ಮಿಡಿಗೇಶಿ
ಕಳೆದ ನಾಲ್ಕು ದಿನಗಳ ಹಿಂದೆಯಷ್ಠೇ ರೋಹಿಣಿ ಮಳೆಯು ಗುಡುಗು, ಮಿಂಚು, ಗಾಳಿ, ಆಲಿಕಲ್ಲು ಸಮೇತ ಸುಂಟರಗಾಳಿ ಜೊತೆ-ಜೊತೆಯಲ್ಲಿ ಮಳೆ ಬಂದಿದ್ದು ಆಂದ್ರರಾಜ್ಯದ ಹೊಟ್ಟೆ ಬೆಟ್ಟ ಗ್ರಾಮದ ಬೆಟ್ಟಗುಡ್ಡಗಳಿಂದ ಯಥೇಚ್ಚವಾದ ಮಳೆಯ ನೀರು ಹರಿದು ಬಂದಿದ್ದು ಸದರಿ ದೊಡ್ಡಹಳ್ಳದಲ್ಲಿ ಬರುವ ನೀರು (ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಗೆ ಸೇರಿದ ಲಕ್ಷ್ಮೀಪುರ ಗ್ರಾಮಕ್ಕೆ ಹಾದುಹೋಗುವ ರಸ್ತೆಗೆ ಸೇರಿರುತ್ತದೆ.) ಸದರಿ ದೊಡ್ಡಹಳ್ಳದಿಂದ ಹರಿದು ಹೋಗುವ ಮಳೆ ನೀರು ಬಿದರಕೆರೆಗೆ ನೇರವಾಗಿ ನೀರು ಸೇರುತ್ತದೆ.
ಸದರಿ ದೊಡ್ಡಹಳ್ಳಕ್ಕೆ ಇತ್ತೀಚಿನ ಕೆಲವು ಮೂರ್ನಾಲ್ಕು ತಿಂಗಳುಗಳ ಹಿಂದೆಯಷ್ಠೇ ಜಲಾನಯನ ಇಲಾಖೆವತಿಯಿಂದ ಚೆಕ್ ಡ್ಯಾಂ ನಿರ್ಮಿಸಲು ಟೆಂಡರ್ ಮಾಡಿದ್ದು ತಿಪಟೂರು ಮೂಲದ ಗುತ್ತಿಗೆದಾರರೊಬ್ಬರು ಏಳು ಲಕ್ಷ ರೂಗಳ ಟೆಂಡರ್‍ಗೆ ಕಾಮಗಾರಿ ಪಡೆದಿದ್ದು ಸರಿಯಷ್ಠೇ, ಸದರಿ ಚೆಕ್ ಡ್ಯಾಂ ನಿರ್ಮಿಸುವಾಗ ಚೆಕ್ ಡ್ಯಾಂನ ಎರಡು ಕೊನೆಯ ಬದಿಗಳಲ್ಲಿ ಕಲ್ಲು ಚಪ್ಪಡಿಳಿಂದ ಪರ್ಸ್ ಬಂದ್‍ಗಳನ್ನು ನಿರ್ಮಿಸದೆ ಇರುವುದರಿಂದ ಮೇಲಿನಿಂದ ರಭಸವಾಗಿ ಬಂದ ಮಳೆಯ ನೀರಿನಿಂದ ಚೆಕ್ ಡ್ಯಾಂ ನ ಎರಡು ಬದಿಗಳು ಹರಿದು ತುಂಡಾಗಿದ್ದು ನೀರು ಪೋಲಾಗುತ್ತಿದ್ದು ಸದರಿ ಜಲಾನಯನ ಇಲಾಖೆಯ ಕಾಮಗಾರಿ ಪಡೆದ ಗುತ್ತಿಗೆದಾರನಿಗೆ ಈ ಭಾಗದ ರೈತಾಪಿ ವರ್ಗದವರು ಛೀಮಾರಿ ಹಾಕಲು ಸಕಲ ಸಿದ್ದರಾಗಿರುತ್ತರಾದ್ದರಿಂದ ಸಂಭಂದಿಸಿದ ಜಲಾನಯನ ಇಲಾಖೆಯವರು ಈಗ ಮಳೆಗಾಲದ ದಿನಗಳಾದ್ದರಿಂದ ತ್ವರಿತವಾಗಿ ಹರಿದು ಹೋದ ಚೆಕ್ ಡ್ಯಾಂ ಸರಿಪಡಿಸುವಂತೆ ಈ ಭಾಗದ ರೈತರ ಆಗ್ರಹ.