ಕೊರೋನಾ ವಿರುದ್ಧ ಹೋರಾಟ ತಮ್ಮೆಲ್ಲರ ಜವಾಬ್ದಾರಿ : ಕುಮಾರಸ್ವಾಮಿ

ಬೆಂಗಳೂರು

     ಕೊರೋನಾ ವಿರುದ್ಧದ ಹೋರಾಟ ತಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಕೇವಲ ರಾಜಕೀಯ ಟೀಕೆಗೆ ಮಾತ್ರ ಸರ್ವಪಕ್ಷ ಸಭೆ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ‌ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಲಾಕ್‌ಡೌನ್ ಘೋಷಿಸಿರುವುದು ಒಂದು ಪರಿಹಾರ ಮಾತ್ರ. ಖಾಸಗಿ, ಸರ್ಕಾರಿ ಕಟ್ಟಡಗಳಲ್ಲಿ ಕ್ವಾರಟೈಂನ್ ನಿರ್ಮಿಸಬೇಕೆಂದು ಜೆಡಿಎಸ್ ಆರಂಭದಲ್ಲಿಯೇ ಸಲಹೆ ನೀಡಿತ್ತು. ಸರ್ಕಾರ ಆರಂಭದಲ್ಲಿ ಉಡಾಫೆ ಮಾಡಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಅಗತ್ಯ ವೈದ್ಯಕೀಯ ಉಪಕರಣಗಳೇ ಇಲ್ಲ. ಅಂದಮೇಲೆ ವೈದ್ಯಕೀಯ ಪರೀಕ್ಷೆ ಮಾಡುವುದಾದರೂ ಹೇಗೆ?. ಚೀನಾದಿಂದ ಒಂದು ಲಕ್ಷ ಕಿಟ್ ತರಿಸುವುದಾಗಿ ಸರ್ಕಾರ ಹೇಳಿದಂತೆ ನಡೆದುಕೊಂಡಿಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ದೂರಿದರು.
ಒಂದು ಸಾವಿರ ವೆಂಟಿಲೇಟರ್ ಅಳವಡಿಸಲಾಗುವುದು ಎಂದು ಹೇಳಿ 15 ದಿನ ಆಯ್ತು. ಆದರೆ ಇನ್ನೂ ವೆಂಟಿಲೇಟರ್ ಗಳನ್ನ ತರಿಸಿಲ್ಲ, ಇಷ್ಟೊಂದು ತಡ ಏಕೆ ಎಂದು ಪ್ರಶ್ನಿಸಿದರು.

     ಆರಂಭದಲ್ಲಿ ಆಸಕ್ತಿವಹಿಸಿ ವಿದೇಶದಲ್ಲಿದ್ದವರನ್ನು ಕರೆಸಿಕೊಂಡ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುವಲ್ಲಿ ಎಡವಿದೆ. ಗ್ರಾಮಗಳ ಮಟ್ಟದಲ್ಲಿ ಸಂಘಟನೆಗಳ ಸಹಾಯ ಪಡೆದು ಪಿಡಿಒಗಳು ಮೂಲಕ ಜನರ ಆರೋಗ್ಯದ ಪರಿಸ್ಥಿತಿಯ ವರದಿ ತರಿಸಿಕೊಳ್ಳಬೇಕು. ರಸ್ತೆ ಕೆಲಸ, ಬ್ರಿಡ್ಜ್, ಕಟ್ಟಡ ಕಾಮಗಾರಿ ಕೆಲಸ ಇನ್ನೂ ಆರು ತಿಂಗಳು ಮುಂದಕ್ಕೆ ಹಾಕಿ. ಕೊರೋನಾ ನಿಯಂತ್ರಣಕ್ಕೆ ಹೆಚ್ಚಿನ ಹಣ ಬಳಸಿಕೊಳ್ಳಿ. ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ವ್ಯವಸ್ಥೆ ಮಾಡಬೇಕು ಎಂದರು.

