ಬೆಂಗಳೂರು:
ಸಿನಿ ರಸಿಕರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದ್ದು, ಲಾಕ್‌ಡೌನ್‌ನಿಂದ ಬಂದ್‌ಗಿರುವ ಚಿತ್ರಮಂದಿಗಳನ್ನು ರೀ ಓಪನ್ ಆಗಲಿವೆ ಎಂದು ಹೇಳಲಾಗ್ತಿದೆ.
ಲಾಕ್‌ಡೌನ್ ಕಾರಣದಿಂದ ಚಿತ್ರೀಕರಣ ಹಾಗೂ ಸಿನಿಮಾ ಕಾರ್ಯಕ್ರಮಗಳು ಅಲ್ಲದೇ ಚಿತ್ರಮಂದಿಗಳನ್ನು ಬಂದ್ ಆಗಿದ್ವು. ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದ್ದರೂ, ಚಿತ್ರಮಂದಿರಗಳಿನ್ನೂ ಓಪನ್ ಆಗಿಲ್ಲ. ಸಧ್ಯ ಸಿನಿ ಪ್ರೇಮಿಗಳಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಗುಡ್ ನ್ಯೂಸ್ ನೀಡಿದ್ದಾರೆ.
ನಿನ್ನೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೂಮ್ ಆಯಪ್ ಮೂಲಕ ಮೀಟಿಂಗ್ ಮಾಡಿ ಚಿತ್ರಮಂದಿರ ರೀ ಓಪನ್ ಮಾಡುವುದು ಹಾಗೂ ಸಂಬಂಧಿಸಿದ ಗೈಡ್‌ಲೈನ್ಸ್ ಬಗ್ಗೆ ಚರ್ಚಿಸಿದ್ದಾರೆ. ಅದ್ರಂತೆ, ಸೆಪ್ಟೆಂಬರ್ ಕೊನೇ ವಾರದಲ್ಲಿ ಚಿತ್ರಮಂದಿರಗಳು ಕಾರ್ಯ ನಿರ್ವಹಿಸಲು ಗೈಡ್‌ಲೈನ್ಸ್ ನೀಡಲಾಗುತ್ತದೆ. ಅಕ್ಟೋಬರ್ 1ರಂದು ರೀ ಓಪನ್ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಈ ವಿಚಾರದ ಬಗ್ಗೆ ವಾಣಿಜ್ಯ ಮಂಡಳಿ ಹಾಗೂ ಸಿನಿಮಾ ನಟರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎನ್ನಲಾಗ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
