲ ಕ್ಯೂರಿಂಗ್ ಮಾಡುವಂತೆ ಸೂಚಿಸುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.