    ಓಲಾ ಊಬರ್ ಡ್ರೈವರ್‌ ‌ಗಳು, ಗಾರ್ಮೆಂಟ್ಸ್ ಮಹಿಳೆಯರ ಪರಿಸ್ಥಿತಿಯೂ ಚಿಂತಾಜನಕವಾಗಿದೆ.ಸುಮಾರು 70 ಸಾವಿರದಿಂದ 80ಸಾವಿರ ಜನರಿಗೆ ಸರ್ಕಾರದಿಂದ ಊಟ ಕೊಡಲಾಗುತ್ತಿದೆ ಎಂಬ ಮಾಹಿತಿ ಇದೆ. ಆದರೂ ಬೆಂಗಳೂರಿನಲ್ಲಿ ನಾಲ್ಕೈದು ಲಕ್ಷ ಜನರಿಗೆ ಊಟದ ಅವಶ್ಯಕತೆ ಇದೆ. ಅಗತ್ಯ ಇರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಕೆ ಆರ್ ಮಾರ್ಕೆಟ್ ಶಿಫ್ಟ್ ಮಾಡಿದ್ದುವ ಸಾಕಷ್ಟು ಗೊಂದಲ‌ಮೂಡಿಸಿದೆ ಎಂದರು.

    ಬೆಂಗಳೂರಿನಲ್ಲಿ ಎಂಟು ವಲಯಗಳಿದ್ದು ಹೊರವಲಯದಲ್ಲೆ ತರಕಾರಿ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು. ಹಾಪ್‌ಕಾಮ್ಸ್‌ನಿಂದ, ಬೇರೆ ಇಲಾಖೆಯಿಂದಲೇ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು. ವಾರ್ಡ್‌ಗಳ ಮಟ್ಟದಲ್ಲಿ ಕೆಎಂಎಫ್ ಡೈರಿಗಳಿವೆ, ಅವುಗಳ ಮೂಲಕ ಅಗತ್ಯ ವಸ್ತುಗಳ ಪೂರೈಕೆ ಮಾಡಬೇಕು. ಇದರಿಂದ ಜನ ಮಾರುಕಟ್ಟೆಗಳಿಗೆ ಬರುವುದಿಲ್ಲ. ಜನಸಂದಣಿ ತಡೆಯಲು ಸಾಧ್ಯವಾಗುತ್ತದೆ ಎಂದು ಕುಮಾರಸ್ವಾಮಿ‌ ಸರ್ಕಾರಕ್ಕೆ ಸಲಹೆ ನೀಡಿದರು.

    ರಾಮನಗರ ಜಿಲ್ಲೆಗೆ ತಾವು ಹತ್ತು ಸಾವಿರ ಮಾಸ್ಕ್‌ಗಳನ್ನು ವಿತರಿಸುತ್ತಿದ್ದು, ತಾವು ರಾಜಕೀಯ ಟೀಕೆ ಮಾಡುವುದಿಲ್ಲ, ಸರ್ಕಾರಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುತ್ತೇವೆ. ವೈದ್ಯರ ಪರಿಸ್ಥಿತಿಯನ್ನು ನಾವು ಗಮನದಲ್ಲಿಟ್ಟುಕೊಂಡು ಸರ್ಕಾರದಿಂದ ಅವರಿಗೆ ಎಲ್ಲಾ ಸವಲತ್ತುಗಳನ್ನು ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದರು.ವಿದೇಶದಿಂದ ಬಂದವರ ಸಮರ್ಪಕ ಆರೋಗ್ಯ ತಪಾಸಣೆ , ಮಾಸ್ಕ್ ವಿತರಣೆ, ಪೊಲೀಸ್ ಪೌರಕಾರ್ಮಿಕರ ವಿಮೆಗೆ ಸಿದ್ದರಾಮಯ್ಯ ಒತ್ತಾಯ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap