ತಿಪಟೂರು 

ನಗರದಲ್ಲಿ ಅನೇಕ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು ಕೆಲವು ಕಡೆ ಕಳಪೆ ಕಾಮಗಾರಿಯ ಬಗ್ಗೆ ಸಮಾಧಾನ ಪ್ರಾರಂಭವಾಗಿದ್ದು ನಗರಸಭೆಯ ಅಧಿಕಾರಿಗಳು ಬಿಲ್‍ಮಾಡುವುದನ್ನು ಬಿಟ್ಟು ಯಾವುದೇ ಕಾಮಗಾರಿಯ ಸ್ಥಳ ವೀಕ್ಷಣೆಯನ್ನು ಮಾಡದೆ ಕಾಲಕಳೆಯುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ನಗರದ ಬಹುಪಾಲು ರಸ್ತೆಗಳನ್ನು ಸಿ.ಸಿ.ರಸ್ತೆ ಮಾಡಿದ್ದಾರೆ ಮತ್ತು ವಿದ್ಯಾನಗರ, ಸಾರ್ವಜನಿಕ ಆಸ್ಪತ್ರೆ ಪಕ್ಕದ ರಸ್ತೆಗೆ ಡಾಂಬಾರನ್ನು ಹಾಕಲಾಗಿದೆ. ಆದರೆ ಇಲ್ಲಿ ಮಾಡಿರುವ ರಸ್ತೆಯ ಪಕ್ಕಕ್ಕೆ ಮಣ್ಣನ್ನು ಹಾಕದೇ ಹಾಗೆಯೇ ಬಿಟ್ಟಿದ್ದು ನಗರಸಭೆಯ ಇಂಜಿನಿಯರ್‍ಗಳು ನಮಗೂ ಇದಕ್ಕೆ ಸಂಬಂಧವೇ ಇಲ್ಲದಂತೆ ಕಛೇರಿಯನ್ನು ಬಿಟ್ಟು ಕದಲುವ ಹಾಗೆ ಕಾಣುತ್ತಿಲ್ಲ. ಇಲ್ಲಾ ಈ ರಸ್ತೆಯಲ್ಲಿ ಅಫಘಾತವಾದ ನಂತರ ಹಾಕಿದರಾಯಿತೇನೊ ಎನ್ನುವಂತಿದ್ದರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
